ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡದ ಸಿನಿಮಾಗಳು ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸಹ ಬಹಳಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಅದು ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ. ಈ ಸಿನಿಮಾ ಇದೀಗ ವಿಶ್ವಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರಿಗೂ ಒಂದು ಅನುಮಾನವಿತ್ತು. ಕಾಂತಾರ ಪಾರ್ಟ್ 2 ಬರುತ್ತೋ ಇಲ್ಲವೋ ಎಂದು. ಆದರೆ ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಭೂತಕೋಲದ ಮಹತ್ವ ಸಾರುವ ಕಥೆಯನ್ನ ಅಚ್ಚುಕಟ್ಟಾಗಿ ರಿಷಬ್ ಶೆಟ್ಟಿ ತೆರೆಯ ಮೇಲೆ ತೋರಿಸಿ, ಸೈ ಎನಿಸಿಕೊಂಡಿದ್ದಾರೆ. ಚಿತ್ರವನ್ನು ವೀಕ್ಷಿಸಿರುವ ಪ್ರತಿಯೊಬ್ಬರೂ ಸಹ ಈ ಸಿನಿಮಾವನ್ನು ಮೆಚ್ಚಿದ್ದಾರೆ. ಹೀಗಾಗಿ ಈ ಸಿನಿಮಾದ ಮತ್ತೊಂದು ಪಾರ್ಟ್ ಬಂದರೆ ಬಹಳಷ್ಟು ಖುಷಿ ಆಗುತ್ತದೆ ಎಂದು ಅಂದುಕೊಂಡಿದ್ದರು. ಇದಲ್ಲದೆ ಈ ಸಿನಿಮಾದ ಕ್ಲೈಮಾಕ್ಸ್ ಅನ್ನು ವೀಕ್ಷಿಸಿದರೆ ಇದರ ಕುರಿತು ಸಹ ನಮಗೆ ಒಂದು ಅನುಮಾನ ಮೂಡುತ್ತದೆ. ಹೀಗಾಗಿ ಇವೆಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ನಟಿಸಿದ ನಟ ಪ್ರಮೋದ್ ಶೆಟ್ಟಿ ರಿವೀಲ್ ಮಾಡಿದ್ದಾರೆ.
ಕಾಂತಾರ ಪಾರ್ಟ್ 2 ತೆರೆಯಮೇಲೆ ಬರುತ್ತದೆ ಎಂದು ನಟ ಪ್ರಮೋದ್ ಶೆಟ್ಟಿ ರಿವೀಲ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ವಿಲನ್ ಪಾತ್ರವನ್ನು ಮಾಡಿದ್ದರು. ಹೀಗಾಗಿ ಕಾಂತಾರ ಪಾರ್ಟ್ 2 ಬಗ್ಗೆ ಇವರು ಮಾಹಿತಿ ತಿಳಿಸಿದ್ದು ರಿಷಬ್ ತಲೆಯಲ್ಲಿ ಯಾವ ತರಹ ಕಥೆ ಓಡುತ್ತಿದೆ ಗೊತ್ತಿಲ್ಲ. ಸದ್ಯ ಅವರು ಬ್ಯುಸಿಯಿದ್ದಾರೆ. ಇನ್ನೂ ಈ ಕುರಿತು ರಿಷಬ್ ಶೆಟ್ಟಿ ಅವರು ಬಿಗ್ ಅಪ್‌ಡೇಟ್ ಕೊಡಲಿದ್ದಾರೆ ಎಂದು ಸಹನಟ ಪ್ರಮೋದ್ ಶೆಟ್ಟಿ ತಿಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳ ಆಸೆಯಂತೆ ಕಾಂತಾರ ಪಾರ್ಟ್ 2 ಬರುವ ಎಲ್ಲಾ ಸಾಧ್ಯತೆಗಳಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
