ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಇಂದಿಗೂ ಸಹ ಅಪ್ಪು ನೆನಪು ಮಾತ್ರ ಅಭಿಮಾನಿಗಳ ಮನಸಲ್ಲಿ ಅಚ್ಚೆಯಾಗಿ ಉಳಿದಿದೆ. ಅಪ್ಪು ಅವರಿಗೆ ಅಭಿಮಾನಿಗಳ ಸಂಖ್ಯೆ ಬಹಳವಿದೆ ಎಂಬುದು ನಮಗೆಲ್ಲ ಗೊತ್ತು. ಅದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸಹ ಅಪ್ಪು ಅವರಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎಂದರೆ ಆಸ್ಟ್ರೇಲಿಯಾ ದೇಶದಲ್ಲಿರುವ ಕನ್ನಡಿಗರು ಪಾರ್ಕ್ ಒಂದಕ್ಕೆ ಅಪ್ಪು ಅವರ ಹೆಸರನ್ನು ಇಟ್ಟಿದ್ದಾರೆ.
ಅಪ್ಪು ಅವರಿಗೆ ನವೆಂಬರ್ 1 ರಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಹೀಗಾಗಿ ಆಸ್ಟ್ರೇಲಿಯಾ ದಲ್ಲಿ ನೆಲೆಸಿರುವ ಕನ್ನಡಿಗರು ಅಪ್ಪು ಅವರಿಗೆ ವಿಶೇಷ ರೀತಿಯಲ್ಲಿ ಗೌರವವನ್ನು ಸೂಚಿಸಿದ್ದಾರೆ. ಅದೇನೆಂದರೆ ಅಪ್ಪು ಅವರ ಸ್ಮರಣಾರ್ಥವಾಗಿ ಅಲ್ಲಿನ ಪಾರ್ಕ್‌ಗೆ ʻಅಪ್ಪು ಪಾರ್ಕ್ʼ ಎಂದು ಹೆಸರಿಡಲಾಗಿದೆ.
ಕರ್ನಾಟಕ ಸಂಪ್ರದಾಯದಂತೆ ಆಸ್ಟ್ರೇಲಿಯಾ ದೇಶದಲ್ಲಿ "ಅಪ್ಪು ಪಾರ್ಕ್" ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಉದ್ಘಾಟನೆ!
ಕನ್ನಡ ಮಣ್ಣಿನ ಹೆಮ್ಮೆಯ ಪುತ್ರ#Kannada #Kannadiga #Karnataka pic.twitter.com/eVnehVtGNv— GC ChandraShekhar (@GCC_MP) November 1, 2022
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಪ್ಪು ಪಾರ್ಕ್ ಉದ್ಘಾಟನೆ ಮಾಡಲಾಗಿತ್ತು. ಈ ಕುರಿತು ರಾಜ್ಯಸಭಾ ಸಂಸದರಾದ ಜೆ.ಸಿ ಚಂದ್ರಶೇಖರ್ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮೂಲಕ ಇವರು ಕರ್ನಾಟಕ ಸಂಪ್ರದಾಯದಂತೆ ಆಸ್ಟ್ರೇಲಿಯಾ ದೇಶದಲ್ಲಿ “ಅಪ್ಪು ಪಾರ್ಕ್” ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಉದ್ಘಾಟನೆ! ಕನ್ನಡ ಮಣ್ಣಿನ ಹೆಮ್ಮೆಯ ಪುತ್ರ ಎಂದು ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
