fbpx
ಸಮಾಚಾರ

ನವರಾತ್ರಿ ಹಬ್ಬದಲ್ಲಿ ಈರುಳ್ಳಿ-ಬೆಳ್ಳುಳ್ಳಿ ತಿನ್ನಬಾರದಂತೆ! ಯಾಕೆ ಗೊತ್ತಾ?

‘ನವರಾತ್ರಿಯ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ ಯಾಕೆ ನಿಷಿದ್ಧ ಗೊತ್ತಾ?

 

 

 

ಯಾಕೆ ನವರಾತ್ರಿಯ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಆಹಾರ ತಯಾರಿಸುವಾಗ ಬಳಸಬಾರದು.ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಮತ್ತು ಯೋಗ ಸಿದ್ದಾಂತದಲ್ಲಿ ಇದರ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಕಂಡು ಹಿಡಿದಿದ್ದಾರೆ. ನಾವು ಯಾಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನವರಾತ್ರಿಯ ಸಮಯದಲ್ಲಿ ತಿನ್ನಬಾರದು ? ಎಂದು ವೈಜ್ಞಾನಿಕವಾಗಿ ಕಾರಣಗಳನ್ನು ಕಂಡು ಹಿಡಿದಿದ್ದಾರೆ. ಹಿಂದೂ ಧರ್ಮದ ಪುರಾಣ ಗ್ರಂಥಗಳಲ್ಲಿ ಅವು ಹೇಗೆ ನಮ್ಮ ದೈಹಿಕ ಶಕ್ತಿಗೆ ಮತ್ತು ದೇವರಿಗೆ ಸಂಬಂಧಕ್ಕೆ ಭಂಗ ತರುತ್ತವೆ ಎಂದು ಸಹ ಹೇಳಿದ್ದಾರೆ. ಭಾರತೀಯ ಚಿಕಿತ್ಸಾ ಪದ್ಧತಿಯಾದ ಆಯುರ್ವೇದ ಮತ್ತು ಯೋಗದಲ್ಲಿಯೂ ಸಹ ಹೇಳಿದ್ದಾರೆ.

 

 

ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡು ತಾಮಸಿಕ ಆಹಾರಗಳು.

 

 

 
ನಿಜ ಸಂಗತಿ ಏನೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಇವೆರಡು ಸಹ ತಾಮಸಿಕ ಆಹಾರಗಳು. ದೇವತೆಗಳು ಸಮುದ್ರ ಮಂಥನ ಮಾಡುವ ಸಮಯದಲ್ಲಿ ಅಮೃತವೂ ದೊರೆಯುವುದು.ಆ ಅಮೃತವನ್ನು ಕುಡಿದವರು ಅಮರರಾಗುವರು ಎಂದು ದೇವತೆಗಳು ಅಮೃತವನ್ನು ಅಸುರರಿಗೆ ಕೊಡಬಾರದು ಎಂದು ನಿರ್ಧರಿಸಿದರು.ಹೀಗೆ ದೇವತೆಗಳಿಗೆ ಮಾತ್ರ ಅಮೃತವನ್ನು ಕೊಡಲು ನಿರ್ಧರಿಸಿದಾಗ ಅಸುರನಾದ ಸ್ವರಭಾನು ಎಂಬುವನು ಮೋಸದಿಂದ ದೇವತೆಗಳ ವೇಷ ಧರಿಸಿ ಅಮೃತವನ್ನು ಪಡೆದು ಸ್ವೀಕರಿಸಿ ಅಮೃತಪಾನ ಮಾಡಿದನು.

 

