ನವರಾತ್ರಿ ಹಬ್ಬದ ಹಿಂದಿರುವ ಪೂರ್ವ ಕಥೆ ಹಾಗೂ ಇತಿಹಾಸ.
ಹಿಂದೂ ಧರ್ಮದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುವುದು ರೂಢಿಯಲ್ಲಿದೆ.ಮಳೆಗಾಲ ಮುಗಿಯುತ್ತಿರುವಂತೆ ಹಬ್ಬಗಳು ಆರಂಭವಾಗುವುದು.ಹಬ್ಬವೆಂದರೆ ತುಂಬಾ ಸಂಭ್ರಮ ಹಾಗೂ ಸಡಗರದ ವಾತವರಣವಿರುವುದು.ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಸಂಪೂರ್ಣ ನಗರವೇ ವಿದ್ಯುತ್ ಬೆಳಕಿನಿಂದ ಪ್ರಜ್ವಲಿಸುತ್ತಿರುತ್ತದೆ. ನವರಾತ್ರಿಯನ್ನು ದೇಶದ ಎಲ್ಲಾ ಕಡೆಗಳಲ್ಲಿ ವಿವಿಧ ರೀತಿಯಿಂದ ಆಚರಿಸಲಾಗುತ್ತದೆ.ನವರಾತ್ರಿ ವೇಳೆ ದುರ್ಗಾ ದೇವಿಯನ್ನು ಆರಾಧಿಸಲಾಗುವುದು.ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯನ್ನು ಭಕ್ತಿ,ಶ್ರದ್ಧೆಯಿಂದ ಪೂಜಿಸಲಾಗುವುದು.
ಹಿಂದೂ ಕ್ಯಾಲೆಂಡರ್ ಪ್ರಕಾರ ಬರುವ ಅಶ್ವಿನಿ ತಿಂಗಳಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ.ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯ ನವರಾತ್ರಿಯ ಪ್ರತಿ ವರ್ಷ ಆಚರಿಸಲಾಗುವುದು.ನವರಾತ್ರಿ ವೇಳೆ ಭಜನೆ ಮಾಡಲಾಗುತ್ತದೆ.ನವರಾತ್ರಿ ಬಗ್ಗೆ ಇರುವ ದಂತಕಥೆಗಳು ಇವೆ ಮತ್ತು ದುರ್ಗಾ ದೇವಿಯ ಅಷ್ಟೋತ್ತರವನ್ನು ಪಠಿಸಬೇಕು. ನವರಾತ್ರಿಯ 9 ನೇ ದಿನ ನವಮಿಯ ದಿನ ದುರ್ಗಾ ದೇವಿಯ ಮೂರ್ತಿಯ ಜಲಸ್ಥಂಭನ ನೆರವೇರಿಸಲಾಗುವುದು.
ಮಹಿಷಾಸುರನ ನವರಾತ್ರಿಯ ಬಗ್ಗೆ ಇರುವ ದಂತಕಥೆ.
ನವರಾತ್ರಿಯ ಬಗ್ಗೆ ವಿವಿಧ ದಂತಕಥೆಗಳ ಪ್ರಕಾರ ಶಿವನ ಭಕ್ತನಾಗಿದ್ದ ಮಹಿಷಾಸುರ ಘೋರ ತಪ್ಪಸ್ಸನ್ನು ಮಾಡಿ ಶಿವನಿಂದ ಅಮರನಾಗುವ ವರ ಪಡೆಯುತ್ತಾನೆ.ಮಹಿಷಾಸುರ ಜನರನ್ನು ಹಿಂಸಿಸುತ್ತಾ ಮೂರು ಲೋಕದ ಮೇಲೆ ತನ್ನ ಸಾಮ್ರಾಜ್ಯ ಕಟ್ಟುತ್ತಾನೆ.ಸ್ವರ್ಗಲೋಕದ ದೇವಾನುದೇವತೆಗಳೆಲ್ಲರೂ ಬಂದು ಶಿವನಲ್ಲಿ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ ಆಗ ತಮ್ಮ ರಾಜ್ಯವು ಮರಳಿ ನಮಗೆ ಸಿಗಬೇಕೆಂದು ಶಿವನಲ್ಲಿ ಕೇಳಿಕೊಳ್ಳುವರು.
ಮಹಿಷಾಸುರನ ಹಿಂಸೆಯಿಂದ ಮೂರು ಲೋಕಗಳನ್ನು ರಕ್ಷಿಸಲು ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು, ಮತ್ತು ಮಹೇಶ್ವರ ಜೊತೆಯಾಗಿ ದುರ್ಗಿಯನ್ನು ಸೃಷ್ಟಿಸುವರು.ದುರ್ಗಿಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನ್ನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ.ದುರ್ಗಾ ದೇವಿಯು ಸಹ ಇದಕ್ಕೆಲ್ಲಾ ತಯಾರಾಗಿ ಒಂದು ಷರತ್ತನ್ನು ಹಾಕುತ್ತಾಳೆ ಯುದ್ಧದಲ್ಲಿ ತನ್ನ ವಿರುದ್ದ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ.
