ಅಷ್ಠಮಿ ಹಾಗೂ ನವಮಿಯ ದಿನ ಆಚರಿಸುವ ಕನ್ಯಾ ಪೂಜೆಯ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕುತೂಹಲಕಾರಿ ಸಂಗತಿಗಳು.
ಕನ್ಯಾ ಪೂಜೆ ಅಥವಾ ಕುಮಾರಿ ಪೂಜೆಯನ್ನು ನವರಾತ್ರಿಯ ಆಚರಣೆಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.ಇದನ್ನು ನವರಾತ್ರಿಯಲ್ಲಿ ಮುಖ್ಯ ದಿನಗಳಾದ ಅಷ್ಠಮಿ ಮತ್ತು ನವಮಿಯಂದು ಆಚರಿಸಲಾಗುತ್ತದೆ.ಕನ್ಯಾ ಪೂಜೆಯನ್ನು ಕಂಜಕ ಪೂಜಾ ಎಂದು ಸಹ ಕರೆಯಲಾಗುತ್ತದೆ.ಈ ಆಚರಣೆಯು ಒಳಗೊಂಡಿರುವ ಪ್ರಕಾರ ಭಕ್ತಾದಿಗಳು ಬಂದು ಕನ್ಯೆ 6 ರಿಂದ 12 ವರ್ಷ ವಯಸ್ಸಿನೊಳಗಿರುವ ಚಿಕ್ಕ ಹುಡುಗಿಯರನ್ನು ಕನ್ಯಾ ಪೂಜೆಗೆ ಆಹ್ವಾನ ಮಾಡಲಾಗುವುದು. ಚಿಕ್ಕ ಹುಡುಗಿಯರನ್ನು ದುರ್ಗಿಯ ರೂಪವೆಂದು ಭಕ್ತಾದಿಗಳು ದೇವಿಯ ಮೂರ್ತಿಯ ಮುಂದೆ ಕನ್ಯಾ ಪೂಜೆಯನ್ನು ಆಚರಣೆ ಮಾಡುತ್ತಾರೆ.
ಯಾಕೆ ಚಿಕ್ಕ ಮಕ್ಕಳನ್ನು ಮಾತ್ರ ಕನ್ಯಾ ಪೂಜೆಯಲ್ಲಿ ಪೂಜಿಸಲಾಗುವುದು ?
ಚಿಕ್ಕ ಮಕ್ಕಳು ಒಂದು ವರ್ಷದಿಂದ 12 ವರ್ಷದ ಒಳಗೆ ಇರುವ ಚಿಕ್ಕ ಹುಡುಗಿಯರನ್ನು ಕನ್ಯೆಯರು ಎಂದು ಕರೆಯಲಾಗುತ್ತದೆ.ಯಾರು ವಯಸ್ಕರು ಅಂದರೆ ಯವನ್ನಾವಸ್ಥೆಯನ್ನು ತಲುಪಿರುವುದಿಲ್ಲವೋ ಅವರನ್ನು ಕನ್ಯೆಯರು ಎಂದು ಪರಿಗಣಿಸಿದ್ದಾರೆ. ಅಂತವರಿಗೆ ಕನ್ಯಾ ಪೂಜೆಯನ್ನು ಮಾಡಲಾಗುತ್ತದೆ.ಕನ್ಯೆಯನ್ನು ಕುಮಾರಿಯೆಂದು ಅವರ ವಯಸ್ಸಿನ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಒಂದು ವರ್ಷ ವಯಸ್ಸಿನೊಳಗೆ ಇರುವ ಪುಟ್ಟ ಬಾಲಕಿಯರು ಅಂದರೆ ….
ಮೊದಲನೇ ವರ್ಷ- ಸಂಧ್ಯಾ.
ಎರಡನೇ ವರ್ಷ- ಸರಸ್ವತಿ.
ಮೂರನೇ ವರ್ಷ- ತ್ರಿದಮೂರ್ತಿ .
ನಾಲ್ಕನೇ ವರ್ಷ-ಕಾಳಿಕ.
ಐದನೇ ವರ್ಷ- ಸುಭಗ.
ಆರನೇ ವರ್ಷ- ಉಮಾ.
ಏಳನೇ ವರ್ಷ -ಮಾಲಿನಿ.
