ಭಾರತೀಯರೆಲ್ಲರೂ ಹೆಚ್ಚು ಹೆಮ್ಮೆ ಪಡುವ ವಿಷಯ ಎಂದರೆ ಅದು ನಮ್ಮ ಭಾರತದವರಾದ ರಿಷಿ ಸುನಾಕ್ ಅವರು ಬ್ರಿಟನ್ ರಾಜ್ಯದ ಪ್ರಧಾನಿಯಾಗಿದ್ದಾರೆ. ಇದರಿಂದ ಇಡೀ ಭಾರತೀಯರಿಗೆ ಬಹಳಷ್ಟು ಸಂತೋಷವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ ಭಾರತ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ತೇಟ್ ರಿಷಿ ಸುನಾಕ್ ಅವರಂತೆ ಕಾಣುತ್ತಿದ್ದಾರೆ.
Ashish Nehra – Rishi Sunak memes are just lit 🔥 https://t.co/PRUPqrmvJ5
— Praful Shankar (@TheKochiBoy) October 24, 2022
ಬ್ರಿಟನ್ ರಾಜ್ಯದ ಪ್ರಧಾನಿಯಾಗುವ ಮೂಲಕ ರಿಷಿ ಸುನಾಕ್ ಒಂದು ಮಹತ್ವದ ದಾಖಲೆಯನ್ನು ಮಾಡಿದ್ದಾರೆ. ಅದೇನೆಂದರೆ ಬ್ರಿಟನ್‍ನ ಪ್ರಧಾನಿಯಾಗಿ ಆಯ್ಕೆಗೊಂಡ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರು ಇವರು. ಇದೀಗ ಇವೆಲ್ಲದರ ಮದ್ಯೆ ಆಶಿಶ್ ನೆಹ್ರಾ ಅವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಿಷಿ ಸುನಕ್ ಮತ್ತು ಆಶಿಶ್ ನೆಹ್ರಾ ನೋಡಲು ಒಂದೇ ಥರ ಕಾಣುತ್ತಿರುವುದರಿಂದ ಅಭಿಮಾನಿಗಳು ಒಂದೇ ತರ ಇದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
Ashish Nehra Giving Award to Young Cricketer Virat Kohli ( @imVkohli ) pic.twitter.com/3zMEyo0tDW
— indianhistorypics (@IndiaHistorypic) October 23, 2022
ಇದೀಗ ಆಶಿಶ್ ನೆಹ್ರಾರಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ ಸಣ್ಣವರಿದ್ದಾಗ ಪ್ರಶಸ್ತಿ ಸ್ವೀಕರಿಸಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಹ್ರಾ ಜೊತೆ ಕೊಹ್ಲಿ ಎಂದು ಕೆಲವರು ಫೋಸ್ಟ್ ಮಾಡುವ ಬದಲು ರಿಷಿ ಸುನಕ್ ಜೊತೆ ಕೊಹ್ಲಿ ಎಂದು ಪೋಸ್ಟ್ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
