ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡುತ್ತಿರುವುದಲ್ಲದೆ ಹಲವಾರು ರೆಕಾರ್ಡ್ ಗಳನ್ನೂ ಸಹ ಬ್ರೇಕ್ ಮಾಡುತ್ತಿದೆ. ಇದೀಗ ಕಾಂತಾರ ಸಿನಿಮಾದ ಕುರಿತು ಹೊಂಬಾಳೆ ಫಿಲಂ ಸಂಸ್ಥೆ ಒಂದು ಇಂಟೆರೆಸ್ಟಿಂಗ್ ಸಂಗತಿ ಬಿಡುಗಡೆ ಮಾಡಿದ್ದು, ಇದು ಕೆಜಿಎಫ್ ಅನ್ನು ಕೂಡ ಮೀರಿಸಿದೆ ಎಂದು ಹೇಳಲಾಗುತ್ತಿದೆ.
ಕಾಂತಾರ ಸಿನಿಮಾ ಕೇವಲ ರಾಜ್ಯಾದ್ಯಂತ ವಲ್ಲದೆ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಹೀಗಾಗಿ ಕಾಂತಾರ ಸಿನಿಮಾ ಬಿಡುಗಡೆಯಾಗಿ ಕೇವಲ 25 ದಿನಗಳಲ್ಲಿ ಯಾರು ಕೂಡ ಹೂಯಿಸಲು ಸಾಧ್ಯವಾಗದೇ ಇರೋವಂತಹ ಸಾಧನೆಯನ್ನು ಮಾಡಿದೆ.
ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..!
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..
ಧನ್ಯವಾದ ಕರ್ನಾಟಕ..🙏 #Kantara #DivineBlockbusterKantara pic.twitter.com/i1yr4lSazG— Hombale Films (@hombalefilms) October 24, 2022
ಹೊಂಬಾಳೆ ಫಿಲಂ ಸಂಸ್ಥೆ ಅಡಿಯಲ್ಲಿ ಮೂಡಿಬಂದ ಸಿನಿಮಾಗಳ ಪೈಕಿ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಸಿನಿಮಾ ಬಾಗಿಯಾಗಿದೆ. ಕೇವಲ 25 ದಿನಗಳಲ್ಲಿ ಈ ಸಿನಿಮಾವನ್ನು 77 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಕಾಂತಾರ ಸಿನಿಮಾ ಒಂದು ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಹಿಂದಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾ ಜನ ಮೆಚ್ಚಿದ ಸಿನಿಮಾವಾಗಿತ್ತು. ಈ ಸಿನಿಮಾವನ್ನು 65 ಲಕ್ಷ ಜನರು ವೀಕ್ಷಿಸಿದ್ದರು. ಇದಾದ ನಂತರ ಇಡೀ ವಿಶ್ವವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ -1 ಸಿನಿಮಾವನ್ನು 75 ಲಕ್ಷ ಜನರು ವೀಕ್ಷಿಸಿದ್ದರು. ಇದೀಗ ಇವೆಲ್ಲ ದಾಖಲೆಯನ್ನು ಕಾಂತಾರ ಸಿನಿಮಾ ಕೇವಲ 25 ದಿನಗಳಲ್ಲಿ ಮುರಿದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
