ಇತ್ತೀಚಿಗೆ ಸಿನಿಮಾ ರಂಗದ ಹಲವು ಗಣ್ಯ ವ್ಯಕ್ತಿಗಳು ನಿಧನರಾಗುತ್ತಿರುವ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ. ಅದರಲ್ಲೂ ಹೆಚ್ಚಾಗಿ ಬಾಲಿವುಡ್ ನ ಕಲಾವಿದರು ನಿಧನರಾಗುತ್ತಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ನಟ ಅರುಣ್ ಬಾಲಿ (79) ನಿಧನರಾಗಿದ್ದಾರೆ.
ಅರುಣ್ ಬಾಲಿ ಅವರು ಕಿರುತೆರೆಯಲ್ಲದೆ ಹಲವಾರು ಧಾರಾವಾಹಿಯಲ್ಲಿ ಸಹ ನಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Actor Arun Bali expired today morning at 4.30 am in Mumbai.
May God bless the departed soul.🙏🙏 💔 pic.twitter.com/UQ4eRIdNxx— Urban Asian (@UrbanAsian) October 7, 2022
ಕೇವಲ 79 ವಯಸ್ಸಿನಲ್ಲಿ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ಇವರು ನಟಿಸಿದ್ದಾರೆ. ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಇವರ ನಟನೆಯ ಕೊನೆಯ ಸಿನಿಮಾ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಇವರು ವಿಶೇಷ ಪಾತ್ರವನ್ನು ನಿರ್ವಹಿಸಿದ್ದರು. ಇವರ ಪಾತ್ರಕ್ಕಾಗಿ ಹಲವಾರು ಅಭಿಮಾನಿ ಬಳಗವನ್ನು ಸಹ ಸಂಪಾದಿಸಿದ್ದಾರೆ. ಅರುಣ್ ಬಾಲಿ ನಿಧನದ ಸುದ್ದಿ ತಿಳಿಯುತ್ತಿದಂತೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. ಅಮಿರ್ ಖಾನ್ ಇಂದ ಹಿಡಿದು ಹಲವು ಸೆಲೆಬ್ರಿಟಿಗಳು ಬಾಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
