fbpx
ಸಮಾಚಾರ

ಅಕ್ಟೋಬರ್ 22: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಅಕ್ಟೋಬರ್ 22, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದ್ವಾದಶೀ : Oct 21 05:23 pm – Oct 22 06:02 pm; ತ್ರಯೋದಶೀ : Oct 22 06:02 pm – Oct 23 06:03 pm
ನಕ್ಷತ್ರ : ಪುಬ್ಬ: Oct 21 12:28 pm – Oct 22 01:50 pm; ಉತ್ತರ: Oct 22 01:50 pm – Oct 23 02:34 pm
ಯೋಗ : ಬ್ರಹ್ಮ: Oct 21 05:47 pm – Oct 22 05:12 pm; ಇಂದ್ರ: Oct 22 05:12 pm – Oct 23 04:07 pm
ಕರಣ : ತೈತುಲ: Oct 22 05:48 am – Oct 22 06:03 pm; ಗರಿಜ: Oct 22 06:03 pm – Oct 23 06:08 am; ವಾಣಿಜ: Oct 23 06:08 am – Oct 23 06:03 pm

Time to be Avoided
ರಾಹುಕಾಲ : 9:09 AM to 10:36 AM
ಯಮಗಂಡ : 1:31 PM to 2:58 PM
ದುರ್ಮುಹುರ್ತ : 07:47 AM to 08:34 AM
ವಿಷ : 09:15 PM to 10:54 PM
ಗುಳಿಕ : 6:14 AM to 7:41 AM

Good Time to be Used
ಅಮೃತಕಾಲ : 07:04 AM to 08:46 AM
ಅಭಿಜಿತ್ : 11:40 AM to 12:27 PM

Other Data
ಸೂರ್ಯೋದಯ : 6:14 AM
ಸುರ್ಯಾಸ್ತಮಯ : 5:53 PM

 

 

 

ನಿಮ್ಮ ಕಾರ್ಯವೈಖರಿಯನ್ನು ಯಾರೂ ಪತ್ತೆ ಮಾಡಲು ಸಾಧ್ಯವಿಲ್ಲ. ನೀರಿನಲ್ಲಿನ ಮೀನಿನ ಹೆಜ್ಜೆಯನ್ನು ಗುರುತು ಹಿಡಿಯಲು ಕಷ್ಟಸಾಧ್ಯವೆಂಬಂತೆ ನಿಮ್ಮ ಮನಸ್ಸು ವಿಚಿತ್ರವಾದುದು. ಹಾಗಾಗಿ ಕೆಲವರು ನಿಮ್ಮನ್ನು ತಪ್ಪಾಗಿ ಅಥೈರ್‍ಸಿಕೊಳ್ಳುವರು.

ಪ್ರತಿ ದಿನವೂ ನಿಮ್ಮ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದು ಅಂದುಕೊಳ್ಳುವಿರಿ.

ನಿಮ್ಮ ಮುಂದೆ ನಿಮ್ಮಂತೆ ಮಾತನಾಡಿ ಹಿಂದೆಯಿಂದ ನಿಮ್ಮ ಬಗ್ಗೆ ಕುಹಕ ಮಾತನಾಡುವ ಮಂದಿಯ ಬಗ್ಗೆ ಜಾಗೃತರಾಗಿ. ಸ್ವಂತ ಒಡಹುಟ್ಟಿದವರು ಇಲ್ಲವೆ ನಿಮ್ಮ ಮಕ್ಕಳೆ ಶತ್ರುಗಳಂತೆ ವರ್ತಿಸುವರು. ತಾಳ್ಮೆಯಿರಲಿ.

ಸುಮ್ಮನೆ ಗಾಳಿಗೆ ಗುದ್ದಿ ಮೈ ನೋಯಿಸಿಕೊಳ್ಳದಿರಿ. ಧನಾತ್ಮಕ ಚಿಂತನೆಗಳಿಂದ ನಿಶ್ಚಿತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

 

ಸಮುದ್ರದಲ್ಲಿ ಅಲೆಗಳು ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುವುದು. ಅಲೆ ನಿಂತ ಮೇಲೆ ಸಮುದ್ರ ಸ್ನಾನ ಮಾಡುತ್ತೇನೆ ಎಂದರೆ ಆಗದು. ಆ ಅಲೆಗಳ ಮಧ್ಯೆಯೇ ಸ್ನಾನ ಮಾಡುವಂತೆ ನಿತ್ಯ ಜಂಜಾಟದ ನಡುವೆಯೇ ಭಗವಂತನನ್ನು ಆರಾಧಿಸುವುದು ಒಳ್ಳೆಯದು.

 

ಸುಮ್ಮನೆ ನಿರೀಕ್ಷೆಯಲ್ಲಿರುವುದಕ್ಕಿಂತ ಇತರೆ ಕಾರ್ಯಗಳಲ್ಲಿ ಮಗ್ನವಾಗುವುದೇ ಒಳ್ಳೆಯದು. ತಾನು ಮಾಡುವುದು ಒಳ್ಳೆಯದು, ಮಗ ಮಾಡುವುದು ಹಾನಿ ಎಂಬಂತೆ ನೀವೇ ಖುದ್ದಾಗಿ ಕಾರ್ಯ ವೀಕ್ಷಣೆ ಮಾಡುವುದು ಒಳ್ಳೆಯದು.

 

ಒಂದನ್ನು ಪಡೆಯಲು ಮತ್ತೊಂದರ ತ್ಯಾಗದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಮುಷ್ಟಿಕಾಳು ಚೆಲ್ಲಿ ಮೂಟೆ ಕಾಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣ ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ.

 

ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿಯನ್ನು ಮಾಡುವರು.

 

ಹಿರಿಯರನ್ನು ದೂರ ಇಡಬೇಡಿರಿ. ಮತ್ತು ಅವರ ದಿನಚರ್ಯೆಗಳನ್ನು ದೂಷಿಸಬೇಡಿರಿ. ಅವರ ಸೇವೆಯನ್ನು ಮಾಡುವ ಮೂಲಕ ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲವಾಗುವುದು.

ಹೊಸದೇ ಆದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು.

 

 

ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವರು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವರು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು.

ನಿಮ್ಮ ನಂಬಿಕೆ ಹಾಗೂ ಸ್ಥೈರ್ಯ ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top