ದಿವಂಗತ ನಟ ಪುನೀತ್ ರಾಜಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಗಂಧದಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಕಾಲಿಕವಾಗಿ ಸಾವನ್ನಪ್ಪಿದ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಪ್ರೀತಿಯ ಅಪ್ಪು ಅವರನ್ನು ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕತೆಗೆ ಈ ದಿನ ಸಾಕ್ಷಿಯಾಗಿದೆ.
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ…
Looking forward to see you all in the theaters ❤️
– Team PRK#GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU pic.twitter.com/9gEwyGCzIT
— Puneeth Rajkumar (@PuneethRajkumar) October 27, 2022
ಅಪ್ಪು ಬಳಸುತ್ತಿದ್ದ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತೆ ಆಕ್ಟೀವ್ ಆಗಿದೆ. ವರ್ಷದಿಂದ ಈ ಖಾತೆಯನ್ನೂ ಯಾರೂ, ಯಾವುದೇ ಕಾರಣಕ್ಕೂ ಬಳಸುತ್ತಿರಲಿಲ್ಲ. ವರ್ಷದ ನಂತರ, ಅದರಲ್ಲೂ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಅದು ಮತ್ತೆ ಆಕ್ಟೀವ್ ಆಗಿದೆ.
ಹೌದು, ಗಂಧದಗುಡಿ ಸಿನಿಮಾದ ಕುರಿತಂತೆ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ… Looking forward to see you all in the theaters ಬರೆದು, ಜೊತೆಗೆ ಹಾರ್ಟ್ ಸಿಂಬಲ್ ಹಾಕಿ ಟ್ವೀಟ್ ಮಾಡಲಾಗಿದೆ.
ಈ ಪೋಸ್ಟ್ ನೋಡಿದವರೇ ಜನರು ಭಾವುಕರಾಗಿದ್ದು, ಒಂದು ಕ್ಷಣ ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಟ್ವೀಟ್ ಮಾಡಿದ್ರು ಅಂದುಕೊಂಡೆ ಎನ್ನುವ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. 2021ರ ಅಕ್ಟೋಬರ್ 21 ರಂದು ಬೆಳಗ್ಗೆ 7.33ಕ್ಕೆ ಭಜರಂಗಿ 2 ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಟ್ವಿಟರ್‌ನಲ್ಲಿ ವಿಶ್ ಮಾಡಿದ್ದೇ ಕೊನೆ. ಆ ಬಳಿಕ ಅವರ ದಿಢೀರ್ ಅಗಲಿಕೆ ಇಂದಿಗೂ ಕನ್ನಡಿಗರನ್ನು ಕಾಡುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
