ಪಾಕಿಸ್ತಾನ ವಿರುದ್ಧ 4 ವಿಕೆಟ್ ರೋಚಕ ಗೆಲುವು ಸಾಧಿಸಿ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದ ಭಾರತ ತಂಡ, ಗುರುವಾರ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ದ ತನ್ನ ಮುಂದಿನ ಪಂದ್ಯವನ್ನಾಡಲಿದೆ. ಆದರೆ, ಅಭ್ಯಾಸದ ವೇಳೆ ತಮಗೆ ನೀಡಿದ ಆಹಾರ ಸರಿ ಇಲ್ಲವೆಂದು ಟೀಮ್ ಇಂಡಿಯಾ ಆಟಗಾರರು ದೂರಿದ್ದಾರೆಂದು ವರದಿಯಾಗಿದೆ.
ನೆಟ್ ಪ್ರಾಕ್ಟಿಸ್ ನಂತರ ಮೈದಾನದಲ್ಲಿದ್ದ ಆಟಗಾರರಿಗೆ ಆಸ್ಟ್ರೇಲಿಯಾದ ಆಹಾರ ಸಂಸ್ಕೃತಿಯಾದ ಹಣ್ಣು, ಫಲಾಫೆಲ್ ಮತ್ತು ಸ್ಯಾಂಡ್‌ವಿಚ್ ನೀಡಲಾಗಿತ್ತು. ಈ ಆಹಾರಕ್ಕೆ ಬೇಸರಗೊಂಡ ಆಟಗಾರರು ಹೋಟೆಲ್ಗೆ ತೆರಳಿ ಊಟ ಮಾಡಿದ್ದಾರೆ. ಅಭ್ಯಾಸದ ನಂತರ ಆಟಗಾರರು ಊಟದ ನಿರೀಕ್ಷೆಯಲ್ಲಿದ್ದರು. ಆದರೆ, ಸ್ಥಳೀಯ ಆಹಾರಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಬಿಸಿಸಿಐ ಮೂಲಗಳು ಈ ಬಗ್ಗೆ ಮಾಹಿತಿನ್ನು ನೀಡಿದೆ. “ಭಾರತ ತಂಡಕ್ಕೆ ನೀಡಲಾದ ಆಹಾರ ಗುಣಮಟ್ಟದ್ದಾಗಿರಲಿಲ್ಲ. ಕೇವಲ ಸ್ಯಾಂಡ್‌ವಿಚ್‌ಗಳನ್ನು ಮಾತ್ರವೇ ನೀಡಲಾಗಿತ್ತು. ಅಲ್ಲದೆ ಸಿಡ್ನಿಯಲ್ಲಿ ಐಸಿಸಿ ನೀಡಿದ ಆಹಾರ ತಣ್ಣಗಿತ್ತು ಹಾಗೂ ಚೆನ್ನಾಗಿರಲಿಲ್ಲ ಎಂದು ಆಟಗಾರರು ಹೇಳಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಬಿಸಿಸಿಐ ಪ್ರಕಾರ, ಅಭ್ಯಾಸದ ವೇಳೆ ಮಧ್ಯಾಹ್ನವಾಗುತ್ತದೆ. ಈ ಸಮಯದಲ್ಲಿ ಆಟಗಾರರಿಗೆ ಬಿಸಿಯಾದ ಊಟ ಬೇಕು. ಆಟಗಾರರು ಊಟ ಮಾಡಲು ಇಚ್ಛಿಸುತ್ತಾರೆ. ಆ ಸಮಯದಲ್ಲಿ ಅವರಿಗೆ ಬಿಸಿಯಾದ ಆಹಾರ ಬೇಕು. ನಾವು ಬಹಿಷ್ಕಾರ ಮಾಡುತ್ತಿಲ್ಲ. ಕೆಲ ಆಟಗಾರರು ಹಣ್ಣುಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರು ಊಟ ಮಾಡಲು ಬಯಸಿದ್ದರು. ಆ ಕಾರಣಕ್ಕಾಗಿ ಕೆಲವರು ಹೊಟೇಲ್ ಗೆ ಹೋಗಿ ಊಟ ಮಾಡಿದರು ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
