fbpx
ಸಮಾಚಾರ

ಈ ವರ್ಷ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಸಿನಿಮಾಗಳು ಯಾವುವು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಪ್ರಪಂಚಾದ್ಯಂತ ಜನರು ಕನ್ನಡ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ 1 ವರ್ಷಗಳಿಂದ ಸ್ಯಾಂಡಲ್ವುಡ್ ಸಿನಿಮಾಗಳು ಬಹಳಷ್ಟು ಕಮಾಲ್ ಮಾಡುತ್ತಿದೆ. ಹೀಗಾಗಿ 100 ಕೋಟಿಗಿಂತ ಅಧಿಕ ಹಣ ಗಳಿಸಿದ ಕನ್ನಡದ ಸಿನಿಮಾಗಳು ಯಾವುದು ಗೊತ್ತಾ?

ಕೆಜಿಎಫ್ ೨:
ಇಡೀ ವಿಶ್ವ ಕನ್ನಡ ಸಿನಿಮಾದ ಕಡೆ ನೋಡುವಂತೆ ಮಾಡಿರುವ ಸಿನಿಮಾ ಎಂದರೆ ರಾಕಿ ಭಾಯ್ ಯಶ್ ನಟನೆಯ ಕೆಜಿಎಫ್ ಸಿನಿಮಾ. ಕೆಜಿಎಫ್ ಚಾಪ್ಟರ್-1 ಸಿನಿಮಾ ಹಿಟ್ ಆಗುತ್ತಿದ್ದಂತೆ ಜನರು ಕೆಜಿಎಫ್ ಚಾಪ್ಟರ್-2 ಸಿನಿಮಾದ ಕಡೆ ಹೆಚ್ಚು ಗಮನ ಹರಿಸಿದರು. ಈ ಕಾರಣ ಈ ಸಿನಿಮಾ ಬರೋಬ್ಬರಿ 1400 ಕೋಟಿ ರೂಪಾಯಿ ಗಳಿಸಿತ್ತು.

 

 

ಜೇಮ್ಸ್:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದರು ಸಹ ಇವರ ನೆನಪು ಸದಾ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಹೀಗಾಗಿ ಅಪ್ಪು ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿತ್ತು. ಈ ಸಿನಿಮಾ ಒಟ್ಟಾರೆ 151 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

 

 

777 ಚಾರ್ಲಿ:
ರಕ್ಷಿತ್ ಶೆಟ್ಟಿ ನಟಿಸಿ ನಿರ್ಮಾಣ ಮಾಡಿದ ಸಿನಿಮಾ ಎಂದರೆ ಅದು 777 ಚಾರ್ಲಿ. ಶ್ವಾನ ಪ್ರೀತಿ ಮತ್ತು ಅದರ ನಿಯತ್ತು ಎಷ್ಟರಮಟ್ಟಿಗೆ ಇದೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಇವರು ಈ ಸಿನಿಮಾದಲ್ಲಿ ತೋರಿಸಿದ್ದರು. ಹೀಗಾಗಿ ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿತ್ತು. ಈ ಸಿನಿಮಾ ಒಟ್ಟಾರೆ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

 


ವಿಕ್ರಾಂತ್ ರೋಣ:
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸದ್ದು ಮಾಡಿತ್ತು. ಮೊದಲ ಬಾರಿ ಕಿಚ್ಚ ಸುದೀಪ್ ಫ್ಯಾಂಟಸಿ ಶೈಲಿಯಲ್ಲಿ ನಟಿಸಿದ್ದರು. ಹೀಗಾಗಿ ಈ ಸಿನಿಮಾ ಒಟ್ಟಾರೆ 159 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ.

 

 

ಕಾಂತಾರ:
ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಇದೀಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯ ಮತ್ತು ವಿದೇಶದಲ್ಲೂ ಸಹ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತಿದೆ. ಬಿಡುಗಡೆಯಾಗಿ ಕೇವಲ ಎರಡು ವಾರಗಳಲ್ಲೇ ಈ ಸಿನಿಮಾ 100 ಕೋಟಿ ಗಡಿ ದಾಟಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top