fbpx
ಸಮಾಚಾರ

ತ್ರೇತಾಯುಗದಿಂದ ದೀಪಾವಳಿ ಆಚರಣೆಗೆ ಬಂದಿದ್ದು ಹೇಗೆ ? ದೀಪಾವಳಿ ಹಬ್ಬವನ್ನು ಮೊದಲು ಆಚರಿಸಿದ್ದು ಎಲ್ಲಿ ? ,ಈ ಹಬ್ಬದ ಹಿಂದಿರುವ ಉದ್ದೇಶವಾದರೂ ಏನ್ ಗೊತ್ತಾ

ತ್ರೇತಾಯುಗದಿಂದ ದೀಪಾವಳಿ ಆಚರಣೆಗೆ ಬಂದಿದ್ದು ಹೇಗೆ ? ದೀಪಾವಳಿ ಹಬ್ಬವನ್ನು ಮೊದಲು ಆಚರಿಸಿದ್ದು ಎಲ್ಲಿ ? ಮತ್ತು ಯಾರು ಯಾವ ರಾಜ್ಯದಲ್ಲಿ ?
ನಾವೆಲ್ಲಾ ದೀಪಾವಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿ ಇದ್ದೇವೆ. ಹಬ್ಬಗಳನ್ನು ನಾವು ಸುಮ್ಮನೆ ಆಚರಿಸುತ್ತೇವೆ. ಆದರೆ ನಮ್ಮ ಇಂದೂಗಳ ಪ್ರತಿ ಹಬ್ಬಕ್ಕೂ ಒಂದೊಂದು ಕಾರಣ ಇರುತ್ತದೆ.ಆ ಹಬ್ಬದ ಆಚರಣೆಗೆ ಒಂದು ವಿಶೇಷವಾದ ಅರ್ಥ ಇರುತ್ತದೆ. ಇದನ್ನು ತಿಳಿದು ಹಬ್ಬ ಆಚರಿಸಿದರೆ ಹಬ್ಬದ ಸಂಭ್ರಮ ಮತ್ತಷ್ಟು ಕಳೆಗಟ್ಟುತ್ತದೆ.

ರಾಮ ರಾಜ್ಯದಲ್ಲಿ ನಡೆದಿತ್ತು ಮೊದಲ ದೀಪಾವಳಿ.
ದೀಪಾವಳಿಯ ಮೂಲವೇ ಆಯೋಧ್ಯ ಎನ್ನುತ್ತದೆ ಪುರಾಣ. ದುರ್ಗಾದೇವಿ ನರಕಾಸುರನನ್ನು ವಧಿಸಿದ ಮಹತ್ವದ ದಿನ ದೀಪಾವಳಿ.ದೀಪಾವಳಿ ಬಂತು ಎಂದರೆ ಎಲ್ಲಿ ನೋಡಿದರೂ ದೀಪಗಳ ಸರದಿ, ಕತ್ತಲೆ ದೂರವಾಗಿ ಬೆಳಕಿನ ರಾಜ್ಯಭಾರ ನಡೆಯುವ ಸುಂದರ ಹಬ್ಬ. ಎಲ್ಲಿ ನೋಡಿದರೂ ಸಡಗರ, ಸಂಭ್ರಮ. ದೀಪಾವಳಿಯನ್ನು ನಾವೆಲ್ಲಾ ತುಂಬಾ ಬಣ್ಣ ಬಣ್ಣದ ಪಟಾಕಿಗಳನ್ನು ಹೊಡೆದು ದೀಪಗಳನ್ನು ಹಚ್ಚಿ ಆಚರಿಸುತ್ತೇವೆ . ಈ ಆಚರಣೆಗಳು ಸುಮ್ಮನೇ ಬಂದಿರುವುದಲ್ಲ. ಇದಕ್ಕೆಲ್ಲ ಅರ್ಥವಿದೆ . ದೀಪಾವಳಿ ಆಚರಣೆಗೆ ಸಂಬಂಧಪಟ್ಟಂತೆ ನಮ್ಮ ಪುರಾಣದಲ್ಲಿ ಕಥೆಗಳಿವೆ. ದೀಪಾವಳಿಯ ಸಂದರ್ಭದಲ್ಲಿ ಸಾಕ್ಷಾತ್ ಲಕ್ಷ್ಮಿದೇವಿಗೆ ಬ್ರಾಹ್ಮೀ ಮುಹೂರ್ತದಲ್ಲಿ ದೀಪ ಹಚ್ಚುತ್ತಾರೆ ನಂತರ ಶ್ರೀಮನ್ನಾರಾಯಣನಿಗೆ ಸುಪ್ರಭಾತವನ್ನು ಹಾಡಿ ಎಬ್ಬಿಸುತ್ತಾರೆ ಎನ್ನುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ.ಶ್ರೀರಾಮ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ ಪವಿತ್ರ ದಿನವೇ ದೀಪಾವಳಿ.

