ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಇಂದಿಗೂ ಸಹ ಅಪ್ಪು ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾ ಗಂಧದಗುಡಿ ರಾಜ್ಯದಂತ ನೆನ್ನೆ ಬಿಡುಗಡೆಯಾಗಿತ್ತು. ಈ ವೇಳೆ ಅಭಿಮಾನಿಗಳು ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿದ ಕಾರಣ ಕೆಲ ಕಾಲ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.
ಅಪ್ಪು ಕಂಡ ದೊಡ್ಡ ಕನಸು ಎಂದರೆ ಅದು ಗಂಧದಗುಡಿ ಸಿನಿಮಾ. ಈ ಸಿನಿಮಾಕ್ಕಾಗಿ ಅಪ್ಪು ಹಗಲು ರಾತ್ರಿ ಕಷ್ಟಪಟ್ಟಿದ್ದಾರೆ. ಆದರೆ ಈ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಅಪ್ಪು ನಮ್ಮನ್ನು ಅಗಲಿದ್ದಾರೆ. ಹೀಗಾಗಿ ಅಪ್ಪು ಅವರ ಕೊನೆ ಸಿನಿಮಾವಾಗಿರುವ ಕಾರಣ ಅಭಿಮಾನಿಗಳಿಗೆ ಪ್ರೀತಿ ಹೆಚ್ಚು ಇರುವುದು ಸಹಜ ಎಂದು ಹೇಳಬಹುದು. ಹೀಗಾಗಿ ಚಿಕ್ಕಮಗಳೂರಿನ ನಾಗಲಕ್ಷ್ಮೀ ಥಿಯೇಟರ್‌ನಲ್ಲಿ ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಚಿತ್ರಮಂದಿರದ ಒಳಗೆ ಈ ರೀತಿ ಸಂಬ್ರಮಿಸಿದ್ದ ಕಾರಣ ದಟ್ಟವಾದ ಹೋಗೆ ಆವರಿಸಿತ್ತು. ಈ ಕಾರಣ ಥೀಯೇಟರ್ ನ ಮಾಲೀಕರು ಕೆಲ ಕಾಲ ಪ್ರದರ್ಶನವನ್ನು ನಿಲ್ಲಿಸಿದ್ದರು.
ಇದಾದ ನಂತರ ಥೀಯೇಟರ್ ಮಾಲೀಕರು ಯಾರು ಕೂಡಾ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಇದಾದ ನಂತರ ಸಹಜವಾಗಿ ಚಿತ್ರ ಪ್ರದರ್ಶನ ಗೊಂಡಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿದ್ದ ಅಪ್ಪು ಅಭಿಮಾನಿಗಳ ಮನಸಲ್ಲಿ ಖುಷಿ ವಿಜೃಂಭಿಸುತ್ತಿತ್ತು. ಅದು ಕೂಡ ಹೆಚ್ಚಾಗಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
