fbpx
ಸಮಾಚಾರ

ಬಲಿ ಕೊಡಲು ತಂದ ಕೋಳಿಯ ಬದಲು ತಾನೇ ಪ್ರಾಣ ಕಳೆದುಕೊಂಡ ವ್ಯಕ್ತಿ

ಬಲಿ ಕೊಡಲೆಂದು ಕೋಳಿಯನ್ನು ತಂದಿದ್ದ ವ್ಯಕ್ತಿಯೊಬ್ಬರು ಆ ಕೋಳಿಯ ಬದಲು ತಾನೇ ಪ್ರಾಣ ಕಳೆದುಕೊಂಡ ವಿಚಿತ್ರವಾದ ಘಟನೆಯೊಂದು ನಡೆದಿದೆ. ಚೆನ್ನೈನ ಪಲ್ಲಾವರಂನಲ್ಲಿ ಬಲಿಗಾಗಿ ಖರೀದಿಸಿದ ಕೋಳಿಯನ್ನು ಹಿಡಿಯಲು ಹೋದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೊಸದಾಗಿ ನಿರ್ಮಿಸಲಾಗಿದ್ದ ಮನೆಗೆ ದುಷ್ಟರ ದೃಷ್ಟಿ ಬೀಳಬಾರದು ಎಂದು ಬಲಿಗಾಗಿ ಕೋಳಿಯನ್ನು ತರಲಾಗಿತ್ತು. ಆ ಕೋಳಿ ಆ ಮನೆಯ ಕಾರ್ಮಿಕನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಿತ್ತು. ಬಲಿಗೆ ತಂದಿದ್ದ ಕೋಳಿಯನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಹೊಂಡಕ್ಕೆ ಬಿದ್ದು ಆ 70 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ವಿಚಿತ್ರ ಘಟನೆ ನಡೆದಿದೆ.

70 ವರ್ಷದ ರಾಜೇಂದ್ರನ್ ಮನೆಯ ಯಜಮಾನನ ಆದೇಶದಂತೆ ಕೋಳಿ ಬಲಿಯನ್ನು ನೀಡಬೇಕಾಗಿತ್ತು. ಹೀಗಾಗಿ, ಮುಂಜಾನೆ 4 ಗಂಟೆಗೆ ಬಲಿ ಒಡುವ ಸ್ಥಳಕ್ಕೆ, ಅಂದರೆ ಹೊಸ ಮನೆಗೆ ಕೋಳಿಯನ್ನು ತೆಗೆದುಕೊಂಡು ಹೋಗಿದ್ದರು. ಅವರು ಮನೆಯ ಮೂರನೇ ಮಹಡಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕೋಳಿ ಅವರಿಂದ ತಪ್ಪಿಸಿಕೊಂಡಿತ್ತು. ಆ ಕೋಳಿಯನ್ನು ಹಿಡಿಯಲು ಓಡಿದ ಅವರು ಆ ಮನೆಯಲ್ಲಿ ಲಿಫ್ಟ್ ಅಳವಡಿಸಲು ಅಗೆದಿದ್ದ 20 ಅಡಿ ಆಳದ ಹೊಂಡಕ್ಕೆ ಬಿದ್ದಿದ್ದಾರೆ. ಬಿದ್ದ ರಭಸದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ರಾಜೇಂದ್ರನ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ರಾಜೇಂದ್ರನ್ ಬದುಕುಳಿಯಲಿಲ್ಲ

ಬಲಿಯಾಗಬೇಕಿದ್ದ ಹುಂಜ ಕೂಡ ಕಟ್ಟಡದಿಂದ ಬಿದ್ದು ಬದುಕುಳಿದಿದ್ದು, ರಾಜೇಂದ್ರನ ದೇಹದ ಮೇಲೆ ನಿಂತಿದ್ದನ್ನು ಲೋಕೇಶ್ ಕಂಡಿದ್ದಾರಂತೆ! ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top