ಎಲೋನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆಯೇ ಅದರ ಕಾರ್ಯವೈಖರಿ ಸೇರಿದಂತೆ ಹೆಚ್ಚಿನ ವಿಷಯಗಳು ಬದಲಾಗುತ್ತವೆ ಎಂದು ತಿಳಿಸಲಾಗಿತ್ತು. ಅದರಂತೆಯೇ ಇದೀಗ ಮಸ್ಕ್ ಬ್ಲೂ ಟಿಕ್ ಮಾರ್ಕ್ ಹೊಂದಿರುವ ಖಾತೆಗಳಿಗೆ ಪಾವತಿ ಮಾಡುವ ಹೊಸ ಯೋಜನೆಯನ್ನು ದೃಢಪಡಿಸಿದ್ದಾರೆ.
ಟ್ವಿಟ್ಟರ್ ಸಂಸ್ಥೆಯ ಹೊಸ ಮಾಲಿಕ ಎಲಾನ್ ಮಸ್ಕ್ ಅವರು ಬ್ಲೂ ಟಿಕ್‌ಗಾಗಿ ತಿಂಗಳಿಗೆ 8 (ಅಂದಾಜು 661 ರೂ.) ಪಾವತಿಸಬೇಕಾಗುತ್ತದೆ ಎಂದು ಮಂಗಳವಾರ ಘೋಷಿಸಿದ್ದಾರೆ. ತಿಂಗಳಿಗೆ 8 ಡಾಲರ್ ಅಂದರೆ ಅಂದಾಜು 662 ರೂ. ಮೊತ್ತವನ್ನು ಮಂಗಳವಾರ ಘೋಷಿಸಿದ್ದಾರೆ ಎಲಾನ್ ಮಸ್ಕ್. ಈ ಹಿನ್ನೆಲೆ ಟ್ವಿಟ್ಟರ್‌ನಲ್ಲಿ ಬ್ಲೂಟಿಕ್ ಹೊಂದಿರುವವರು ಇನ್ಮೇಲೆ ಅದನ್ನು ಮುಂದುವರಿಸಲು ತಿಂಗಳಿಗೆ 8 ಡಾಲರ್ ಶುಲ್ಕ ನೀಡಬೇಕಾಗಿದೆ. ಇದು ಬಳಕೆದಾರರಿಗೆ ದೀರ್ಘ ವಿಡಿಯೋ ಮತ್ತು ಆಡಿಯೋವನ್ನು ಪೋಸ್ಟ್ ಮಾಡಲು ಹಾಗೂ “ಸ್ಪ್ಯಾಮ್ ಮತ್ತು ಸ್ಕ್ಯಾಮ್’’ ವಿರುದ್ಧ ಹೋರಾಡಲು ಅನುವು ಮಾಡಿಕೊಡುತ್ತದೆ. ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ, ಖರೀದಿ ಸಾಮರ್ಥ್ಯದ ಅನುಗುಣವಾಗಿ ಆಯಾ ದೇಶದಲ್ಲಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯ ಬೆಲೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಮಸ್ಕ್ ಅವರು ಹೇಳಿದ್ದಾರೆ.
ಎಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್ ಹಣವನ್ನು ನೀಡಿ ಟ್ವಿಟ್ಟರ್ ಕಂಪನಿಯನ್ನು ಖರೀದಿ ಮಾಡಿದ್ದಾರೆ. ಈ ಹಿನ್ನೆಲೆ, ಟ್ವಿಟ್ಟರ್‌ನ ಆದಾಯವನ್ನು ಹೆಚ್ಚಿಸಲು ಬ್ಲೂ ಟಿಕ್ ಪರಿಶೀಲನೆಗಾಗಿ 8 ಡಾಲರ್ ನಷ್ಟು ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
