ಮೊರ್ಬಿ ಸೇತುವೆಯ ಸಿಸಿಟಿವಿ ಫೂಟೇಜ್ ಸೋಮವಾರ ಬಿಡುಗಡೆಯಾಗಿದೆ. ಮಚ್ಚು ನದಿಯ ಮೇಲಿನ ತೂಗು ಸೇತುವೆ ಕುಸಿದ ಭಯಾನಕ ದೃಶ್ಯಾವಳಿ ವಿಡಿಯೋ ಇಲ್ಲಿದೆ ನೋಡಿ. ಘಟನೆಗೆ ಸಂಬಂಧಪಟ್ಟಂತೆ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಗುಜರಾತ್ ಮೋರ್ಬಿ ತೂಗುಸೇತುವೆ ದುರಂತ – ಸಿಸಿಟಿವಿ ಕ್ಯಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ! pic.twitter.com/7deEzyV333
— ಅರಳಿ ಕಟ್ಟೆ (@aralikattez) October 31, 2022
ಮೊಬಿರ್ ಜಿಲ್ಲೆಯ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ಮೇಲೆ ಛತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ನದಿ ತೀರದಲ್ಲಿ ಜಮಾಯಿಸಿದ್ದರು. ಭಾನುವಾರ ಸಂಜೆ 6.30ರಲ್ಲಿ ಪ್ರವಾಸಿಗರು ಸೇರಿ 500ಕ್ಕೂ ಅಧಿಕ ಮಂದಿ ಸೇತುವೆ ಮೇಲೆ ನಿಂತಿದ್ದರು. ಆಗ ಸೇತುವೆ ಕುಸಿದಿದ್ದು, 150ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ.
ಗುಜರಾತ್ ಮೋರ್ಬಿ ತೂಗುಸೇತುವೆ ದುರಂತ – ಸಿಸಿಟಿವಿ ಕ್ಯಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ! pic.twitter.com/7deEzyV333
— ಅರಳಿ ಕಟ್ಟೆ (@aralikattez) October 31, 2022
ಈ ತೂಗು ಸೇತುವೆ 140 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತು. 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ 230 ಮೀಟರ್ ಉದ್ದದ ಈ ಸೇತುವೆಯನ್ನು ನವೀಕರಣದ ಸಲುವಾಗಿ ಕಳೆದ ಆರು ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್ 26) ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
