ಅಕ್ಟೋಬರ್ 27, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ದ್ವಿತೀಯಾ : Oct 26 02:42 pm – Oct 27 12:45 pm; ತೃತೀಯಾ : Oct 27 12:45 pm – Oct 28 10:33 am
ನಕ್ಷತ್ರ : ವಿಶಾಖೆ: Oct 26 01:24 pm – Oct 27 12:11 pm; ಅನುರಾಧ: Oct 27 12:11 pm – Oct 28 10:42 am
ಯೋಗ : ಆಯುಷ್ಮಾನ್: Oct 26 10:08 am – Oct 27 07:27 am; ಸೌಭಾಗ್ಯ: Oct 27 07:27 am – Oct 28 04:32 am; ಶೋಭನ: Oct 28 04:32 am – Oct 29 01:29 am
ಕರಣ : ಕುಲವ: Oct 27 01:46 am – Oct 27 12:45 pm; ತೈತುಲ: Oct 27 12:45 pm – Oct 27 11:41 pm; ಗರಿಜ: Oct 27 11:41 pm – Oct 28 10:34 am
Time to be Avoided
ರಾಹುಕಾಲ : 1:30 PM to 2:57 PM
ಯಮಗಂಡ : 6:15 AM to 7:42 AM
ದುರ್ಮುಹುರ್ತ : 10:07 AM to 10:53 AM, 02:45 PM to 03:32 PM
ವಿಷ : 03:56 PM to 05:26 PM
ಗುಳಿಕ : 9:09 AM to 10:36 AM
Good Time to be Used
ಅಮೃತಕಾಲ : 12:57 AM to 02:27 AM
ಅಭಿಜಿತ್ : 11:40 AM to 12:26 PM
Other Data
ಸೂರ್ಯೋದಯ : 6:15 AM
ಸುರ್ಯಾಸ್ತಮಯ : 5:51 PM
ಅಕ್ಕಪಕ್ಕದ ಜನರೊಂದಿಗೆ ಬೆರೆಯುವುದನ್ನು ಮರೆಯದಿರಿ. ಇದರಿಂದ ಏಕತಾನತೆಯ ಬದುಕಿನಿಂದ ಹೊರಬರುವಿರಿ. ನಿಮ್ಮಲ್ಲಿ ಜೀವನವನ್ನು ಎದುರಿಸುವ ಶಕ್ತಿ ಬರುತ್ತದೆ. ಆಂಜನೇಯ ಸ್ತೋತ್ರವನ್ನು ಪಠಿಸಿರಿ.
ಇಂದು ನೀವು ಆಶಾವಾದಿ ಆಗಿದ್ದೀರಿ. ಆಶಾವಾದಿಗೆ ಜೀವನ ನಿರಾಶವಾದಿಗೆ ಅಲ್ಲ. ಹಾಗಾಗಿ ಸಂಜೆಯ ವೇಳೆ ನಿಮಗೆ ಅನುಕೂಲವಾಗುವಂತಹ ಘಟನೆ ನಡೆಯುವುದು. ಇದರಿಂದ ನೀವು ಸಂತೋಷ ಹೊಂದುವಿರಿ. ಸಂಗಾತಿಯ ಸಹಕಾರ ದೊರೆಯುವುದು.
ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ. ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ಯಾರದೋ ಪಿತೂರಿಯಿಂದಾಗಿ ಹಿರಿಯರ ಕೋಪಕ್ಕೆ ಒಳಗಾಗಬೇಕಾಗುವುದು.
ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇರುತ್ತದೆ. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತಳೆಯಿರಿ. ಹಮ್ಮಿಕೊಂಡ ಉತ್ತಮ ಕಾರ್ಯಗಳು ಗುರು-ಹಿರಿಯರ ಆಶೀರ್ವಾದದಿಂದ ಶುಭವಾಗುವುದು.
