fbpx
ಸಮಾಚಾರ

ಅಪ್ಪು ಕನಸಿನ ‘ಗಂಧದ ಗುಡಿ’ ಸಾಕ್ಷ್ಯಚಿತ್ರಕ್ಕೆ ಧ್ವನಿಯಾಗಲಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಸುಮಾರು 1 ವರ್ಷ ಆಗುತ್ತಿದೆ. ಹೀಗಿದ್ದರೂ ಸಹ ಇಂದಿಗೂ ಸಹ ಅಪ್ಪು ನಮ್ಮೆಲ್ಲರ ಮನಸಲ್ಲಿ ಅಚ್ಚೆಯಾಗಿ ಉಳಿದಿದ್ದಾರೆ. ಅಪ್ಪು ಕಂಡ ಬಹುದೊಡ್ಡ ಕನಸು ಎಂದರೆ ಅದು ‘ ಗಂಧದ ಗುಡಿ ‘ ಸಿನಿಮಾ. ಆದರೆ ದುರಾದೃಷ್ಟವಶಾತ್ ಈ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಅಪ್ಪು ನಮ್ಮನ್ನು ಅಗಲಿದ್ದರು.

‘ಗಂಧದ ಗುಡಿ’ಸಿನಿಮಾ ಅಪ್ಪು ಕಂಡ ದೊಡ್ಡ ಕನಸು. ಇದು ಒಂದು ಡಾಕ್ಯುಮೆಂಟರಿ ಸಿನಿಮಾ. ಹೀಗಾಗಿ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆಮಾಡಬೇಕೆಂಬುದು ಅಪ್ಪು ಅವರ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತೆಗೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಈ ಸಿನಿಮಾಕ್ಕೆ ಧ್ವನಿ ಕೂಡ ಅಶ್ವಿನಿ ಅವರೇ ನೀಡುತ್ತಿದ್ದಾರೆ.

ಗಂಧದ ಗುಡಿ ಸಿನಿಮಾದ ಶೀರ್ಷಿಕೆಯನ್ನು ಕಳೆದ ವರ್ಷ ನವೆಂಬರ್ 1 ರಂದು ಬಿಡುಗಡೆಮಾಡಬೇಕಿತ್ತು. ಆದರೆ ಅಕ್ಟೋಬರ್ 29ರಂದೇ ಅಪ್ಪು ನಮ್ಮನ್ನು ದೈಹಿಕವಾಗಿ ಅಗಲಿದ್ದರು. ಹೀಗಾಗಿ ಇದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿತ್ತು. ಏಕೆಂದರೆ ಅಪ್ಪು ಕೇವಲ ಈ ಸಾಕ್ಷ್ಯ ಚಿತ್ರದ ಶೂಟಿಂಗ್ ಕೆಲಸವನ್ನು ಮಾತ್ರ ಮುಗಿಸಿದ್ದರು. ಆದರೆ ಈ ಸಿನಿಮಾಕ್ಕೆ ಇನ್ನು ಧ್ವನಿ ನೀಡಿರಲಿಲ್ಲ. ಹೀಗಾಗಿ ಈ ಸಿನಿಮಾಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಧ್ವನಿ ನೀಡುತ್ತಿದ್ದಾರೆ ಎಂಬುದು ಖಚಿತವಾಗಿದೆ.

ಈಗಾಗಲೇ ಟ್ರೈಲರ್ ಮೂಲಕ ಸಕತ್ ಸೌಂಡ್ ಮಾಡುತ್ತಿರುವ ಈ ಡಾಕ್ಯುಮೆಂಟರಿ ಸಿನಿಮಾ ಇದೆ ತಿಂಗಳು ಅಂದರೆ ಅಕ್ಟೋಬರ್ 28 ರಂದು ಬಿಡುಗಡೆಯಾಗುತ್ತಿದೆ. ಹೆಚ್ಚಾಗಿ ಡಾಕ್ಯುಮೆಂಟರಿ ಸಿನಿಮಾಗಳು ಯೂಟ್ಯೂಬ್​ನಲ್ಲಿ ರಿಲೀಸ್ ಆಗುತ್ತವೆ. ಆದರೆ ಅಪ್ಪು ಅವರಿಗೆ ಗಂದಧ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಿಡುಗಡೆಮಾಡಬೇಕೆಂಬ ಕನಸಿತ್ತು. ಹೀಗಾಗಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆಮಾಡಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top