ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಚಾರಣೆಗಳನ್ನು ಇಂದು (ಸೆಪ್ಟೆಂಬರ್ 27) ನೇರ ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ಸಾಮಾನ್ಯ ಜನರು ಕೂಡ ತಮ್ಮ ಮನೆಯಲ್ಲಿ ಕುಳಿತು ಸುಪ್ರೀಂ ಕೋರ್ಟ್ ವಿಚಾರಣೆಯ ಕಲಾಪಗಳನ್ನು ವೀಕ್ಷಿಸಿಬಹುದಾಗಿದೆ. ಸದ್ಯ ಸಾಂವಿಧಾನಿಕ ವಿಷಯಗಳ ನೇರ ಪ್ರಸಾರ ಮಾತ್ರ ನಡೆಯಲಿದೆ.
ಸುಪ್ರೀಂಕೋರ್ಟ್ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು 2018 ರಲ್ಲಿ ಶಿಫಾರಸು ಮಾಡಲಾಗಿತ್ತು. ಮೂರು ವರ್ಷಗಳ ನಂತರ ಮೊದಲ ಬಾರಿಗೆ ವಿಚಾರಣಾ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಕಳೆದ ಆಗಸ್ಟ್ 26ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠದ ವಿಚಾರಣೆಯನ್ನು ಮೊಟ್ಟ ಮೊದಲ ಬಾರಿಗೆ ನೇರಪ್ರಸಾರ ಮಾಡಲಾಗಿತ್ತು. ಆದರೆ ಅದು ಪ್ರಾಯೋಗಿಕವಾಗಿತ್ತು.
ವಿಚಾರಣೆಯನ್ನ ವೀಕ್ಷಿಸಲು ಜನರು ಸುಪ್ರೀಂ ಕೋರ್ಟ್ನ ಅಧಿಕೃತ ವೆಬ್‌ಸೈಟ್ https://webcast.gov.in/scindia/ ಗೆ ಲಾಗಿನ್ ಆಗಬೇಕು. ಆದರೆ, ಇದು ಇಂದಿಗೆ ಮಾತ್ರ ಸೀಮಿತವೇ ಅಥವಾ ವಿದ್ಯುಕ್ತ ಪೀಠದ ವಿಚಾರಣೆಯ ಪ್ರಸಾರವನ್ನು ಪ್ರಾಯೋಗಿಕ ಯೋಜನೆಯಾಗಿ ನಡೆಸಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
