ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳಬೇಕೆಂದು ಹಲವಾರು ಸಾಹಸಗಳನ್ನು ಮಾಡಿರುವುದನ್ನು ನಾವು ಗಮನಿಸಿರುತ್ತೇವೆ. ಅತ್ಯಂತ ಚಿತ್ರವಿಚಿತ್ರವಾದ ಭಯಂಕರ ಸಾಹಸಗಳನ್ನು ಅವರು ಮಾಡುತ್ತಾರೆ. ಇದೀಗ ಇಂತದ್ದೇ ಒಂದು ಸಾಹಸ ಮಾಡಲು ಹೋಗಿ ಇದೀಗ ಪೋಲೀಸರ ಅತಿಥಿಯಾಗಿದ್ದಾರೆ.
ದೀಪಾವಳಿ ಹಬ್ಬದಂದು ನಾವೆಲ್ಲ ದೀಪ ಬೆಳಗಿಸಿ ಪಟಾಕಿಗಳನ್ನು ಹೊಡೆಯುತ್ತೇವೆ. ಕೆಲವರು ಕೈಯಲ್ಲಿ ಪಟಾಕಿ ಹಿಡಿದು ಹೊಡೆಯುವುದನ್ನು ಸಹ ನಾವು ನೋಡಿದ್ದೇವೆ. ಇದರಿಂದ ಹಲವಾರು ತೊಂದರೆಗಳು ಸಹ ಆಗಿದೆ. ಇದೀಗ ಇದನೆಲ್ಲ ಮೀರಿ ಕಾರಿನ ಡಿಕ್ಕಿಯಲ್ಲಿ ಪಟಾಕಿಯನ್ನು ಇಟ್ಟು ಅದನ್ನು ರಸ್ತೆಯಲ್ಲಿ ಓಡಿಸುತ್ತಾ ಸಿಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
#WATCH | A video went viral on social media where some people were seen bursting firecrackers on top of a moving car’s boot near DLF Phase-III in Gurugram on Diwali (Oct 24). All three people have been arrested: Preetpal Singh, ACP Gurugram
(Source: Viral video) pic.twitter.com/UUFCytYLEy
— ANI (@ANI) October 28, 2022
ಈ ವಿಡಿಯೋವನ್ನು ಗಮನಿಸಿದರೆ ಕಾರಿನ ಡಿಕ್ಕಿ ಮೇಲೆ ಪಟಾಕಿ ಪೆಟ್ಟಿಗೆಯೊಂದನ್ನು ಇಟ್ಟುಕೊಂಡು ಕಾರನ್ನು ಗುರುಗ್ರಾಮ್‍ನ ಬೀದಿಗಳಲ್ಲಿ ವೇಗವಾಗಿ ಚಲಾಯಿಸಲಾಗುತ್ತಿದೆ. ಅಕ್ಕ ಪಕ್ಕ ಬಹಳಷ್ಟು ಗಾಡಿಗಳು ಸಹ ಓಡಾಡುತ್ತಿದೆ. ಆದರೂ ಸಹ ಇವರಿಗೆ ಯಾವುದೇ ರೀತಿಯ ಪರಿವೆ ಇಲ್ಲವೆಂಬಂತೆ ಗಾಡಿ ಓಡಿಸುತ್ತಾ ಪಟಾಕಿಯನ್ನು ಸಿಡಿಸುತ್ತಿದ್ದಾರೆ. ಇಷ್ಟೇಅಲ್ಲದೆ ಕಾರಿನ ಡಿಕ್ಕಿಯ ಮೇಲ್ಬಾಗದಲ್ಲೂ ಸಹ ವಿಪರೀತ ಹೊಗೆ ಕೂಡ ಆವರಿಸಿಕೊಂಡಿತ್ತು.
ಘಟನೆಗೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
