ಮದುವೆ ಎಂದಾಕ್ಷಣ ನಮಗೆ ತಿಳಿಯುವುದು ಏನೆಂದರೆ ಗುರು ಹಿರಿಯರು ಬಂದುಗಳು ಸ್ನೇಹಿತರು ಎಲ್ಲರು ಇದ್ದು ಶುಭ ಮಹೂರ್ತದಲ್ಲಿ ಇಬ್ಬರು ಶಾಸ್ತ್ರಬದ್ಧವಾಗಿ ತಾಳಿ ಕಟ್ಟಿ ಜೀವನುದ್ದಕ್ಕೂ ಜೊತೆಯಾಗಿ ಇರುತ್ತೇನೆ ಎಂದು ಪ್ರಮಾಣಮಾಡುವುದು. ಆದರೆ ಮದುವೆ ಎಂದರೆ ಹೀಗೂ ಇರಬಹುದು ಎಂದು ನೀವು ಎಂತಾದರು ಯೋಚಿಸಿದ್ದೀರಾ. ಇಲ್ಲವಾದರೆ ಎಕ್ಸಾಮ್ ನಲ್ಲಿ ಕೇಳಿದ ಪ್ರಶ್ನೆ ಹುಡುಗಿ ಕೊಟ್ಟ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಮದುವೆ ಎಂಬುದು ಪರಸ್ಪರ ಒಬ್ಬರನೊಬ್ಬರು ಅರ್ಥಮಾಡಿಕೊಂಡು ಜೀವನ ನಡೆಸುವುದು ಎಂದು ನಮಗೆಲ್ಲ ಗೊತ್ತು. ಇದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಸಹ ನಂಬಿಕೆ ಇದೆ. ಆದರೆ ಇದೀಗ ಇದನೆಲ್ಲ ಮೀರಿ ಒಂದು ಹುಡುಗಿ ಮದುವೆಯ ಬಗ್ಗೆ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದು, ಈ ಉತ್ತರ ನೋಡಿ ಶಿಕ್ಷಕರು ಈ ಹುಡುಗಿಗೆ 10 ಅಂಕಕ್ಕೆ 0 ಸುತ್ತಿ ಕಳಿಸಿದ್ದಾರೆ.
What is marriage? 😂 pic.twitter.com/tM8XDNd12P
— Velu (@srpdaa) October 11, 2022
ನೀನೀಗ ದೊಡ್ಡ ಹೆಣ್ಣುಮಗಳು, ನಿನ್ನನ್ನು ಪೋಷಿಸಲು ನಮಗೆ ಆಗದು, ಹಾಗಾಗಿ ನೀನೇ ನಿನ್ನ ಹುಡುಗನನ್ನು ಹುಡುಕಿಕೋ ಎಂದು ಹುಡುಗಿಯ ಅಪ್ಪಅಮ್ಮ ಹೇಳುತ್ತಾರೆ. ನೀನೀಗ ದೊಡ್ಡವನಾಗಿದ್ದೀಯಾ ಹೋಗು ಮದುವೆಯಾಗು ಎಂದು ತಮ್ಮ ಮಗನ ಮೇಲೆ ಕೂಗಾಡುತ್ತಿರುವ ತಂದೆತಾಯಿಗಳ ಬಳಿ ಆಕೆ ಹೋಗುತ್ತಾಳೆ. ಹುಡುಗ ಮತ್ತು ಹುಡುಗಿ ಪರಸ್ಪರ ಖುಷಿಯಿಂದ ಒಪ್ಪಿಕೊಂಡು ಒಟ್ಟಿಗೆ ಬಾಳಲು ತೀರ್ಮಾನಿಸುತ್ತಾರೆ. ಇದೇ ಮದುವೆ.’ ಎಂದು ಹುಡುಗಿ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರಿಸಿದ್ದಾಳೆ. ಇದೀಗ ಈ ಹುಡುಗಿ ನೀಡಿದ ಉತ್ತರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
