ಕನ್ನಡ ಚಿತ್ರಗಳು ಇದೀಗ ಒಂದರಮೇಲೊಂದರಂತೆ ಭರ್ಜರಿ ಸಕ್ಸಸ್ ಕಾಣುತ್ತಿದೆ. ಕಿಜಿಎಫ್ ಸಿನಿಮಾದಿಂದ ಇಡಿದು, ವಿಕ್ರಾಂತ್ ರೋಣ ಮತ್ತು ಇತ್ತೀಚಿಗೆ ರಿಲೀಸ್ ಆದ ಕಾಂತಾರ ಹೀಗೆ ಪ್ರತಿಯೊಂದು ಸಿನಿಮಾ ಕೂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಹೀಗಾಗಿ ಕನ್ನಡದ ಅದೆಷ್ಟೋ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಿ ಅಲ್ಲೂ ಕೂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಇತ್ತೀಚಿಗೆ ಬಿಡುಗಡೆಯಾದ ಕಾಂತಾರ ಸಿನಿಮಾ.
ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದೆ. ಈಗ ಎಲ್ಲಿ ನೋಡಿದರು ಬರಿ ಕಾಂತರದ್ದೇ ಹವಾ. ಇದು ನಮ್ಮ ನೆರೆಹೊರೆಯ ರಾಜ್ಯಗಳಿಗೂ ಸಹ ತಟ್ಟಿತ್ತು. ಹೀಗಾಗಿ ಕಾಂತಾರ ಸಿನಿಮಾ ಬಾಲಿವುಡ್ ಅಂಗಳದಲ್ಲಿ ಅಕ್ಟೊಬರ್ 14 ರಂದು ಬಿಡುಗಡೆಯಾಗಿತ್ತು. ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಮುಗಿಬಿದ್ದು ಜನ ಚಿತ್ರಮಂದಿರದತ್ತ ಧಾವಿಸಿದ್ದರು. ಹೀಗಾಗಿ ಇತ್ತೀಚಿಗೆ ಬಂದಿರುವ ಮಾಹಿತಿಯ ಪ್ರಕಾರ ಕಾಂತಾರ ಸಿನಿಮಾ ಹಿಂದಿ ಭಾಷೆಯಲ್ಲಿ ಮೊದಲ ದಿನವೇ 1.27 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ ‘ಗಾಡ್ಫಾದರ್’ ಹಾಗೂ ಮಾಧವನ್ ನಟನೆಯ ‘ರಾಕೆಟ್ರಿ’ ಸಿನಿಮಾವನ್ನು ನಮ್ಮ ಕನ್ನಡದ ಸಿನಿಮಾ ಬೀಟ್ ಮಾಡಿದೆ ಎಂಬುದು ವಿಶೇಷ.
#Kantara *#Hindi version* opens better than recent dubbed films… Picked up pace towards the evening… #Maharashtra leads, North circuits low… Dependent on Day 2 and 3 for a respectable weekend total… Fri ₹ 1.27 cr. #India biz. Nett BOC. pic.twitter.com/VBhq3wsFwF
— taran adarsh (@taran_adarsh) October 15, 2022
ಸಲ್ಮಾನ್ ಖಾನ್ ನಟನೆಯ ‘ಗಾಡ್ಫಾದರ್’ ಸಿನಿಮಾ ಆರು ದಿನಕ್ಕೆ ಹಿಂದಿಯಲ್ಲಿ 4.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ನಮ್ಮ ಕಾಂತಾರ ಸಿನಿಮಾ ಒಂದೇ ದಿನಕ್ಕೆ 1.27 ಕೋಟಿ ರೂಪಾಯಿ ಗಳಿಸಿದೆ. ಹೀಗಾಗಿ ಇಂದು ಮತ್ತು ನಾಳೆ ವೀಕೆಂಡ್ ಆಗಿರುವ ಕಾರಣ ಈ ಸಿನಿಮಾದ ಕಲೆಕ್ಷನ್ ಬಾಲಿವುಡ್ ನ ಇತರೆ ಸಿನಿಮಾಗಳ ಗಳಿಕೆಯನ್ನು ಮೀರುವುದರಲ್ಲಿ ಯಾವುದೇ ಸಂಶಯ ಬೇಡ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
