ಪವರ್ ಸ್ಟಾರ್ ಪುನೀತ್ ರಾಜ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಸಮೀಪಿಸುತ್ತಿದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳ ಮನಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಈ ವೇಳೆ ಅಪ್ಪುಪರ್ವ ವೇದಿಕೆಯ ಮೇಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಪ್ಪು ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಪುನೀತ್ ಪರ್ವ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಕೂಡ ಭಾಗವಹಿಸಿದ್ದರು. ಈ ವೇಳೆ ಅವರು ಮಾತನಾಡುತ್ತ ” ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕದ ಶ್ರೇಷ್ಠ ಪ್ರಶಸ್ತಿಯಾಗಿರುವ ಕರ್ನಾಟಕ ಪ್ರಶಸ್ತಿಯನ್ನು ಸರ್ಕಾರ ನೀಡುತ್ತಿದೆ. ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಮರಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದು ಪ್ರತಿಯೊಬ್ಬ ಯುವಕನಿಗೆ ಪ್ರೇರಣೆಯಾಗುತ್ತದೆ ” ಎಂದು ಅವರು ಹೇಳಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ದಿ. ಪುನೀತ ರಾಜಕುಮಾರ್ ಅವರ ‘ಗಂಧದ ಗುಡಿ’ ಚಿತ್ರದ ಪ್ರಿ – ರಿಲೀಸ್ ಕಾರ್ಯಕ್ರಮ “ಪುನೀತ ಪರ್ವ”ದಲ್ಲಿ ಭಾಗವಹಿಸಿ, ಮಾತನಾಡಿ ಗಂಧದ ಗುಡಿ ಚಲನಚಿತ್ರಕ್ಕೆ ಶುಭಕೋರಿದೆನು.#GGMovie pic.twitter.com/K7c1ZgQDgA
— Basavaraj S Bommai (@BSBommai) October 21, 2022
ಪುನೀತ್ ಪರ್ವ ಕಾರ್ಯಕ್ರಮದ ಕುರಿತು ಮಾತನಾಡಿದ ಇವರು ” ಗಂದಧ ಗುಡಿ ಸಿನಿಮಾ ಯಶಸ್ವಿಯಾಗಲಿ. ಅದೇ ರೀತಿ ಪುನೀತ್ ಪರ್ವ ಕಾರ್ಯಕ್ರಮ ಕೂಡ ಯಶಸ್ವಿಯಾಗಲಿ. 10 ದಿನಗಳ ಕಾಲ ನಡೆಯುವ ಕರ್ನಾಟಕ ರತ್ನ ಸಮಾರಂಭ ಕೂಡ ಯಶಸ್ವಿಯಾಗಲಿ. ಈ ಕಾರ್ಯಕ್ರಮದ ಮೂಲಕ ಅಪ್ಪು ಅವರ ಮೇಲೆ ನಮಗೆಲ್ಲರಿಗೂ ಇರುವ ಪ್ರೀತಿ ವಾತ್ಸಲ್ಯವನ್ನು ತೋರಿಸುವಂತೆ ಆಗಲಿ ” ಎಂದು ಅವರು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
