fbpx
ಸಮಾಚಾರ

ತಡವಾಗಿ ಬಂದ ಝೊಮ್ಯಾಟೋ ಡೆಲಿವರಿ ಬಾಯ್ ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ! ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ಲೈನ್ ಫುಡ್ ಡೆಲಿವರಿಯ ಮೊರೆ ಹೋಗುತ್ತಿದ್ದಾರೆ. ಕೆಲವೊಂದು ಸಲ ಕೆಲಸದ ಒತ್ತಡ ಇಲ್ಲವೇ ಹಲವಾರು ಕಾರಣಗಳಿಂದ ಮನೆಗೆ ಬಂದು ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೆಚ್ಚಾಗಿ ಆನ್ಲೈನ್ ಮೂಲಕ ತಿಂಡಿಗಳನ್ನು ತರಿಸಿಕೊಳ್ಳುತ್ತಾರೆ. ಆದರೆ ತಿಂಡಿ ಬರುವುದು ಸ್ವಲ್ಪ ತಡವಾದರೂ ಡೆಲಿವರಿ ಬಾಯ್ ಯಾರಿದ್ದಾರೆ ಅವರ ವಿರುದ್ಧ ಜನರು ಕೂಗಾಡುವ ವಿಷಯ ನಾವು ಹಲವು ಬಾರಿ ಕೇಳಿದ್ದೇವೆ. ಆದರೆ ಇದನ್ನೆಲ್ಲಾ ಮೀರಿ ಮತ್ತೊಂದು ಅನಿರೀಕ್ಷಿತ ಘಟನೆ ದೆಹಲಿ ನಗರದಲ್ಲಿ ನಡೆದಿದೆ.

ನಾವು ಪ್ರತೀಸಲ ನಾವು ಆರ್ಡರ್ ಮಾಡಿದ ತಿಂಡಿ ತಡವಾಗಿ ಬಂದರೆ ಡೆಲಿವರಿ ಬಾಯ್ ಮೇಲೆ ಕೂಗಾಡುತ್ತೇವೆ ಅಥವಾ ತಡವಾಗಿದ್ದಕ್ಕೆ ಕಂಪನಿಗೆ ಕಂಪ್ಲೆಂಟ್ ಮಾಡುತ್ತೇವೆ, ಇಲ್ಲವಾದರೆ ಇದರ ಬದಲು ಮತ್ತೊಂದು ಆಹಾರವನ್ನು ಆರ್ಡರ್ ಮಾಡುತ್ತೇವೆ. ಆದರೆ ಇದನೆಲ್ಲ ಬಿಟ್ಟು ತಡವಾಗಿ ಬಂಡ ಡೆಲಿವರಿ ಬಾಯ್ ಗೆ ಸನಮಾನ ಮಾಡುವ ವಿಷಯವನ್ನು ನೀವು ಎಂದಾದರು ಕೇಳಿದ್ದೀರಾ. ಈ ರೀತಿಯ ಒಂದು ಅನಿರೀಕ್ಷಿತ ಘಟನೆ ರಾಜಧಾನಿ ಡೆಲ್ಲಿಯಲ್ಲಿ ನಡೆದಿದೆ.

 

 

View this post on Instagram

 

A post shared by Sanjeev Tyagi (@sanjeevkumar220268)


ಡೆಲ್ಲಿ ನಗರದಲ್ಲಿ ಹೆಚ್ಚಾಗಿ ಪ್ರತಿಸಲ ಹೆಚ್ಚಾಗಿ ಜನರು ಟ್ರಾಫಿಕ್ ನಲ್ಲಿ ತಮ್ಮ ಇಡೀ ದಿನದ ಸಮಯ ಕಳೆಯುತ್ತಾರೆ. ಇದರಿಂದ ಪ್ರತಿ ಸಲ ಕಚೇರಿಗೆ ಹೋಗುವ ಜನರಿಂದ ಇಡಿದು ಆಹಾರವನ್ನು ಮನೆಬಾಗಿಲಿಗೆ ಸಪ್ಲೈ ಮಾಡುವ ಡೆಲಿವರಿ ಬಾಯ್ ಹೀಗೆ ಪ್ರತಿಯೊಬ್ಬರೂ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ದೆಹಲಿಯ ಟ್ರಾಫಿಕ್ ಜಾಮ್​ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ ಏಜೆಂಟ್​​ ಒಬ್ಬರಿಗೆ ಒಂದು ಸರ್​ಪ್ರೈಝ್​ ಸಿಕ್ಕಿತು. ಸಂಜೀವ್ ತಿಲಕ್ ಎಂಬುವವರು ತಡವಾಗಿ ಬಂದ ಡೆಲಿವರಿ ಬಾಯ್ ಗೆ ‘ಆಯಿಯೇ ಆಪಕಾ ಇಂತಜಾರ ಥಾ’ ಎಂದು ಹಾಡುತ್ತಾ ತಿಲಕವನ್ನು ಇಟ್ಟಿದ್ದಾರೆ. ಇದರಿಂದ ತಡವಾಗಿ ಬಂದಿದ್ದಕ್ಕೆ ಬೈಗುಳ ತಿನ್ನಬೇಕು ಎಂದುಕೊಂಡಿದ್ದ ಹುಡುಗನಿಗೆ ತಿಲಕವಿಟ್ಟು ಆರತಿ ಮಾಡಿ ವಾಪಸ್ಸು ಕಳುಹಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿದ ಜನರು ನಕ್ಕು ತಮ್ಮದೇ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top