fbpx
ಸಮಾಚಾರ

ಅಕ್ಟೋಬರ್ 26: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಅಕ್ಟೋಬರ್ 26, 2022 ಬುಧವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪ್ರತಿಪತ್ : Oct 25 04:18 pm – Oct 26 02:42 pm; ದ್ವಿತೀಯಾ : Oct 26 02:42 pm – Oct 27 12:45 pm
ನಕ್ಷತ್ರ : ಸ್ವಾತಿ: Oct 25 02:17 pm – Oct 26 01:24 pm; ವಿಶಾಖೆ: Oct 26 01:24 pm – Oct 27 12:11 pm
ಯೋಗ : ಪ್ರೀತಿ: Oct 25 12:31 pm – Oct 26 10:08 am; ಆಯುಷ್ಮಾನ್: Oct 26 10:08 am – Oct 27 07:27 am
ಕರಣ : ಬಾವ: Oct 26 03:33 am – Oct 26 02:42 pm; ಬಾಲವ: Oct 26 02:42 pm – Oct 27 01:46 am; ಕುಲವ: Oct 27 01:46 am – Oct 27 12:45 pm

Time to be Avoided
ರಾಹುಕಾಲ : 12:03 PM to 1:30 PM
ಯಮಗಂಡ : 7:42 AM to 9:09 AM
ದುರ್ಮುಹುರ್ತ : 11:40 AM to 12:26 PM
ವಿಷ : 06:43 PM to 08:14 PM
ಗುಳಿಕ : 10:36 AM to 12:03 PM

Good Time to be Used
ಅಮೃತಕಾಲ : 03:50 AM to 05:21 AM

Other Data
ಸೂರ್ಯೋದಯ : 6:15 AM
ಸುರ್ಯಾಸ್ತಮಯ : 5:51 PM

 

 

 

ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಇತರೆಯವರು ಮಾಡುವ ತಪ್ಪಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಮುಸುಕಿನ ಗುದ್ದಾಟಕ್ಕೆ ತೆರೆ ಬೀಳಲಿದೆ.

ಹಳೆಯ ನೆನಪಲ್ಲಿ ಮರುಗದೆ ಭವಿಷ್ಯದ ಬಗ್ಗೆ ಚಿಂತಿಸಿ. ಸ್ನೇಹಿತರೊಡನೆ ಬೆರೆತು ಸಂತೋಷದಿಂದಿರಿ. ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದರಿಂದ ಒಂದು ದೊಡ್ಡ ಚಿಂತೆಯಿಂದ ಬಿಡುಗಡೆ ಹೊಂದುವಿರಿ.

ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿರಿ. ಹಿರಿಯರ ಆಶೀರ್ವಾದ ಬಲದಿಂದ ತಡೆ ಹಿಡಿಯಲ್ಪಟ್ಟ ಎಲ್ಲಾ ಕಾರ್ಯಗಳು ಸರಾಗವಾಗಿ ಆಗುವುದು. ನಂಬಿದ ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು

ಎಷ್ಟೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದರೂ ತಪ್ಪುಗಳು ನುಸುಳುವ ಸಾಧ್ಯತೆಯಿದೆ. ಮನೆಯ ಸಮಸ್ಯೆಯನ್ನು ಕಚೇರಿಗೂ, ಕಚೇರಿಯ ಸಮಸ್ಯೆಯನ್ನು ಮನೆಗೆ ಕೊಂಡೊಯ್ಯುವುದು ಸೂಕ್ತವಲ್ಲ. ಕುಲದೇವತಾ ಪ್ರಾರ್ಥನೆ ಮಾಡಿರಿ.

 

ವೈಯಕ್ತಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು. ಸಹನೆ ಇದ್ದರೆ ಅವನ್ನು ಪರಿಹರಿಸಿಕೊಳ್ಳುವುದು ಕಷ್ಟವೇನಲ್ಲ. ನಿಮ್ಮ ಔದಾರ್ಯವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಯತ್ನಿಸುವ ಸಾಧ್ಯತೆ. ಈ ಬಗ್ಗೆ ಎಚ್ಚರ ಅಗತ್ಯ.

