fbpx
ಸಮಾಚಾರ

ಮೌಳಿ ದಾರ ಎಂದರೇನು? ಅದನ್ನು ಕಟ್ಟಿಕೊಂಡರೆ ಯಾವ ಕೇಡು ಸಂಭವಿಸುವುದಿಲ್ಲ , ಇದರ ಹಿಂದಿರುವ ಧಾರ್ಮಿಕ ಕಾರಣಗಳು ಗೊತ್ತೇ ?

 

ಮೌಳಿ  ದಾರ ಎಂದರೇನು ?

 

ಕೆಂಪು, ಹಳದಿ ಮತ್ತು ಕೇಸರಿ ಬಣ್ಣಗಳು ಸೇರಿ ಒಂದೇ ಒಂದು ದಾರದಲ್ಲಿ ಇರುವ ದಾರವನ್ನು ಮೌಳಿ ದಾರ ಎಂದು ಕರೆಯುತ್ತಾರೆ. ಇದನ್ನು ಎಲ್ಲರೂ ಸಹ ಕಟ್ಟಿಕೊಳ್ಳುತ್ತಾರೆ. ಇದನ್ನು ಪೂಜೆ ವ್ರತಗಳನ್ನು ಮಾಡುವಾಗ ಶುಭ ಕಾರ್ಯಗಳಲ್ಲಿ ಕೈಗೆ ಕಟ್ಟುತ್ತಾರೆ. ಇದನ್ನು ಮೌಳಿ ದಾರ ಎಂದು ಕರೆಯುತ್ತಾರೆ.

ಯಾಕೆಂದರೆ ಆ ಮೂರು ಬಣ್ಣಗಳು ನವ ಗ್ರಹಗಳಿರುವ ಬೃಹಸ್ಪತಿ ಅಂದರೆ ಗುರು ಗ್ರಹ, ಕುಜ ಗ್ರಹ,  ಸೂರ್ಯಗ್ರಹ ಅಂದರೆ ಸೂರ್ಯನ ಬಣ್ಣವನ್ನು ಈ ಮೂರು ಗ್ರಹಗಳು ಈ ಬಣ್ಣವನ್ನು ಪ್ರತಿಬಿಂಬಿಸುತ್ತವೆ.

ಈ ದಾರವು ವ್ಯಕ್ತಿಗಳ ಐಶ್ವರ್ಯಕ್ಕೆ, ಸುಖಕ್ಕೆ ಶಿಕ್ಷಣ ಮತ್ತು ಆರೋಗ್ಯ ಪ್ರದಾನತೆಯಾಗಿದೆ ಹಾಗಾಗಿ  ಆ ಗ್ರಹ ಪೀಡೆ ಇರಬಾರದೆಂಬ ಉದ್ದೇಶದಿಂದ ಆ ಬಣ್ಣಗಳಿರುವ ದಾರವನ್ನು ಕಟ್ಟುತ್ತಾರೆ .

 

ಇದನ್ನು ಪುರುಷರು ಬಲಗೈಗೆ ಮತ್ತು ಸ್ತ್ರೀಯರು ಎಡಗೈಗೆ ಕಟ್ಟಿಕೊಳ್ಳುತ್ತಾರೆ. ಮದುವೆಯಾಗದೇ ಇರುವ ಸ್ತ್ರೀಯರು ಬಲಗೈಗೆ ಕಟ್ಟಿಕೊಳ್ಳುತ್ತಾರೆ .

ಈ ದಾರವನ್ನು ಕಟ್ಟಿಕೊಳ್ಳುವುದರ ಹಿಂದೆ ಇರುವ ಕಥೆ.

 

ಈ ಮೌಳಿ ದಾರವನ್ನು ಏಕೆ ಕಟ್ಟುತ್ತಾರೆ ಎಂಬುದನ್ನು ಈಗ ನಾವು ತಿಳಿಯೋಣ

ವಾಮನ ಅವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು ಹೇಳುತ್ತಾರೆ.

