ಬಿಗ್ ಬಾಸ್ ಸೀಸನ್ 9 ಶುರುವಾಗಿದೆ. 9 ಹೊಸಬರು ಮತ್ತು 9 ಹಳೆಯ ಸ್ಪರ್ಧಿಗಳೊಂದಿಗೆ ಒಟ್ಟು 18 ಮಂದಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿದ್ದಾರೆ. ಇವೆಲ್ಲದರ ಮದ್ಯೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಜಗಳ ಶುರುವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಜಗಳ ಮಾಡುತ್ತಿದ್ದು ಎಂದರೆ ಅದು ಪ್ರಶಾಂತ್ ಸಂಭರ್ಗಿ. ಕಳೆದ ಸೀಸನ್ ನಲ್ಲೂ ಅವರು ಇದನ್ನೇ ಮಾಡಿದರು. ಇದೀಗ ಈ ಸೀಸನ್ ನಲ್ಲೂ ಕೂಡ ಅದನ್ನೇ ಮುಂದುವರೆಸಿದ್ದಾರೆ. ಹೀಗಾಗಿ ಇವರು ಆರ್ಯವರ್ಧನ್ ಗುರೂಜಿ, ದರ್ಶ್ ಮತ್ತು ರೂಪೇಶ್ ರಾಜಣ್ಣ ಜೊತೆ ಜಗಳವಾಡಿದ್ದಾರೆ.
ಹೀಗೆ ಮಾತನಾಡುತ್ತಿದ್ದ ವೇಳೆ ಆರ್ಯವರ್ಧನ್ ಗುರೂಜಿ ನಾನು ಇಲ್ಲಿಯವರೆಗೂ 10 ಲಕ್ಷ ಜನರಿಗೆ ಜ್ಯೋತಿಷ್ಯ ಹೇಳಿರಬಹುದು ಎಂದು ಹೇಳುತ್ತಾರೆ. ಪ್ರಶಾಂತ್ ಸಂಬರ್ಗಿ ಗುರುಗಳೇ ಏನೇನೋ ಮಾತನಾಡಬೇಡಿ 10 ಲಕ್ಷ ಜನ ಅಂತೆಲ್ಲಾ ಅನ್ನುತ್ತಾರೆ. ಇದರಿಂದ ಕೋಪಗೊಂಡ ಗುರೂಜಿ ಹುಟ್ಟದೇ ಇರೋರಿಗೆ ಬುದ್ಧಿ ಕಲಿಸೋಕೆ ಗೊತ್ತಿಲ್ವಾ? ಎಡಗಾಲಲ್ಲಿ ಗುದ್ದು ಹೋಗ್ತೀನಿ ಎಂದು ಹೇಳುತ್ತಾರೆ. ನಂತರ ಇವರಿಬ್ಬರ ಮದ್ಯೆ ಜಗಳ ಶುರುವಾಗುತ್ತದೆ. ಮನೆಯ ಸದಸ್ಯರು ಬಂದು ಜಗಳ ನಿಲ್ಲಿಸಿದರು.
ಇದಲ್ಲದೆ ದರ್ಶ್ ಅವರ ಜೊತೆ ಕೂಡ ಪ್ರಶಾಂತ್ ಜಗಳವಾಡಿದ್ದಾರೆ. ಕಳೆದ ಸೀಸನ್ನಲ್ಲಿ ಹೆಣ್ಮಕ್ಕಳ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಸಂಬರ್ಗಿ ಟೀಕೆಯಾಗಿದ್ದು ಎಲ್ಲರಿಗೂ ಗೊತ್ತಿದೆ. ಇದೆ ವಿಚಾರವಾಗಿ ಪ್ರಶಾಂತ್ ದಿವ್ಯಾ ಉರುಡುಗ ಜೊತೆ ಚೆನ್ನಾಗಿ ಇದ್ದು, ಮನೆಯಿಂದ ಒಗ್ಗಟ್ಟಾಗಿ ಹೊರಗೆ ಬಂದು ಇಲ್ಲಿ ಪಬ್ಲಿಕ್ ಆಗಿ ಮಾನಹಾನಿ ಮಾಡುವಂತಹ ಹೇಳಿಕೆಗಳನ್ನು ಕೊಟ್ದಿದ್ದಾರೆ ಎಂದು ದರ್ಶ್ ಆರೋಪಿಸಿದ್ದಾರೆ. ಇದಲ್ಲದೆ ಹಿಂದಿನಿಂದ ಇರಿಯುವ ಕೆಲಸವನ್ನು ಸಂಬರ್ಗಿ ಮಾಡಿದ್ದಾರೆ ಎಂದು ಸಹ ಆರೋಪಿಸಿದ್ದರು.
ಇವರಿಬ್ಬರ ನಂತರ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಪ್ರಶಾಂತ್ ವಿರುದ್ಧ ಸಿಟ್ಟಾಗಿದ್ದಾರೆ. ಇದಲ್ಲದೆ ನಾನು ಸಾಲ ಬಡ್ಡಿ ಸಮೇತ ಕೊಡ್ತೀನಿ ಎನ್ನುವ ಮಾತು ಕೂಡ ಹೇಳಿದ್ದು, ಇದು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದನ್ನು ಕಾದು ನೋಡಬೇಕು. ಆದರೆ ಪ್ರಶಾಂತ್ ಅವರಿಗೆ ಸರಿಯಾಗಿ ಟಾಂಗ್ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
