ದುರ್ಗಾ ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಸ್ಕಂದಮಾತಾ ದೇವಿಯನ್ನು ನವರಾತ್ರಿಯ ಐದನೇ ದಿನದಂದು ಪೂಜಿಸಲಾಗುತ್ತದೆ..ನವರಾತ್ರಿಯಲ್ಲಿ ಸ್ಕಂದಮಾತ ಳದ್ದು 5ನೇ ರೂಪ. ತಾರಕಾಸುರ ಎನ್ನುವ ರಾಕ್ಷಸನನ್ನು ಸಂಹಾರ ಮಾಡುವುದಕ್ಕೆ ದೇವಿ ಸ್ಕಂದಳಿಗೆ ಜನ್ಮ ಕೊಡುತ್ತಾಳೆ. ಅದಕ್ಕಾಗಿಯೇ ಈತನನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ.
ಸಿಂಹ ರೂಡೆಯಾಗಿರುವ ಶ್ವೇತವರ್ಣೆಗೆ 4 ಭುಜಗಳು, ಎರಡು ಕೈಗಳಲ್ಲಿ ಕಮಂಡಲಗಳಿವೆ, ಬಲತೊಡೆಯ ಮೇಲೆ ಬಾಲರೂಪಿಯಾದ ಸ್ಕಂದ ಕುಳಿತಿದ್ದಾನೆ. ಸ್ಕಂದಮಾತಳದ್ದು ಕರುಣೆ ತುಂಬಿದ ತಾಯಿಯ ಸುಂದರ ರೂಪ.ಸ್ಕಂದನ ತಾಯಿಯಾಗಿರುವ ಸ್ಕಂದ ಮಾತೆ ಮಾತೃಹೃದಯಿ. ಭಕ್ತರು ಈ ತಾಯಿಯ ಮಂತ್ರವನ್ನು ಜಪಿಸಿದರೆ ಶೀಘ್ರ ಫಲಗಳನ್ನು ಪಡೆಯಬಹುದು. ನವರಾತ್ರಿಯ ಪೂಜೆಯಲ್ಲಿ 5ನೇ ದಿನದ ಮಹತ್ವದ ಕುರಿತು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಈ ದಿನ ಸ್ಕಂದಮಾತಾ ಪೂಜೆಯಿಂದ ಆದಿಶಕ್ತಿಯ ಸಂಪೂರ್ಣ ಕೃಪೆ ಮತ್ತು ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಸ್ಕಂದಮಾತಾಳ ಆರಾಧನೆಯ ಫಲಗಳು ವಿಶೇಷವಾಗಿವೆ…ಈಕೆ ತಪ್ಪು ಮಾಡಿದ ತನ್ನ ಭಕ್ತರನ್ನು ಬೇಗ ಕ್ಷಮಿಸುತ್ತಾಳೆ. ಇವಳ ಆರಾಧನೆಯಿಂದ ಪರಮ ಶಾಂತಿ, ಸುಖ, ಪ್ರಾಪ್ತಿಯಾಗುತ್ತದೆ.ಈಕೆಯನ್ನು ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಇವಳನ್ನು ಪೂಜಿಸುವವರಿಗೆ ಮುಖದಲ್ಲಿ ಸಾತ್ವಿಕ ಕಳೆ ಇರುತ್ತದೆ. ನವರಾತ್ರಿಯ 5ನೇ ದಿನ ಸಾಧಕನ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಸುತ್ತದೆ. ಇವರನ್ನು ಸ್ಕಂದಮಾತ ಆರಾಧನೆಯಿಂದ ಮಾಡುವ ಸಾಧಕನಿಗೆ ಮನಸ್ಸಿನ ಮೇಲೆ ಮಾನಸಿಕ ಹಿಡಿತವನ್ನು ಸಾಧಿಸುತ್ತಾನೆ. ಮನಸ್ಸು ದೇವಿಯಲ್ಲಿ ತಲ್ಲೀನವಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
