ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವ ಒಂದು ಸುಂದರವಾದ ಕ್ಷಣ. ಹೀಗಾಗಿ ಮದುವೆಯ ಮುಂಚೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುವುದು ಸಹಜ. ನಮೆಲ್ಲರ ಪ್ರಕಾರ ಪ್ರೀ ವೆಡ್ಡಿಂಗ್ ಶೂಟ್ ಎಂದರೆ ಒಂದು ಸುಂದರವಾದ ಸ್ಥಳಕ್ಕೆ ಹೋಗಿ ಶೂಟ್ ಮಾಡಿಸುವುದು ಎಂದು. ಆದರೆ ಎಂದಾದರೂ ನೀವು ಸಿನಿಮೀಯ ರೀತಿಯಲ್ಲಿ ಸ್ಟಂಟ್ ಮಾಡುವ ಮೂಲಕ ಪ್ರೀ ವೆಡ್ಡಿಂಗ್ ಶೂಟ್ ಮಾಡಿರುವುದು ನೋಡಿದ್ದೀರಾ?
ನವಜೋಡಿಯೊಬ್ಬರು ಬಾಲಿವುಡ್ ಶೈಲಿಯಲ್ಲಿ ಬೈಕ್ ಸಾಹಸ ಮಾಡುವ ಮೂಲಕ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ನವಜೋಡಿ ಬೈಕ್ ಅಲ್ಲಿ ಕೂತು ತಮ್ಮ ಬೈಕಿಗೆ ಕ್ರೇನ್ ಮೂಲಕ ಹಗ್ಗವನ್ನು ಕಟ್ಟಿಸಿ ಕಾರಿನ ಮೇಲೆ ಆರುತ್ತಾರೆ. ಈ ದೃಶ್ಯ ಯಾವುದೇ ಬಾಲಿವುಡ್ ಸಿನಿಮಾಗಳಿಗೂ ಕಮ್ಮಿ ಇಲ್ಲ ಎಂದು ಹೇಳಬಹುದು.
pre-wedding shoots – i’m getting this pic.twitter.com/Ynwf7Kxr6a
— Best of the Best (@bestofallll) October 27, 2022
ಬೆಸ್ಟ್ ಆಫ್ ದಿ ಬೆಸ್ಟ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಕ್ಟೋಬರ್ 27 ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಇಲ್ಲಿಯವರೆಗೂ ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಪ್ರತಿಯೊಬ್ಬರೂ ಸಹ ಇವರ ಸಾಹಸವನ್ನು ಮೆಚ್ಚಿ, ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