ಎಂಟನೇ ವರ್ಷ- ಕುವುಜಿಕ.
ಒಂಬತ್ತನೇ ವರ್ಷ- ಕಾಳ ಸಂದರ್ಭ.
ಹತ್ತನೇ ವರ್ಷ- ಅಪರಾಜಿತ.
ಹನ್ನೊಂದನೇ ವರ್ಷ- ರುದ್ರಾಣಿ.
ಹನ್ನೆರಡನೇ ವರ್ಷ- ಭೈರವಿ.
ಹದಿಮೂರನೇ ವರ್ಷ- ಮಹಾಲಕ್ಷ್ಮೀ.
ಕನ್ಯಾ ಪೂಜೆಯನ್ನು ಮುಖ್ಯ ಆಚರಣೆಯಾಗಿ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ಮಹಾ ನವಮಿಯ ದಿನ ಆಚರಿಸಲಾಗುವುದು.
ಕನ್ಯಾ ಪೂಜೆಯ ಮಹತ್ವ.
ಭಕ್ತಾದಿಗಳು ಎಷ್ಟು ಹೆಣ್ಣು ಮಕ್ಕಳನ್ನು ಬೇಕಾದರೂ ಮನೆಗೆ ಕರೆತರಬಹುದು.ಪುರಾತನ ನಂಬಿಕೆ ಮತ್ತು ಸಂಪ್ರದಾಯದ ಪ್ರಕಾರ 1,3,5,7, ಅಥವಾ 9 ಹುಡುಗಿಯರನ್ನು ಮನೆಗೆ ಕರೆತರಬಹುದು.
ಈ ಅಚರಣೆಯಲ್ಲಿ ಹುಡುಗಿಯರನ್ನು ಕರೆತರುವ ಹಿಂದೆಯೂ ಕಾರಣ ಇದೆ…..
ಒಂದು ಹುಡುಗಿಯನ್ನು ಪೂಜಿಸಿದರೆ ಐಶ್ವರ್ಯ ಪ್ರಾಪ್ತಿಯಾಗುವುದು.
ಎರಡು ಹುಡುಗಿಯರನ್ನು ಪೂಜಿಸಿದರೆ ಭೋಗ ಮತ್ತು ಮೋಕ್ಷ ಪ್ರಾಪ್ತಿಯಾಗುವುದು.
ಮೂರು ಹುಡುಗಿಯರನ್ನು ಪೂಜಿಸಿದರೆ ಧರ್ಮ,ಅರ್ಥ,ಕಾಮವನ್ನು ಒದಗಿಸುತ್ತದೆ.
ನಾಲ್ಕು ಹುಡುಗಿಯರನ್ನು ಪೂಜಿಸಿದರೆ ರಾಜ್ಯಪದ ಅಂದರೆ ರಾಜ್ಯದ ಅಧಿಕಾರ ದೊರೆಯುವುದು.
ಐದು ಹುಡುಗಿಯರನ್ನು ಪೂಜಿಸಿದರೆ ವಿದ್ಯೆಯನ್ನು ಅಂದರೆ ಜ್ಞಾನವನ್ನು ಹೆಚ್ಚಿಸುತ್ತದೆ.
ಆರು ಹುಡುಗಿಯರನ್ನು ಪೂಜಿಸಿದರೆ ಆರು ತರದ ವಿಶೇಷ ಸಿದ್ದಿಗಳು ಲಭಿಸುತ್ತವೆ.
ಏಳು ಹುಡುಗಿಯರನ್ನು ಪೂಜಿಸಿದರೆ ರಾಜ್ಯವನ್ನು ಗಳಿಸಲು ಸಹಾಯ ಮಾಡುತ್ತದೆ.ಅಂದರೆ ರಾಜ್ಯವನ್ನು ಆಳುವ ಅಧಿಕಾರ ದೊರೆಯುವುದು.
ಎಂಟು ಹುಡುಗಿಯರನ್ನು ಪೂಜಿಸಿದರೆ ನಮ್ಮ ಸಂಪತ್ತು ಹೆಚ್ಚಾಗಿ ವೃದ್ಧಿಸುವುದು.
ಒಂಬತ್ತು ಹುಡುಗಿಯರನ್ನು ಪೂಜಿಸಿದರೆ ಪ್ರಭುತ್ವ ಮತ್ತು ವೃತ್ತಿಯಲ್ಲಿ ಒಡೆತನ ದೊರೆಯುವುದು.