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿರಿ. ಈದಿನ ಮಿಶ್ರ ಫಲವನ್ನು ಅನುಭವಿಸುವಿರಿ. ಸಾಮಾಜಿಕವಾಗಿಯೂ, ಸಾಂಸ್ಕೃತಿಕ ವಿಚಾರವಾಗಿಯೂ ಹೆಚ್ಚಿನ ಗೌರವವನ್ನು ಹೊಂದುವಿರಿ.
ಯಾರೂ ಯೋಚಿಸದೆ ಇರುವುದನ್ನು ಮಾಡುವುದೇ ನಿಮ್ಮ ಜಾಯಮಾನ. ಹಾಗಾಗಿ ಅದರಲ್ಲಿನ ಯಶಸ್ಸನ್ನು ಕಂಡು ಇತರೆಯವರು ಅಸೂಯೆ ಪಡುವರು.
ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಸಂಪೂರ್ಣ ವಿಶ್ವಾಸವಿರಲಿ. ನಿಮ್ಮನ್ನು ಇತರೆಯವರು ಸೋಲಿಸಬೇಕೆಂದು ಹಠ ತೊಟ್ಟು ತಾವೇ ಸೋಲುವರು. ಮಾಡುವ ಕೆಲಸಗಳು ದೈವ ಕೃಪೆಯಿಂದ ಸರಿಯಾದ ಕ್ರಮದಲ್ಲಿ ನಡೆಯುವವು.
ಕಳೆದು ಹೋಗಿದ್ದ ಆತ್ಮವಿಶ್ವಾಸ ಮರಳಿ ಬರಲಿದೆ. ಬರಲಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿರಿ. ವ್ಯವಹಾರದಲ್ಲಿ ಗೊಂದಲ ಕಂಡು ಬಂದಲ್ಲಿ ಹಿರಿಯರ ಸಲಹೆ ಪಡೆಯಿರಿ. ನಿಮ್ಮ ಕಾರ್ಯಯೋಜನೆಗಳು ಗೌಪ್ಯವಾಗಿರಲಿ.
ಈ ದಿನ ನಿಶ್ಚಿತ ಗುರಿಯತ್ತ ಪ್ರಯಾಣ ಬೆಳೆಸುವಿರಿ. ಅಡ್ಡಿ ಆತಂಕಗಳು ದೂರವಾಗುವುದು. ಕೆಲವು ವಿಚಾರಗಳನ್ನು ಯೋಚಿಸಿ ಕೈಗೊಳ್ಳಿರಿ.ನಿಮ್ಮ ಘನತೆ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವುದು.
ಅನಿರೀಕ್ಷಿತವಾಗಿ ಮನೆಯಲ್ಲಿ ಗೊಂದಲದ ವಾತಾವರಣ ಮೂಡುವುದು. ವಾಕ್ ಸಮರಕ್ಕೆ ಅವಕಾಶ ಕೊಡಬೇಡಿ. ಮಕ್ಕಳು ನಿಮಗೆ ಸಹಾಯ ಮಾಡುವರು.
ಹೊಸ ಸಂಬಂಧ ಅಥವಾ ಗೆಳೆತನದಿಂದ ಮನಸ್ಸು ಹಕ್ಕಿಯಂತೆ ಹಾರಾಡುವುದು. ನಿಮ್ಮ ಅನುಭವದ ನುಡಿಗಳನ್ನು ಅವರು ಆಲಿಸುವುದರಿಂದ ಮಾನಸಿಕ ದುಗುಡ ಕಡಿಮೆ ಆಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಪರೋಪಕಾರದ ಕೆಲಸಗಳಿಂದ ಕೀರ್ತಿ. ಕೈಕೊಂಡ ಕೆಲಸಗಳು ಪೂರ್ಣಗೊಳ್ಳುವವು. ಬಂಧುವರ್ಗದವರಿಂದ ಸಹಾಯ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಇತರೆಯವರ ವ್ಯಾಜ್ಯದಲ್ಲಿ ಮಧ್ಯಸ್ಥಿಕೆ ವಹಿಸಿ ಉಭಯರಿಂದ ಗೌರವಕ್ಕೆ ಪಾತ್ರರಾಗುವಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
