ಬಿಗ್ ಬಾಸ್ ಸೀಸನ್ 9 ಶುರುವಾಗಿ ಮೂರೂ ವಾರಗಳು ಕಳೆಯುತ್ತಾ ಬಂದಿದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ದಿನೇ ದಿನೇ ಹಲವು ವಿಭಿನ್ನ ರೀತಿಯ ಟಾಸ್ಕ್ ನೀಡುತ್ತಿದ್ದಾರೆ. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಅತಿ ಚಾಣಕ್ಯತನದಿಂದ ಆಡುತ್ತಿರುವ ಪ್ರಶಾಂತ್ ಸಂಭರ್ಗಿ ಅವರು ಆಡಿದ ಒಂದು ಮಾತು ಇದೀಗ ಮನೆಯ ಸದಸ್ಯರನ್ನು ನಗುವಂತೆ ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಅಂತ ಬಂದರೆ ಪ್ರತಿಯೊಬ್ಬರೂ ಸಹ ತಮ್ಮದೇ ಆದ ಸ್ಟ್ರಾಟೆಜಿ ಉಪಯೋಗಿಸಿ ಗೆಲ್ಲುತ್ತಾರೆ. ಅದರಲ್ಲೂ ಪ್ರಶಾಂತ್ ಸಂಭರ್ಗಿ ಅವರು ಇವರೆಲ್ಲರಕ್ಕಿಂತ ವಿರುದ್ಧ. ಏಕೆಂದರೆ ಇವರು ಯಾವುದೇ ಟಾಸ್ಕ್ ಗೆಲ್ಲಬೇಕು ಎಂದು ಕೊಂಡರೆ ಅವರು ತಮ್ಮ ಕುತಂತ್ರಿತನದಿಂದ ಸೋಲಿಸಿ ಗೆಲ್ಲುತ್ತಾರೆ. ಬರಿ ಮೋಸದ ಆಟ, ಡಬಲ್ ಗೇಮ್ ಹೀಗೆ ಹತ್ತು ಹಲವು ರೀತಿಯಲ್ಲಿ ಇವರು ಆಟವಾಡುತ್ತಾರೆ. ಹೀಗಾಗಿ ಸಾನ್ಯ ಐಯ್ಯರ್ ಕೂಡ ಇವರಿಗೆ ಕುತಂತ್ರಿ ಎಂಬ ಪಟ್ಟವನ್ನು ಸಹ ನೀಡಿದರು. ಇಷ್ಟೆಲ್ಲಾ ಕುತಂತ್ರಿತನವಿದ್ದರೂ ಕೂಡ ತಾವು ಸಾಚಾ ಎಂದು ಪ್ರೂವ್ ಮಾಡಲು ಹೋಗಿ ಮನೆಯ ಸದಸ್ಯರು ನಗುವಂತೆ ಮಾಡಿದ್ದಾರೆ.
ಈ ವೇಳೆ ಮಾತನಾಡುತ್ತಿದ್ದಾಗ ಪ್ರಶಾಂತ್ ಸಂಭರ್ಗಿ ” ನಾನು ಕಳೆದಬಾರಿ ನ್ಯಾಯಯುತವಾಗಿ ಆಡಿದ್ದೆ. ಅದಕ್ಕಾಗಿಯೇ ಫಿನಾಲೆವರೆಗೆ ಬಂದಿದ್ದೆ. ಈ ಬಾರಿಯೂ ಅದೇ ರೀತಿಯ ಆಟ ಮುಂದುವರಿಸಿದ್ದೇನೆ ” ಎಂದು ಹೇಳಿದರು. ಈ ಮಾತನ್ನು ಕೇಳಿ ಮನೆಯ ಸದಸ್ಯರು ಅದರಲ್ಲೂ ದಿವ್ಯ ಉರುದುಗ ಅವರು ನಕ್ಕರು. ಏಕೆಂದರೆ ಪ್ರಶಾಂತ್ ಸಂಭರ್ಗಿ ಅವರ ನಡವಳಿಕೆ ಹೇಗೆ ಎಂದು ದಿವ್ಯ ಅವರಿಗೆ ತಿಳಿದಿದೆ. ಹೀಗಾಗಿ ದಿವ್ಯ ಅವರ ನಗು ಹೇಳುತ್ತೆ ಪ್ರಶಾಂತ್ ಎಷ್ಟರಮಟ್ಟಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