ಈ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು ಮತ್ತು ಕೊನೆಯ ದಿನವಾದ 9 ನೇ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ವಧೆ ಮಾಡಿದಳು.ಈ 9 ದಿನಗಳನ್ನು ನವರಾತ್ರಿ ಎಂದು ಕರೆಯಲಾಗುವುದು.9 ನೇ ದಿನ ಹಾಗೂ ಹತ್ತನೇ ದಿನವನ್ನು ವಿಜಯದಶಮಿ ಎಂದು ಕರೆಯಾಲಾಗುತ್ತದೆ. ಇದು ದುಷ್ಟ ಶಕ್ತಿಗಳ ನಾಶ ಮಾಡಿದ ಒಳ್ಳೆಯ ದಿನವಾಗಿದೆ.
ನವರಾತ್ರಿಯ ಇತಿಹಾಸ.
ದಂತ ಕಥೆಯ ಪ್ರಕಾರ ಹಿಮಾಲಯದ ರಾಜನಾಗಿ ದಕ್ಷನಿಗೆ ಉಮಾ ಎನ್ನುವ ಅಪೂರ್ವ ಸುಂದರಿಯಾದ ಮಗಳಿದ್ದಳು.ಇವಳು ಶಿವ ದೇವರನ್ನು ಮದುವೆಯಾಗಲು ಬಯಸಿದ್ದಳು.ಆತನನ್ನು ಓಲೈಸಿಕೊಳ್ಳಲು ಆಕೆ ಆತನನ್ನು ಪ್ರಾರ್ಥಿಸಲು ಆರಂಭಿಸಿದಳು.ಅಂತಿಮವಾಗಿ ಶಿವನ ಮನಸ್ಸನ್ನು ಗೆದ್ದು ಶಿವನನ್ನು ಮದುವೆಯಾಗಲು ಮುಂದಾದಳು.
ಶಿವ ದೇವನು ಉಮಾಳನ್ನು ಮದುವೆಯಾಗಲು ಬಂದಾಗ ಕೇವಲ ಹುಲಿ ಚರ್ಮವನ್ನು ತನ್ನ ಮೈಗೆ ಸುತ್ತಿಕೊಂಡಿದ್ದನು.ಇದರಿಂದ ದಕ್ಷನು ತೀವ್ರವಾಗಿ ಕೋಪಗೊಂಡು ಉಮಾ ಮತ್ತು ಆಕೆಯ ಪತಿಯೊಂದಿಗೆ ಯಾವುದೇ ಸಂಬಂಧವಿಟ್ಟುಕೊಳ್ಳಲು ಬಯಸಲಿಲ್ಲ.ಇದರ ನಂತರ ದಕ್ಷರಾಜನು ದೊಡ್ಡ ಯಜ್ಞವೊಂದನ್ನು ಮಾಡಲು ನಿರ್ಧರಿಸಿದ.ಇದಕ್ಕೆ ಶಿವನನ್ನು ಬಿಟ್ಟು ಎಲ್ಲರನ್ನು ಆಹ್ವಾನಿಸಿದ ಇದರಿಂದ ಕುಪಿತಳಾಗಿ ಉಮಾ ಯಜ್ಞಕುಂಡದ ಅಗ್ನಿಗೆ ಜಿಗಿದು ಸಜೀವ ದಹನವಾಗಿ ತನ್ನ ಪ್ರಾಣವನ್ನು ಕಳೆದುಕೊಂಡಳು.ಉಮಾ ಮರುಜನ್ಮ ಪಡೆದು ಮತ್ತೆ ಶಿವನನ್ನು ಮದುವೆಯಾದಳು.ಈ ದಿನ ಉಮಾ ತನ್ನ ತವರು ಮನೆಗೆ ಲಕ್ಷ್ಮೀ, ಸರಸ್ವತಿ,ಕಾರ್ತಿಕೇಯ ಮತ್ತು ಗಣೇಶ ಹಾಗೂ ಪಾರ್ವತಿಯ ಸ್ನೇಹಿತರಾದ ಜಯ ವಿಜಯರೊಂದಿಗೆ ಬರುತ್ತಾಳೆ ಎನ್ನುವ ಕಥೆ ಪ್ರತೀತಿಯಲ್ಲಿದೆ .
ರಾಮ ಮತ್ತು ರಾವಣನ ದಂತಕಥೆ.
ನವರಾತ್ರಿಯ ರಾಮಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ.ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ಶ್ರೀ ರಾಮನು ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ.ಸೀತೆಯನ್ನು ಅಪಹರಿಸಿದ್ದು ರಾವಣನನ್ನು ಬಳಿಕ ಶ್ರೀ ರಾಮನು ವಧಿಸಿದ ಒಂಬತ್ತು ದಿನಗಳ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ಶ್ರೀ ರಾಮನು ರಾವಣನನ್ನು ಅಂತಿಮ ದಿನ ವಧಿಸಿದ ಈ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ.ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ಶ್ರೀ ರಾಮನು ಗೆಲುವನ್ನು ಸಾಧಿಸುತ್ತಾನೆ.ನವರಾತ್ರಿಯ ದೀಪಾವಳಿಗೆ ನಾಂದಿಯಾಗಿದೆ.ಬೆಳಕಿನ ಹಬ್ಬ ದೀಪಾವಳಿಯು ದಸರಾ ಮುಗಿದ 20 ದಿನಗಳ ಬಳಿಕ ಬರುವುದು. ನವರಾತ್ರಿಯನ್ನು ದೇಶದೆಲ್ಲೆಡೆ ತುಂಬಾ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