 
ಅಮೃತವನ್ನು ಮೋಸದಿಂದ ಸ್ವೀಕರಿಸಿ ಕುಡಿದ ಸ್ವರಭಾನು ಎಂಬ ಅಸುರನಾದ ರಾಕ್ಷಸನು ಅಮರತ್ವವನ್ನು ಪಡೆದು ವಿಶ್ವದ ವಿನಾಶಕ್ಕೆ ಕಾರಣನಾಗುತ್ತಾನೆ ಎಂದು ಅರಿತ ಶ್ರೀ ವಿಷ್ಣುವು ಸ್ವರಭಾನು ಎನ್ನುವ ರಾಕ್ಷಸನನ್ನು ತನ್ನ ಸುದರ್ಶನ ಚಕ್ರದಿಂದ ಅವನ ದೇಹವನ್ನು ಕತ್ತರಿಸಿ ಎರಡು ಬಾಗಗಳನ್ನಾಗಿ ಕತ್ತರಿಸುತ್ತಾನೆ.ಹೀಗೆ ಕತ್ತರಿಸಿದ ದೇಹವು ತಲೆಯ ಭಾಗ ರಾಹುವಾಗಿ ಉಳಿದ ದೇಹದ ಭಾಗ ಕೇತುವೆಂದು ಹಾಗೆ ಅಮರತ್ವವನ್ನು ಪಡೆದು ಜೀವಂತವಾಗಿಯೇ ಇರುತ್ತದೆ.ಹೀಗೆ ವಿಷ್ಣುವು ಅವನ ತಲೆಯನ್ನು ಕತ್ತರಿಸಿದ ಸಂದರ್ಭದಲ್ಲಿ ಕೆಲವು ರಕ್ತದ ಹನಿಗಳು ಭೂಮಿಯ ಮೇಲೆ ಬಿದ್ದಾಗ ಅವೇ ತರಕಾರಿಗಳಾದ ಈರುಳ್ಳಿ ಮತ್ತು ಬೆಳ್ಳುಳ್ಳಿಯಾಗಿ ಬೆಳೆದವು.ಯೋಗ ಸಿದ್ಧಾಂತದ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿ ಇವೆರಡು ರಾಹು ಕೇತುವಿನ ಅಸುರ ಸಂತತಿಗಳಾಗಿ ಆ ರಕ್ತದ ಮೂಲಕ ಆವತರಿಸಿದವು.

 

 

 
ಇದೇ ಕಾರಣಕ್ಕಾಗಿಯೇ ಹಿಂದೂ ಧರ್ಮ ಗ್ರಂಥಗಳಲ್ಲಿ ಮತ್ತು ವೇದಗಳಲ್ಲಿ ಯಾರೂ ಕೂಡ ನವರಾತ್ರಿಯ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸಬಾರದು.ನವರಾತ್ರಿಯ ಸಮಯದಲ್ಲಿ ನಾವು ದೇವರ ಜೊತೆ ಸಂಪರ್ಕ ಹೊಂದಲು ಪೂಜೆ ವ್ರತಗಳನ್ನು ಮಾಡುತ್ತೇವೆ. ನಾವು ಈ ರೀತಿ ಅಸುರರ ಗುಣಗಳನ್ನು ಹೊಂದಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿಂದರೆ ದೇವರ ಜೊತೆ ಸಂಪರ್ಕ ಹೊಂದಲು ಸಾಧ್ಯ.

 


ನವರಾತ್ರಿಯ ಒಂಬತ್ತು ದಿನಗಳು ಪೂಜೆ ಭಕ್ತಿಗೆಂದೇ ಮೀಸಲಿಡಲಾಗಿದೆ.ದುರ್ಗಾ ದೇವಿಯನ್ನು ನಮ್ಮೊಳಗಿರುವ ಶಕ್ತಿಯನ್ನು ಜಾಗೃತಗೊಳಿಸುತ್ತಾಳೆ.ಆದರೆ ಜಡತ್ವವಿರುವ ಆಹಾರ ಪದಾರ್ಥಗಳನ್ನು ತಾಮಸಿಕ ಆಹಾರಗಳನ್ನು ಸೇವಿಸಿದರೆ ನಮ್ಮ ಮನಸ್ಸು ನಿದ್ರೆಯಿಂದ ಆವರಿಸಿರುವ ಮನಸ್ಸು ದೈವೀಕ ಶಕ್ತಿಯನ್ನು ಜಾಗೃತಗೊಳಿಸಲು ಹೇಗೆ ಸಾಧ್ಯವಾಗುತ್ತದೆ.
ನವರಾತ್ರಿಯು ಒಂಬತ್ತು ದಿನಗಳ ಕಾಲ ಉಪವಾಸ ವ್ರತವನ್ನು ಮಾಡಿದರೆ ಎಂದಿಗೂ ಕೂಡ ಕೋಣೆಯಾಗದಂತಹ ಅನೇಕ ಲಾಭಗಳನ್ನು ಹೊತ್ತು ತರುವುದು.ದುರ್ಗಾ ದೇವಿಯು ಕರುಣಿಸುವಳು ಈತರದ ಒಂದು ಪ್ರಕೃತಿ ಸ್ವಭಾವವನ್ನು ಹೊತ್ತು ತಂದಿದ್ದು ಇದು ನಮಗೆ ಪ್ರಕೃತಿಯ ಕಾಣಿಕೆಯಾಗಿದೆ.ಆದ್ದರಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನವರಾತ್ರಿಯ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದಲ್ಲ ಮತ್ತು ಅದು ನಮಗೆ ಜಡತ್ವವನ್ನು ಉಂಟು ಮಾಡುವುದು ನಾವು ಮಾಡುವ ಉಪವಾಸ ವ್ರತಕ್ಕೆ ಭಂಗ ತರುವುದು. ಆದ್ದರಿಂದ ಇವುಗಳ ಸೇವನೆ ನಿಷಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top