ಪ್ರಪಂಚಾದ್ಯಂತ ಕಾಂತಾರ ಸಿನಿಮಾ ಸಕತ್ ಸೌಂಡ್ ಮಾಡುತ್ತಿರುವ ವಿಷಯ ನಮಗೆಲ್ಲ ಗೊತ್ತು. ಹೀಗಾಗಿ ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕಾಂತಾರ ಸಿನಿಮಾದ ಪಾರ್ಟ್-2 ಬರಲಿದೆಯಾ? ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಕ್ಲೈಮಾಕ್ಸ್ ನೋಡಿದರೆ ಇದರ ಕುರಿತು ಒಂದು ಸುಳಿವು ಸಿಗುತ್ತದೆ. ಕಾಂತಾರ ಪಾರ್ಟ್-2 ಬಗ್ಗೆ ಸಿನಿಮಾದಲ್ಲಿ ನಟಿಸಿದ ನಟ ಪ್ರಮೋದ್ ಶೆಟ್ಟಿ ಅವರು ಸುಳಿವು ನೀಡಿದ್ದರು. ಆದರೆ ಇದೀಗ ಸ್ವತಃ ಈ ಸಿನಿಮಾದ ನಿರ್ದೇಶಕ ಮತ್ತು ನಟರಾಗಿರುವ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂತಾರ ಪಾರ್ಟ್-2 ಬರಲಿದೆಯಾ? ಎಂಬ ಪ್ರಶ್ನೆ ರಿಷಬ್ ಶೆಟ್ಟಿ ಅವರ ಮುಂದೆ ಬಂತು. ಇದಕ್ಕೆ ಉತ್ತರಿಸಿದ ರಿಷಬ್ ಕಾಂತಾರ ಸಿನಿಮಾ ಬಹುತೇಕ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ರಿಪೀಟ್ ಆಡಿಯನ್ಸ್ ಬರುತ್ತಿದ್ದಾರೆ. ಹಾಗಾಗಿ ಪಾರ್ಟ್ 2 ಕುರಿತು ಸದ್ಯಕ್ಕೆ ಏನೂ ಹೇಳಲಾರೆ. ‘ನೋ ಕಾಮೆಂಟ್ಸ್’ ಎಂದು ಹೇಳಿದ್ದಾರೆ. ಹೀಗಾಗಿ ಪಾರ್ಟ್-2 ಬರಲಿದೆಯಾ? ಎಂಬ ಅಭಿಮಾನಿಗಳ ಪ್ರಶ್ನೆ ಇದೀಗ ಪ್ರಶ್ನೆಯಾಗಿಯೇ ಉಳಿದಿದೆ. ಆದರೂ ರಿಷಬ್ ಶೆಟ್ಟಿ ಅವರ ಮನಸಲ್ಲಿ ಪಾರ್ಟ್-2 ಮಾಡಬೇಕೆಂಬ ಮನಸು ಇರುವುದು ಇವರ ಉತ್ತರದಲ್ಲಿ ಕಾಣಿಸುತ್ತಿದೆ.
ಕಾಂತಾರ ಸಿನಿಮಾ ದೇಶಾದ್ಯಂತ ಮಾತ್ರವಲ್ಲದೆ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಸಹ ಧೂಳಿಪಟ ಮಾಡಿದೆ. ಇದಲ್ಲದೆ ಒಂದಾದರಮೇಲೊಂದರಂತೆ ರೆಕಾರ್ಡ್ ಕೂಡ ಬ್ರೇಕ್ ಮಾಡುತ್ತಿದೆ. ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಈ ಸಿನಿಮಾವನ್ನು ವೀಕ್ಷಿಸಿ ಮತ್ತೊಂದು ರೆಕಾರ್ಡ್ ಸೃಷ್ಟಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
