ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಸಮೀಪಿಸುತ್ತಿದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳ ಮನಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇವರ ಹೆಸರಲ್ಲಿ ಪ್ರತಿ ನಿತ್ಯ ಹಲವಾರು ಕಾರ್ಯಕ್ರಮಗಳು ಸಹ ನಡೆಯುತ್ತಿದೆ. ಇದೆ ದಿನ ಒಂದು ವರ್ಷದ ಹಿಂದೆ ಅಪ್ಪು ಮಾಡಿದ್ದ ಆ ಒಂದು ಟ್ವೀಟ್ ಇದೀಗ ಸಕತ್ ವೈರಲ್ ಆಗುತ್ತಿದೆ.
ಅಪ್ಪು ಕಂಡ ಬಹು ದೊಡ್ಡ ಕನಸು ಎಂದರೆ ಅದು “ಗಂಧದಗುಡಿ” ಸಿನಿಮಾ. ಇದು ಒಂದು ಡಾಕ್ಯುಮೆಂಟರಿ ಸಿನಿಮಾವಾಗಿದೆ. ಈ ಸಿನಿಮಕ್ಕಾಗಿ ಅಪ್ಪು ಹಗಲು ರಾತ್ರಿ ಶ್ರಮ ಪಟ್ಟಿದ್ದಾರೆ. ಆದರೆ ಅಪ್ಪು ಈ ಸಿನಿಮಾವನ್ನು ಬಿಡುಗಡೆ ಮಾಡುವ ಮುಂಚೆಯೇ ಅವರು ನಮ್ಮನ್ನು ಅಗಲಿದ್ದರು. ಆದರೆ ಶುಕ್ರವಾರ (ಅಕ್ಟೋಬರ್ 28) ಈ ಸಾಕ್ಷ್ಯಚಿತ್ರ ಬಿಡುಗಡೆ ಆಗುತ್ತಿದೆ. ಇಂದು (ಅಕ್ಟೋಬರ್ 27) ಹಲವು ಕಡೆಗಳಲ್ಲಿ ಇದರ ಪ್ರೀಮಿಯರ್ ಶೋಗಳು ನಡೆಯುತ್ತಿದ್ದು ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಇವೆಲ್ಲದರ ನಡುವೆ ಕಳೆದ ವರ್ಷ ಇದೆ ದಿನ ಅಪ್ಪು ಮಾಡಿದ್ದ ಆ ಒಂದು ಟ್ವೀಟ್ ಇದೀಗ ಸಕತ್ ವೈರಲ್ ಆಗುತ್ತಿದೆ.
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha @AJANEESHB @PRK_Productions @PRKAudio #mudskipper pic.twitter.com/ncE6CxOQrg— Puneeth Rajkumar (@PuneethRajkumar) October 27, 2021
‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಅಪ್ಪು ಟ್ವೀಟ್ ಮಾಡಿದ್ದರು. ಇದಲ್ಲದೆ ನವೆಂಬರ್ 1 ರಂದು ವಿಶೇಷ ಘೋಷಣೆ ಕೂಡ ಮಾಡುವುದಾಗಿ ಹೇಳಿದ್ದರು. ಆದರೆ ಇದಾದ ಎರಡು ದಿನಗಳಲ್ಲಿ ಅಪ್ಪು ನಮ್ಮನ್ನು ಅಗಲಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
