ಚಲನಚಿತ್ರ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರು ತಮ್ಮ ಪತ್ನಿಯ ಮೇಲೆ ಬೇಕಂತಲೇ ಕಾರು ಹರಿಸಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪೂರಕ ಎಂಬಂತೆ ಸಿಸಿಟಿವಿ ದೃಶ್ಯಗಳೂ ಸೆರೆಯಾಗಿವೆ. ಬೇರೊಂದು ಹುಡುಗಿಯ ಜೊತೆ ಇದ್ದ ಕಿಶೋರ್ ಮಿಶ್ರಾನನ್ನು ಪತ್ನಿ ಮತ್ತು ನಟಿಯಾಗಿರುವ ಯಾಸ್ಮೀನ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಈ ಭಯಾನಕ ಘಟನೆ ನಡೆದಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಅಂಧೇರಿಯಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಪಾರ್ಕಿಂಗ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಕಾರು ಮೈ ಮೇಲೆ ಹರಿದಿದ್ದರಿಂದ ಮಿಶ್ರಾ ಅವರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH | Case registered against film producer Kamal Kishore Mishra at Amboli PS u/s 279 & 338 of IPC for hitting his wife with a car.She claims after the incident she suffered head injuries.We're searching for accused. Further investigation underway:Amboli Police
(CCTV Visuals) pic.twitter.com/0JSleTqyry
— ANI (@ANI) October 26, 2022
ಮಿಶ್ರಾ ಅವರ ಪತ್ನಿಯು ಪತಿಯನ್ನು ಹುಡುಕುತ್ತ ಹೊರಗೆ ಬಂದಿದ್ದಾರೆ. ಈ ಸಂದರ್ಭ ಪಾರ್ಕಿಂಗ್ ಪ್ರದೇಶದಲ್ಲಿ ಬೇರೆ ಮಹಿಳೆಯ ಜೊತೆ ಕಾರನಲ್ಲಿ ಇರುವುದನ್ನು ಗಮನಿಸಿದ್ದಾರೆ. ತಡೆಯಲು ಬಂದ ಪತ್ನಿಯಿಂದ ತಪ್ಪಿಸಿಕೊಳ್ಳಲು ಮಿಶ್ರಾ ಕಾರನ್ನು ಜೋರಾಗಿ ಓಡಿಸಿದ್ದಾರೆ. ಈ ಸಂದರ್ಭ ಪತ್ನಿಗೆ ಕಾರು ಗುದ್ದಿದೆ. ಪತ್ನಿಯ ಕೈ, ಕಾಲು ಹಾಗೂ ತಲೆಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಅಕ್ಟೋಬರ್ 19ರಂದು ನಡೆದಿದ್ದು ಇಡೀ ದೃಶ್ಯಾವಳಿ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಮಿಶ್ರಾ ಪತ್ನಿ ಅಂಧೇರಿ ಪಶ್ಚಿಮ ಪೊಲೀಸ್ ವಲಯದ ಅಂಬೋಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಬೋಲಿ ಪೊಲೀಸರು ಪ್ರಕರಣದ ಮಾಹಿತಿ ನೀಡಿದ್ದು, ಗಂಡನನ್ನು ಹುಡುಕಿಕೊಂಡು ಮಿಶ್ರಾ ಪತ್ನಿ ಹೋದಾಗ ಪಾರ್ಕಿಂಗ್ ಲಾಟ್‌ನಲ್ಲಿ ಇನ್ನೊಂದು ಮಹಿಳೆ ಜೊತೆ ಮಿಶ್ರಾ ಕಾರಿನಲ್ಲಿ ಕುಳಿತಿದ್ದ. ಅವನ್ನು ಪ್ರಶ್ನಿಸಲು ಹೋದಾಗ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಆಕೆಯ ಮೇಲೆ ಕಾರು ಹತ್ತಿಸಿಕೊಂಡು ಮುನ್ನಡೆದಿದ್ದಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
