ಬಿಲ್ ಪಾವತಿ ಮಾಡೋಕೆ ಪರ್ಸೆಂಟೇಜ್ ಕಿರುಕುಳ ನೀಡಿದ ಆರೋಪ ಹೊರಿಸಿ ಗುತ್ತಿಗೆದಾರನೊಬ್ಬ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್-19 ವೇಳೆ ಗ್ರಾ.ಪಂ.ಗಳಿಗೆ ಪರಿಕರ ಪೂರೈಸಿದ್ದ ಬಿಲ್ ಪಾವತಿಗೆ ಅಧಿಕಾರಿಗಳು ಶೇ.40ಕ್ಕಿಂತ ಹೆಚ್ಚಿನ ಕಮಿಷನ್ ಕೇಳಿ ಬಿಲ್ ತಡೆ ಹಿಡಿದಿದ್ದಾರೆ. ಈಗ ತಾನು ಸಾಲದಿಂದ ಕಂಗೆಟ್ಟಿದ್ದು, ಆದ್ದರಿಂದ ದಯಾಮರಣಕ್ಕೆ ಅವಕಾಶ ನೀಡುವಂತೆ ನಗರದ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಗುತ್ತಿಗೆದಾರ ಎ.ಬಸವರಾಜು 2020-21ರಲ್ಲಿ ಕೋವಿಡ್ ಪರಿಕರಗಳನ್ನ ಸರಬರಾಜು ಮಾಡಿದ್ದರು. ಅದರಲ್ಲಿ ಮೂಡಗೆರಿ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದರು. ಆದರೆ ಪರಿಕರ ಸರಬರಾಜು ಮಾಡಿ 2ವರ್ಷ ಗತಿಸಿದರೂ ಬಿಲ್ ಪಾವತಿ ಮಾತ್ರ ಆಗಿಲ್ಲ. . ಬಿಲ್ ಪಾವತಿ ಮಾಡಲು EO (exucutive officer) ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದು ಇದಕ್ಕೆ ಬೇಸತ್ತು ಗುತ್ತಿಗೆದಾರ ಬಸವರಾಜ್ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
. ಕಮೀಷನ್ ನೀಡದ ಹಿನ್ನೆಲೆಯಲ್ಲಿ ಹಣವನ್ನ ಬಿಡುಗಡೆ ಮಾಡಿಲ್ಲ. ಪರಿಣಾಮ ನನಗೆ ಸಾಲಗಾರರ ಕಾಟ ಹೆಚ್ಚಾಗಿದೆ. ಹೀಗಾಗಿ ನನಗೆ ಇಚ್ಛಾ ಮರಣಬೇಕು ಎಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾನೆ. ಮಾತ್ರವಲ್ಲ ಶಾಸಕರ ಹೆಸರಲ್ಲೂ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಬಸವರಾಜ್ ಆರೋಪಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