 

ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇಲ್ಲದಿರಬಹುದು. ಆದರೆ ನಿಮ್ಮ ಮನೆಯವರಿಗೆ ಇದೆ ಎನ್ನುವುದನ್ನು ಮರೆಯಬೇಡಿ. ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ನಿಮ್ಮ ನಿಲುವು ಕೆಲವರಿಗೆ ಬೇಸರ ತರಿಸಬಹುದು.

 

ನಿಮ್ಮಲ್ಲಿ ಹೊಸ ಆಲೋಚನೆಗಳಿಗೆ ಬರವಿಲ್ಲ. ಸಮಸ್ಯೆ ಇರುವುದು ಅವುಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವದರಲ್ಲಿ ಆರ್ಥಿಕವಾಗಿ ತುಸು ಹಿನ್ನಡೆ ಆಗುವುದು. ಕೌಟುಂಬಿಕ ಸಮಸ್ಯೆಗಳು ಎದುರಾಗುವ ಸಂಭವ. ಶಿವ ಪಂಚಾಕ್ಷ ರಿ ಮಂತ್ರ ಪಠಿಸಿರಿ.

 

ನಿಮಗೆ ಏನು ಬೇಕು ಮತ್ತು ಯಾವ ರೀತಿ ಬೇಕು ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ಮುಂದಿನ ಹೆಜ್ಜೆ ಇಡಿ. ಅನಗತ್ಯವಾಗಿ ಯಾರೊಂದಿಗೂ ವಾದ ಮಾಡಲು ಹೋಗಬೇಡಿ. ಕೆಲಸದ ಒತ್ತಡವು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ.

 

ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಇತರರು ಆಗದು ಎಂದುಕೊಂಡಿದ್ದ ಕೆಲಸವನ್ನು ನೀವು ದೈವಕೃಪೆಯಿಂದ ಪೂರೈಸುವಿರಿ. ಶೀಘ್ರದಲ್ಲಿಯೇ ಮತ್ತೊಂದಿಷ್ಟು ಜವಾಬ್ದಾರಿ ಕೆಲಸಗಳು ನಿಮಗೆ ಎದುರಾಗುವುದು.

ಹಳೆಯದನ್ನು ಮರೆತು ಇಂದಿನ ಆಗು-ಹೋಗುಗಳನ್ನು ಚಿಂತಿಸಿರಿ. ಮನೆ ಮತ್ತು ಕಚೇರಿಯಲ್ಲಿ ಅಸಮಾಧಾನವನ್ನು ಮರೆತು ಮುನ್ನಡೆಯುವ ದಿನವಿದು. ಯಾವಾಗಲೋ ನಡೆದದ್ದನ್ನು ಮನಸ್ಸಿನಲ್ಲಿಟ್ಟುಕೊಂಡರೆ ನಷ್ಟ ನಿಮಗೇ ಹೊರತು ಇತರರಿಗಲ್ಲ.

 

ಮಹತ್ತರ ಕೆಲಸಗಳನ್ನು ಇಂದು ಕೈಗೆತ್ತಿಕೊಳ್ಳಿರಿ. ಧನಾತ್ಮಕ ಚಿಂತನೆಯತ್ತ ಮನಸ್ಸು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ವೃತ್ತಿಗೆ ಸಂಬಂಧಿಸಿದ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವುದು.

ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳು ಕಂಡು ಬರುವ ಸಾಧ್ಯತೆಯಿದೆ. ಅವೆಲ್ಲವೂ ಧನಾತ್ಮಕವೇ ಆಗಿರುವುದರಿಂದ ಯಾವುದೇ ಸಮಸ್ಯೆ ಬಾಧಿಸದು. ವೃತ್ತಿಯಲ್ಲಿ ಮಾನ ಮನ್ನಣೆಗಳು ಸಿಗುವವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top