 

 

 

ಆಯೋಧ್ಯ ಶ್ರೀರಾಮಚಂದ್ರ ನಡೆದಾಡಿದ ಪುಣ್ಯಭೂಮಿ.ಈ ಅಯೋದ್ಯೆಯಲ್ಲಿ ಶೀರಾಮ 14 ವರ್ಷ ವನವಾಸ ಮುಗಿಸಿ ರಾವಣನ ವಧೆ ಮಾಡಿ ಬಂದ ದಿನಾವೇ ದೀಪಾವಳಿಗೆ ಅಯೋದ್ಯೆಯಲ್ಲಿ ಸಿದ್ಧತೆ ನಡೆಯುತ್ತದೆ ಅಂದರೆ ಅದೇ ಮೊದಲ ದೀಪಾವಳಿಯ ಎನ್ನುತ್ತದೆ ಪುರಾಣ. ಯಾಕೆಂದರೆ ಲಂಕಾಧಿಪತಿ ರಾವಣನ ಸಂಹಾರದ ನಂತರ ಶ್ರೀರಾಮ ಅಯೋಧ್ಯೆಗೆ ಹಿಂತಿರುಗುತ್ತಾನೆ. ಆ ದಿನವೇ ದೀಪಾವಳಿ ಶುರುವಾಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ತ್ರೇತಾಯುಗದಲ್ಲಿ ಶ್ರೀರಾಮ ಅಯೋಧ್ಯೆಗೆ ಮರಳಿದ ಶುಭ ದಿನವೇ ಪ್ರಪ್ರಥಮವಾಗಿ ಆಚರಿಸಿದ ದೀಪಾವಳಿ. ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮ ವಿಜಯ ದಶಮಿಯಂದು ರಾವಣನನ್ನು ಕೊಂದು ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿದ ನಂತರ ಜನರು ಸಾಲು ಸಾಲು ದೀಪಗಳನ್ನು ಹಚ್ಚಿ ಶ್ರೀರಾಮನನ್ನು ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದರಂತೆ ಅದೇ ಪ್ರಪ್ರಥಮವಾಗಿ ಆಚರಿಸಿದ ದೀಪಾವಳಿ ಎನ್ನಲಾಗುತ್ತದೆ. ಹಾಗಾಗಿ ಇಂದಿಗೂ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.ಅಯೋಧ್ಯೆ ಹಬ್ಬದ ವೇಳೆ ಗಂಗಾ ಆರತಿ ಅತ್ಯಂತ ಆಕರ್ಷಕವಾಗಿ ನಡೆಯುತ್ತದೆ. ಈ ಸಲದ ಆಯೋಧ್ಯೆ ಹಬ್ಬವನ್ನು ಅತ್ಯಂತ ಅದ್ದೂರಿಯಿಂದ ನಡೆಸುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ ಎನ್ನುವುದು ಸಹ ವಿಶೇಷವಾಗಿದೆ.
ದೀಪಾವಳಿ ಹಬ್ಬ ಕೆಡುಕಿನ ವಿರುದ್ಧ ಜಯ ಸಾಧಿಸಿದ ಶುಭ ಸಂದರ್ಭ.
ಘೋರ ರಾಕ್ಷಸನಾದ ನರಕಾಸುರನನ್ನು ದುರ್ಗಾದೇವಿ ಸಂಹಾರ ಮಾಡಿದ್ದು ಇದೇ ದೀಪಾವಳಿಯ ಸಂದರ್ಭದಲ್ಲಿ ಎನ್ನಲಾಗುತ್ತದೆ. ವಿಜಯವನ್ನು ಆಚರಿಸಲು ಉತ್ತರ ಭಾರತದ ಸುತ್ತಲೂ ನರಕ ಚತುರ್ದಶಿಯಂದು ದೀಪಗಳನ್ನು ಬೆಳಗಿಸಿ ಕತ್ತಲೆಯನ್ನು ಹೊರಗೋಡಿಸುವ ಹಬ್ಬ. ದುಷ್ಟ ಶಕ್ತಿಯ ಮೇಲೆ ವಿಜಯದ ಆಚರಣೆಯನ್ನಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top