ಕನ್ಯಾ ಪೂಜೆಯ ಮಹತ್ವ….
ಕನ್ಯಾ ಪೂಜೆಯನ್ನು ಮಾಡುವ ಭಕ್ತಾದಿಗಳು ಚಿಕ್ಕ ಹುಡುಗಿಯರನ್ನು ತಮ್ಮ ಮನೆಗೆ ಕರೆತರುವ ಮುನ್ನ.ಪ್ರಸಾದವನ್ನು ತಯಾರಿಸಿ ಇಟ್ಟಿರುತ್ತಾರೆ (ಪೂರಿ, ಕಡ್ಲೆಕಾಳಿನ ಪಲ್ಯ ಮತ್ತು ಹಲ್ವಾ)
ಕನ್ಯೆಯರನ್ನು ಕರೆತರುವ ಮುನ್ನ ತಮ್ಮ ಮನೆಯನ್ನು ಸ್ವಚ್ಛ ಗೊಳಿಸಿ ಅಲಂಕರಿಸುತ್ತಾರೆ.
ಚಿಕ್ಕ ಹುಡುಗಿಯರನ್ನು ಮನೆಯೊಳಗೆ ಬರ ಮಾಡಿಕೊಳ್ಳುವ ಮುನ್ನ ಅವರ ಪಾದಗಳನ್ನು ಶುದ್ದವಾದ ನೀರಿನಲ್ಲಿ ತೊಳೆದು ಬರ ಮಾಡಿಕೊಳ್ಳುವರು.
ಹುಡುಗಿಯರನ್ನು ಸರತಿಯಂತೆ ಸಾಲಿನಲ್ಲಿ ಅವರು ಹಾಸಿರುವ ಬಟ್ಟೆಯ ಮೇಲೆ ಕುಳಿತುಕೊಳ್ಳಲು ಹೇಳುತ್ತಾರೆ .
ಭಕ್ತಾದಿಗಳು ಕನ್ಯೆಯರ ಹಣೆಗೆ ಕುಂಕುಮವಿಟ್ಟು ಕೆನ್ನೆಗೆ ಹರಿಷಿನ ಹಚ್ಚಿ ಪೂಜೆ ಮಾಡಿ ನಮಸ್ಕರಿಸಿ.ನಂತರ ಊಟ ಮಾಡಲು ಬಡಿಸುವರು.
ಆಹಾರವನ್ನು ಸ್ವೀಕರಿಸಿದ ನಂತರ ಭಕ್ತರು ಅವರಿಗೆ ಉಡುಗೊರೆ ಮತ್ತು ದಕ್ಷಿಣೆಯನ್ನು (ಹಣ) ಕೊಡುತ್ತಾರೆ.ಕೆಲವು ಜನರು ಉಡುಗೊರೆಯಾಗಿ ಬಟ್ಟೆಗಳನ್ನು ಅಥವಾ ಗೊಂಬೆಗಳನ್ನು ಸಹ ಕೊಡುತ್ತಾರೆ.
ಆ ದಿನದ ಭಕ್ಷ್ಯ ಭೋಜನಗಳು…
ಕಡ್ಲೆಕಾಳಿನ ಪಲ್ಯ, ಪೂರಿ, ಹಲ್ವಾ ಕೆಲವು ಜನರು ಬೇರೆ ಆಹಾರವನ್ನು ಅದರಲ್ಲಿ ಸೇರಿಸುತ್ತಾರೆ ಅವು ಹಾಲುಗೆಡ್ಡೆ ಪಲ್ಯ,ಬಟಾಣಿ ಮತ್ತು ತರಕಾರಿಗಳು.
ನವರಾತ್ರಿಯ 9 ನೇ ದಿನವನ್ನು ಮಹಾ ನವಮಿ,ದುರ್ಗಾ ಪೂಜೆ .ನವರಾತ್ರಿಯ ಕೊನೆಯ ದಿನ ಸರಸ್ವತಿಯನ್ನು ವಿಸರ್ಜನೆ ಮಾಡಿ ಪೂಜೆಯನ್ನು ಕೊನೆಗೊಳಿಸಲಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