ವಾಮನ ಅವತಾರವಾಗಿ ಬಲಿಚಕ್ರವರ್ತಿಯ ಹತ್ತಿರ ಬಂದು ಒಂದು ವರ ಕೇಳುತ್ತಾನೆ. ಅದಕ್ಕೆ ಬಲಿ ಚಕ್ರವರ್ತಿಯೂ ಸಹ ಒಪ್ಪುತ್ತಾನೆ.

 

 

ಮೂರು ಹೆಜ್ಜೆಗಳ ಸ್ಥಳಬೇಕೆಂದು ಕೇಳಿದಾಗ ವಾಮನನು ಒಂದು ಹೆಜ್ಜೆ ಭೂಮಿಯ ಮೇಲೆ, ಇನ್ನೊಂದು ಹೆಜ್ಜೆಯನ್ನು ಆಕಾಶದ ಮೇಲೆ ಇಡುತ್ತಾನೆ.

ಇನ್ನೂ  ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ವಾಮನ ಬಲಿ ಚಕ್ರವರ್ತಿಗೆ ಕೇಳುತ್ತಾನೆ. ಆಗ ಬಲಿ ಚಕ್ರವರ್ತಿ ಯಾವುದೇ ರೀತಿ ಆಲೋಚಿಸದೆ ತನ್ನ ತಲೆಯ ಮೇಲೆ ಇಡು ಎನ್ನುತ್ತಾನೆ. ಇದರಿಂದ ವಾಮನ ತನ್ನ ಕಾಲನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ಹೋಗುತ್ತಾನೆ.

ಇದರಿಂದ ಬಲಿಯ ದಾನ ಗುಣಗಳನ್ನು ಮೆಚ್ಚಿದ ವಾಮನನು ಬಳಿಗೆ ಮೃತ್ಯುಂಜಯನಾಗಿ ಇರುವಂತೆ ವರ ಕೊಡುತ್ತಾನೆ. ಆ ಸಮಯದಲ್ಲಿ ಈ ಮೌಳಿ ದಾರವನ್ನು ಕಟ್ಟುತ್ತಾನೆ.

ಈ ರೀತಿಯಾಗಿ ಮೌಳಿ ದಾರವನ್ನು ಕಟ್ಟಿಕೊಂಡರೆ ಯಾವುದೇ ಕೇಡು ಸಂಭವಿಸುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

 

 

ಮೃತ್ಯುವೂ ಕೂಡ  ಅಷ್ಟು ಬೇಗ  ಸಮೀಪಿಸುವುದಿಲ್ಲ. ಹೆಚ್ಚಿನ ಕಾಲ ಆರೋಗ್ಯದಿಂದ ಮತ್ತು ಸುಖವಾಗಿ ಬದುಕುತ್ತಾರೆ.

ಈ ದಾರವನ್ನು ಯಾರು ಕಟ್ಟಿಕೊಂಡಿರುತ್ತಾರೋ ಅವರನ್ನು ಸಾಕ್ಷಾತ್ ಬ್ರಹ್ಮ, ಸರಸ್ವತಿ, ವಿಷ್ಣು, ಲಕ್ಷ್ಮೀ, ಮಹೇಶ್ವರರು ಯಾವಾಗಲೂ ಕಾಪಾಡುತ್ತ ಇರುತ್ತಾರೆ. ಇವರು ಯಾವುದೇ ಕಷ್ಟಗಳನ್ನು ಬರದಂತೆ ಕಾಪಾಡುತ್ತಾರೆ.

ಹಾಗಾಗಿ ಮೌಳಿ ದಾರವನ್ನು ಹಿಂದಿನಿಂದಲೂ ನಮ್ಮ ಹಿರಿಯರು ಕಟ್ಟಿಕೊಳ್ಳುತ್ತ ಬಂದಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top