ಒಂದು ಕಾಲದಲ್ಲಿ ಕನ್ನಡ ಸಿನಿಮಾದ ಬಗ್ಗೆ ಮಾತನಾಡುವವರ ಸಂಖ್ಯೆ ಕಡಿಮೆಯಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಈಗ ದೇಶ ಮಾತ್ರವಲ್ಲದೆ ಪ್ರಪಂಚಾದ್ಯಂತ ಜನರು ಕನ್ನಡ ಸಿನಿಮಾದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಅದರಲ್ಲೂ ಕಾಂತಾರ ಸಿನಿಮಾ ನಿರೀಕ್ಷೆಯು ಮೀರಿ ಸಕತ್ ಸೌಂಡ್ ಮಾಡುತ್ತಿದೆ. ಇದೀಗ ಕಾಂತಾರ ಸಿನಿಮಾದ ಹವಾ ಮತ್ತಷ್ಟು ಹೆಚ್ಚಿದೆ ಎಂದು ಹೇಳಿದರೆ ತಪ್ಪಾಗಲಾರದು.
ಕಾಂತಾರ ಸಿನಿಮಾ ಬಿಡುಗಡೆಯಾಗಿ ಎರಡುವಾರಗಳು ಕಳೆದಿದೆ. ಆದರು ಇಂದಿಗೂ ಸಹ ಈ ಸಿನಿಮಾ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ತೋರುತ್ತಿದೆ. ಹೀಗಾಗಿ ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಇದೀಗ ಭಾರತದ ಸಿನಿಮಾಗಲ್ಲಿ ಟಾಪ್ ರೇಟಿಂಗ್ ನಲ್ಲಿರುವ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿದೆ.
ಇಡೀ ಪ್ರಪಂಚ ಭಾರತ ಅದರಲ್ಲೂ ಕನ್ನಡ ಸಿನಿಮಾದತ್ತ ನೋಡುವಂತೆ ಮಾಡಿದ ಸಿನಿಮಾ ಎಂದರೆ ಅದು ಕೆಜಿಎಫ್ ಸಿನಿಮಾ. ಈ ಸಿನಿಮಾ ನಂತರ ಇದೀಗ ಇಡೀ ಜಗತ್ತು ಹೋಗುಳುತ್ತಿರುವ ಸಿನಿಮಾ ಎಂದರೆ ಅದು ಕಾಂತಾರ. ಇಷ್ಟಾದರೂ ಸಹ ರೇಟಿಂಗ್ ವಿಚಾರ ಬಂದಾಗ ಕಾಂತಾರ ಸಿನಿಮಾ ಯಶ್ ನಟನೆಯ ಕೆಜಿಎಫ್ ಸಿನಿಮಾವನ್ನು ಸಹ ಹಿಂದಿಕ್ಕಿದೆ.
IMDb ಬಿಡುಗಡೆಮಾಡಿರುವ ರೇಟಿಂಗ್ ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತದ ಸಿನಿಮಾಗಲ್ಲಿ ಕಾಂತಾರ ಸಿನಿಮಾ ಅಗ್ರಸ್ಥಾನದಲ್ಲಿದೆ. IMDbಯಲ್ಲಿ ಕಾಂತಾರ ಸಿನಿಮಾಗೆ 9.6 ರೇಟಿಂಗ್ ನೀಡಲಾಗಿದೆ. ಕೆಜಿಎಫ್-2 ಸಿನಿಮಾಗೆ 10ಕ್ಕೆ 8.4 ನೀಡಲಾಗಿತ್ತು. ಆರ್ ಆರ್ ಆರ್ ಸಿನಿಮಾಗೆ 10ಕ್ಕೆ 8 ರೇಟಿಂಗ್ ನೀಡಲಾಗಿತ್ತು. ಹೀಗಾಗಿ ಇವೆಲ್ಲ ಸಿನಿಮಾಗಳನ್ನು ಹಿಂದಿಕ್ಕಿ ಕಾಂತಾರ ಸಿನಿಮಾ ಅಗ್ರಸ್ಥಾನವನ್ನು ಏರಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
