fbpx
ಸಮಾಚಾರ

ಅಕ್ಟೋಬರ್ 28: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಅಕ್ಟೋಬರ್ 28, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ತೃತೀಯಾ : Oct 27 12:45 pm – Oct 28 10:33 am; ಚತುರ್ಥೀ : Oct 28 10:33 am – Oct 29 08:13 am
ನಕ್ಷತ್ರ : ಅನುರಾಧ: Oct 27 12:11 pm – Oct 28 10:42 am; ಜ್ಯೇಷ್ಠ: Oct 28 10:42 am – Oct 29 09:05 am
ಯೋಗ : ಶೋಭನ: Oct 28 04:32 am – Oct 29 01:29 am; ಅತಿಗಂಡ: Oct 29 01:29 am – Oct 29 10:22 pm
ಕರಣ : ಗರಿಜ: Oct 27 11:41 pm – Oct 28 10:34 am; ವಾಣಿಜ: Oct 28 10:34 am – Oct 28 09:24 pm; ವಿಷ್ಟಿ: Oct 28 09:24 pm – Oct 29 08:13 am

Time to be Avoided
ರಾಹುಕಾಲ : 10:36 AM to 12:03 PM
ಯಮಗಂಡ : 2:57 PM to 4:24 PM
ದುರ್ಮುಹುರ್ತ : 08:34 AM to 09:21 AM, 12:26 PM to 01:12 PM
ವಿಷ : 03:56 PM to 05:25 PM
ಗುಳಿಕ : 7:42 AM to 9:09 AM

Good Time to be Used
ಅಮೃತಕಾಲ : 12:53 AM to 02:22 AM
ಅಭಿಜಿತ್ : 11:40 AM to 12:26 PM

Other Data
ಸೂರ್ಯೋದಯ : 6:15 AM
ಸುರ್ಯಾಸ್ತಮಯ : 5:50 PM

 

 

ಒಂದು ಕಡೆ ಮಾಡಿದ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ, ಒಳಿತಾಗುವುದು.

ಸದ್ಯದ ಪರಿಸ್ಥಿತಿಯು ಏಕಾಂತಮಯವಾದ ಸ್ಥಳವನ್ನು ಬಯಸುತ್ತದೆ. ಅಂತೆಯೆ ಮನಸ್ಸಿನ ನೆಮ್ಮದಿಗಾಗಿ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುವಿರಿ. ಇದರಿಂದಾಗಿ ಮಾನಸಿಕ ನೆಮ್ಮದಿ ದೊರೆಯುವುದು. ಕಷ್ಟಗಳನ್ನು ಎದುರಿಸುವ ಶಕ್ತಿ ಬರುವುದು.

ಸಕಾರಾತ್ಮಕ ಚಿಂತನೆಯಿಂದ ಮಹತ್ತರವಾದ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು.

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಈಗ ನಿಮಗೆ ಒಳ್ಳೆಯ ಕಾಲವಿದೆ. ಉದಾಸೀನ ಮಾಡದೆ ಬಂದ ಉತ್ತಮ ಅವಕಾಶವನ್ನು ಉಪಯೋಗಿಸಿಕೊಂಡು ಮುಂದುವರೆಯಿರಿ.

 

ಎಲ್ಲಾ ಸಂದರ್ಭದಲ್ಲೂ ಕೇವಲ ಮಾತಿನಿಂದ ಕೆಲಸವಾಗಲಾರದು. ಶ್ರಮ ವಹಿಸಿ ದುಡಿದಾಗಲಷ್ಟೆ ಪ್ರತಿಫಲ ಸಿಗುತ್ತದೆ. ನಿಮ್ಮ ಪರವಾಗಿ ಇತರರು ಕೆಲಸ ಮಾಡುತ್ತಾರೆಂಬ ಆಶಾವಾದ ಹುಸಿಯಾಗಲಿದೆ.

 

ಬದುಕಿನ ಎಲ್ಲಾ ಹಾದಿಗಳು ಮುಚ್ಚಿಹೋಗಿವೆ ಎಂಬ ತಲ್ಲಣ ಬೇಡ. ಅದಷ್ಟು ಒಂಟಿಯಾಗಿ ಇರದೆ ನಿಮ್ಮನ್ನು ಇಷ್ಟಪಡುವ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ ನಿಮ್ಮಲ್ಲಿ ನವ ಚೈತನ್ಯ ಮೂಡುತ್ತದೆ.

 

ಆರ್ಥಿಕ ಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿರುವುದರಿಂದ ಕೆಲವು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಮನೆಯಲ್ಲಿ ಸಂಗಾತಿಯ ಮಾತುಗಳಿಗೂ ಬೆಲೆ ಕೊಟ್ಟರೆ ಒಳ್ಳೆಯದು.

 

ಹೊಸ ಹೊಸ ಸಾಹಸಗಳಿಗೆ ಕೈಹಾಕುವುದರಿಂದ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಬಂಧು ಬಾಂಧವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.

 

ಕಷ್ಟದಲ್ಲಿರುವವರಿಗೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ದೈವದ ಅನುಗ್ರಹದಿಂದ ನಿಮಗೆ ಒಳಿತಾಗುವುದು.

ಐಷಾರಾಮಿ ಜೀವನ ಸಾಗಿಸುವ ಕನಸಿರಲಿ. ಆದರೆ ಅದಕ್ಕೆ ಶ್ರಮದ ಬೆವರಿನ ಹನಿ ಹರಿಸಿದಾಗ ಮಾತ್ರ ಸುಖ ದೊರೆಯುವುದು. ಒಂದು ದೃಢ ನಿರ್ಧಾರದಿಂದ ಕಾರ್ಯ ಪ್ರವೃತ್ತರಾಗಿ. ಒಳಿತಾಗುವುದು.

 

ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬುದು ಜನಜನಿತವಾಗಿದೆ. ಹಾಗಾಗಿ ನೀವು ನಿಮ್ಮ ವಿಚಾರಗಳನ್ನು ಪರರ ಮುಂದೆ ಹೇಳುವಾಗ ಎರಡು ಬಾರಿ ಚಿಂತಿಸಿ ವಿಚಾರಗಳನ್ನು ಮಂಡಿಸಿ. ಇಲ್ಲದೆ ಇದ್ದಲ್ಲಿ ವೃಥಾ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.

ಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸದಿರಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿ. ಒಳಿತಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top