fbpx
ಸಮಾಚಾರ

ಅಕ್ಟೋಬರ್ 25: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಅಕ್ಟೋಬರ್ 25, 2022 ಮಂಗಳವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಶ್ವೇಜ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಮಾವಾಸ್ಯೆ : Oct 24 05:27 pm – Oct 25 04:18 pm; Sukla Paksha ಪ್ರತಿಪತ್ : Oct 25 04:18 pm – Oct 26 02:42 pm
ನಕ್ಷತ್ರ : ಚಿತ್ತ: Oct 24 02:42 pm – Oct 25 02:17 pm; ಸ್ವಾತಿ: Oct 25 02:17 pm – Oct 26 01:24 pm
ಯೋಗ : ವಿಷ್ಕಂಭ: Oct 24 02:32 pm – Oct 25 12:31 pm; ಪ್ರೀತಿ: Oct 25 12:31 pm – Oct 26 10:08 am
ಕರಣ : ನಾಗ: Oct 25 04:56 am – Oct 25 04:18 pm; ಕಿಮ್ಸ್ತುಗ್ನ: Oct 25 04:18 pm – Oct 26 03:33 am; ಬಾವ: Oct 26 03:33 am – Oct 26 02:42 pm

Time to be Avoided
ರಾಹುಕಾಲ : 2:57 PM to 4:25 PM
ಯಮಗಂಡ : 9:09 AM to 10:36 AM
ದುರ್ಮುಹುರ್ತ : 08:34 AM to 09:21 AM, 10:49 PM to 11:39 PM
ವಿಷ : 07:40 PM to 09:13 PM
ಗುಳಿಕ : 12:03 PM to 1:30 PM

Good Time to be Used
ಅಮೃತಕಾಲ : 07:59 AM to 09:34 AM
ಅಭಿಜಿತ್ : 11:40 AM to 12:26 PM

Other Data
ಸೂರ್ಯೋದಯ : 6:15 AM
ಸುರ್ಯಾಸ್ತಮಯ : 5:52 PM

 

 

 

ಶ್ರಮಜೀವಿಗಳಿಗೆ ಹೆಚ್ಚಿನ ದುಡಿಮೆಯಿಂದ ಅಧಿಕ ಧನಲಾಭವಾಗಲಿದೆ. ಮತ್ತೊಬ್ಬರಿಗೆ ಹಾಸ್ಯ ಮಾಡಲು ಹೋಗಿ ನೀವೇ ಅಪಹಾಸ್ಯಕ್ಕೆ ಗುರಿಯಾಗುವಿರಿ. ವಿದೇಶದಲ್ಲಿರುವ ಮಗನ ಉದ್ಯೋಗ ವೇತನ ಹೆಚ್ಚುವುದು. ರೈತರಿಗೆ ಸರ್ಕಾರದಿಂದ ಬರುವ ಸೌಲಭ್ಯ ಆಶಾಕಿರಣವಾಗಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಿದೆ.

ಸೋತು ಗೆದ್ದಿರುವ ನೀವು ಹೊಸ ಸ್ಥಳದಲ್ಲಿನ ಕೆಲಸಗಳನ್ನು ಮಾಡಲು ಆತ್ಮವಿಶ್ವಾಸ ಮತ್ತು ಧೈರ್ಯ ರೂಢಿಸಿಕೊಳ್ಳಿ. ಬಾಕಿ ಸಮಸ್ಯೆಗಳೆಲ್ಲವೂ ಕ್ರಮೇಣ ಬಗೆಹರಿದು ನೆಮ್ಮದಿ ಮೂಡಲಿದೆ. ಆಸ್ತಿಗೆ ಸಂಬಂಧಪಟ್ಟಂತೆ ನೆರೆಹೊರೆಯವರಿಂದ ತಗಾದೆ ಬರುವುದು. ಇದು ವಿಕೋಪಕ್ಕೆ ಹೋಗುವ ಮುನ್ನ ಮಾತುಕತೆಯಿಂದ ಬಗೆಹರಿಸಿಕೊಳ್ಳಿ.

ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆಗಳು ದಟ್ಟವಾಗಿವೆ. ವರ್ಗ ಆಗಬಹುದು. ಆಪ್ತರೊಂದಿಗೆ ಸಮಾಲೋಚನೆ ನಡೆಸದೇ ಮುಂದಡಿ ಇಡುವುದು ಜಾಣತನದ ಲಕ್ಷ ಣವಲ್ಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.

ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನಡೆಯುವವು.

 

ಒಟ್ಟೊಟ್ಟಿಗೆ ಹಲವು ಕೆಲಸಗಳು ಹೆಗಲೇರುವುದರಿಂದ ಈ ದಿನ ವಿಶ್ರಾಂತಿಗೆ ಸಂಚಕಾರ ಬರಲಿದೆ. ಸಾಧ್ಯವಾದಷ್ಟು ಸಂಭಾಳಿಸಿಕೊಂಡು ಹೋಗಲು ಪ್ರಯತ್ನಿಸಿ. ಆರ್ಥಿಕ ಮುಗ್ಗಟ್ಟು ಎದುರಾಗುವುದು.

 

ನಿಮ್ಮ ಬಾಯಿ ದೊಡ್ಡದು. ಅಂದರೆ ಮಾತುಗಳಿಗೆ ಲಗಾಮಿಲ್ಲ. ಸಿಕ್ಕಾಪಟ್ಟೆ ಮಾತನಾಡಿಯೇ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇದೆ. ಕುಲದೇವತಾ ಪ್ರಾರ್ಥನೆ ಮತ್ತು ಪ್ರಾಣಾಯಾಮದ ಮೂಲಕ ಮನಸ್ಸನ್ನು ನಿಯಂತ್ರಿಸಿ.

 

ಹೆದರುತ್ತ ಕುಳಿತರೆ ಕೆಲಸ ಆಗುವುದಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ನೆನಪಿಸಿಕೊಂಡು ಕಾರ್ಯ ಪ್ರವೃತ್ತರಾಗಿ. ಸಂತೋಷದ ಕೂಟಗಳಿಗೆ ಹಣ ಖರ್ಚು ಮಾಡುವ ಪ್ರಮೇಯ ಒದಗಿ ಬರುವುದು.

 

ನಿಮ್ಮ ಆತ್ಮವಿಶ್ವಾಸ ಬಲು ದೊಡ್ಡದು. ಆದರೆ ಹುಂಬುತನದಿಂದ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಹಾಗಾಗಿ ಜಾಗ್ರತೆ ಅಗತ್ಯ. ಅತ್ಯಂತ ನಂಬಿದ ಸ್ನೇಹಿತರುಗಳೆ ಕೈಕೊಡುವ ಸಂದರ್ಭವಿರುತ್ತದೆ.

 

ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ಇದರಿಂದ ನಿಮಗೆ ನೂತನ ಅನುಭವವಾಗುವುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರವನ್ನು ನೀಡುವರು. ನಿಮ್ಮ ಕುಲದೇವತೆಯ ಪ್ರಾರ್ಥನೆ ಮಾಡಿ.

ಈ ದಿನ ಸ್ವಲ್ಪ ನಿರಾಶೆಯ ವಾತಾವರಣ ಎದುರಾಗುವುದು. ಹಣಕಾಸಿನ ಚಿಂತೆ ಇರುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕಾರ್ಯ ತತ್ಪರತೆಯನ್ನು ಮನತುಂಬಿ ಹೊಗಳುವರು.

 

 

ಕೆಲವು ತೀರ್ಮಾನಗಳನ್ನು ತಕ್ಷ ಣದಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ಮನದ ವಿಚಾರಗಳನ್ನು ಮನೆಯ ಹಿರಿಯರ ಬಳಿ ಚರ್ಚಿಸಿ ಕಾರ್ಯ ಆರಂಭಿಸುವುದು ಒಳ್ಳೆಯದು. ಮಾತು ಮಿತವಾಗಿರಲಿ.

ನಿಮ್ಮ ಮುಂದಿರುವ ಜವಾಬ್ದಾರಿ ಬಹು ಮಹತ್ತರವಾದದ್ದು. ಅದನ್ನು ನೀವು ಸಲೀಸಾಗಿ ನಿಭಾಯಿಸುವಿರಿ. ಅಕ್ಕಪಕ್ಕದವರು, ನಿಮ್ಮ ಸ್ನೇಹಿತರು ಇದನ್ನು ಕಂಡು ಆಶ್ಚರ್ಯ ಚಕಿತರಾಗುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top