ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೊದಲು ಸ್ನೇಹಿತರಾಗಿ ನಂತರ ಇವರ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯಾದ ಜೋಡಿಗಳಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜೋಡಿ ಕೂಡ ಒಂದು. ಇವರಿಬ್ಬರ ಮದ್ಯೆ ಸುಮಾರು 12 ವರ್ಷಗಳ ವಯ್ಯಸ್ಸಿನ ಅಂತರವಿದೆ. ಇವೆಲ್ಲದರ ನಡುವೆ ನಿವೇದಿತಾ ಎಲ್ಲಿಗಾದರೂ ಹೋದ್ರು ಅಲ್ಲಿ ಜನರು ಇವರನ್ನು ನಿಮಗೆ ಮಕ್ಕಳು ಯಾವಾಗ ಎಂದು ಕೇಳುತ್ತಿದ್ದರು. ಇದೀಗ ಈ ವಿಷಯದ ಕುರಿತು ನಿವೇದಿತಾ ಮೊದಲ ಬಾರಿಗೆ ಪ್ರತಿಕ್ರಿಯೆನೀಡಿದ್ದಾರೆ.
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಪರಸ್ಪರ ಪ್ರೀತಿಸಿ ಮದುವೆಯಾದರು. ಇದಾದ ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಬ್ಬರು ತಮ್ಮದೇ ಪ್ರಪಂಚದಲ್ಲಿ ಮುಳುಗಿದ್ದರು. ಒಂದು ಕಡೆ ಚಂದನ್ ರಾಪ್ ಸಾಂಗ್ ಮಾಡುತ್ತ ಮತ್ತೆ ಕೆಲವು ಸಿನಿಮಾಗಳಿಗೆ ಮ್ಯೂಸಿಕ್ ಡೈರೆಕ್ಟಾರ್ ಆಗಿ ಕೆಲಸ ಮಾಡಿದರು. ಇನ್ನು ನಿವೇದಿತಾ ಗೌಡ ಅವರು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅದರಲ್ಲೂ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಮತ್ತಷ್ಟು ಪ್ರಸಿದ್ಧಿಯಾದರು. ಆದರೆ ಇವೆಲ್ಲದರ ಮದ್ಯೆ ಅಭಿಮಾನಿಗಳಿಗೆ ಇಲ್ಲಿಯವರೆಗೂ ಈ ಜೋಡಿ ಶುಭ ಸುದ್ದಿ ನೀಡಿಲ್ಲ ಎಂಬ ಬೇಸರವಿತ್ತು. ಹೀಗಾಗಿ ನಿವೇದಿತಾ ಗೌಡ ಎಲ್ಲಿ ಹೋದರು ಅಭಿಮಾನಿಗಳು ನಿಮಗೆ ಮಗು ಯಾವಾಗ ಎಂದು ಪ್ರಶ್ನಿಸುತ್ತಲೇ ಇದ್ದರು. ಹೀಗಾಗಿ ಇದರಿಂದ ಬೇಸರಗೊಂಡ ನಿವೇದಿತಾ ಮುಕ್ತವಾಗಿ ಇದರ ಬಗ್ಗೆ ಮಾತನಾಡಿದ್ದಾರೆ.
ಸದ್ಯಕ್ಕೆ ನಮಗೆ ಮಕ್ಕಳಾಗುವುದಿಲ್ಲ. ನಾನು ಮತ್ತು ಚಂದನ್ ನಮ್ಮ ಕೆರಿಯರ್ ನಲ್ಲಿ ಬಿಜಿಯಾಗಿದ್ದೇವೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಮತ್ತು ಗುರಿಯನ್ನು ಹೊಂದಿದ್ದೇವೆ ಮಕ್ಕಳು ಮಾಡಿಕೊಳ್ಳುವಂತಹ ಯೋಚನೆಯನ್ನು ನಾವು ಮಾಡಿಲ್ಲ ನಮ್ಮ ಈ ನಿರ್ಧಾರಕ್ಕೆ ಕುಟುಂಬದವರ ಒಪ್ಪಿಗೆಯು ಕೂಡ ಇದೆ ಹಾಗಾಗಿ ಕುಟುಂಬದವರಾಗಲಿ ಹಾಗೂ ಚಂದನಾಗಲಿ ನಾನಾಗಲಿ ಮಗುವಿನ ಬಗ್ಗೆ ಇನ್ನೂ ಕೂಡ ಯೋಚನೆ ಮಾಡಿಲ್ಲ. ಅಷ್ಟೇ ಅಲ್ಲದೆ ದಯವಿಟ್ಟು ಇನ್ನು ಮುಂದೆ ಮಗು ಯಾವಾಗ ಮಾಡಿಕೊಳ್ಳುತ್ತೀರಾ ಮಗುವಿನ ನಿರೀಕ್ಷೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳಬೇಡಿ ಎಂದು ಅಭಿಮಾನಿಗಳಿಗೆ ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
