ಬೆಂಗಳೂರು ನಗರದಲ್ಲಿ ಹಾಫ್ ಹೆಲ್ಮೆಟ್ ಅನ್ನು ಬ್ಯಾನ್ ಮಾಡಲಾಗಿರುವುದು ನಮಗೆಲ್ಲರಿಗೂ ಗೊತ್ತು. ಹೀಗಾಗಿ ನೀವು ಹಾಫ್ ಹೆಲ್ಮೆಟ್ ಧರಿಸಿದರೆ ಕಡ್ಡಾಯವಾಗಿ ಫೈನ್ ಕಟ್ಟಬೇಕು. ಇದು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ ಪೊಲೀಸರಿಗೂ ಕೂಡ ಅನ್ವಯವಾಗುತ್ತದೆ. ಹೀಗಾಗಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದ ಪೋಲಿಸಿಗೆ ಮತ್ತೊಬ್ಬ ಪೊಲೀಸ್ ದಂಡ ವಿಧಿಸಿದ್ದಾರೆ.
Good evening sir
half helmet case booked against police
Tq pic.twitter.com/Xsx5UA40OY— R T NAGAR TRAFFIC BTP (@rtnagartraffic) October 17, 2022
ಟ್ರಾಫಿಕ್ ಪೊಲೀಸ್ ಒಬ್ಬರು ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದ ಮತ್ತೊಬ್ಬ ಟ್ರಾಫಿಕ್ ಪೊಲೀಸ್ ಗೆ ದಂಡ ವಿಧಿಸಿದ್ದಾರೆ. ಫೈನ್ ಹಾಕಿದ ಫೋಟೋವನ್ನು ಆರ್ ಟಿ ನಗರ ಟ್ರಾಫಿಕ್ ಬಿಟಿಪಿ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಇದರಲ್ಲಿ ಒಬ್ಬ ಟ್ರಾಫಿಕ್ ಪೊಲೀಸ್ ಹಾಫ್ ಹೆಲ್ಮೆಟ್ ಧರಿಸಿ ವಾಹನದಲ್ಲಿದ್ದರೆ ಮತ್ತೊಂದು ಕಡೆ ಟ್ರಾಫಿಕ್ ಪೋಲಿಸ್ ಒಬ್ಬರು ದಂಡ ಕಟ್ಟಲು ಬಿಲ್ ನೀಡುತ್ತಿರುವುದನ್ನು ನಾವು ಗಮನಿಸಬಹುದು.
ದಂಡ ವಿಧಿಸುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಇದನ್ನು ವೀಕ್ಷಿಸಿದ ಜನಸಾಮನ್ಯರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಅವರ ವಾಹನದ ಮೇಲೆ ೭ ಕೇಸುಗಳಿವೆ ಹೇಗೆ ಬಿಟ್ಟು ಕಳುಹಿಸಿದ್ದೀರಾ ಸರ್ ? ಸಾಮಾನ್ಯ ಜನರಿಗೆ ಒಂದು ನ್ಯಾಯ ಸರ್ಕಾರಿ ಹುದ್ದೆಯಲ್ಲಿರುವವರಿಗೆ ಒಂದು ನ್ಯಾಯನಾ!? ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
@yelahankatrfps @BangaloreMirror Here police have caught some vehicle and now forcefully they are breaking nrules to take him out of spot. No helmet and triple riding. With such police men we cannot set good example. @CPBlr Request your support to guide them. No fines for them? pic.twitter.com/ynlODUZk3N
— Tejesh T (@TejeshT4) October 18, 2022
ಇದಲ್ಲದೆ ಮತ್ತೊಂದು ಫೋಟೋ ಕೂಡ ಸಕತ್ ವೈರಲ್ ಆಗಿದ್ದು ಇದರ ಕುರಿತು ಸಹ ಜನಸಾಮಾನ್ಯರು ಇಂತಹ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಬೇಕಿದೆ. ಅನೇಕ ಪೊಲೀಸರು ಹೆಲ್ಮೆಟ್ ಧರಿಸದೆ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವುದನ್ನು ನಾನು ನೋಡಿದ್ದೇನೆ. ಅಲ್ಲದೆ ಇಂಥವರನ್ನು ಕಂಡರೂ ಪೊಲೀಸರು ಅವರನ್ನು ಹೋಗಲು ಬಿಡುತ್ತಾರೆ. ಅವರಿಗಿಲ್ಲದ ಫೈನ್ ಸಾಮಾನ್ಯ ಜನರಿಗೇಕೆ ಎಂದು ಪ್ರಶ್ನಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
