ದಕ್ಷಿಣ ಭಾರತದ ಖ್ಯಾತ ನಟಿ ಹಂಸಿಕಾ ಮೋತ್ವಾನಿ ಅವರು ತಮ್ಮ ಮದುವೆಯ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಹನ್ಸಿಕಾ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಯಾವುದೇ ಹನ್ಸಿಕಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಮೊದಲ ಬಾರಿಗೆ ಹನ್ಸಿಕಾ ಬಾವಿ ಪತಿಯನ್ನು ಪರಿಚಯಿಸಿದ್ದಾರೆ.
ಇನ್ನೂ ಮದುವೆಗೂ ಮುನ್ನ ಹೈಫಿಲ್ ಟವರ್ ಮುಂದೆ ಭಾವಿ ಪತಿ ಸೊಹೈಲ್ ಕಥುರಿಯಾ ಅವರು ಹನ್ಸಿಕಾ ಮೊಟ್ವಾನಿ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಶೇರ್ ಮಾಡಿ, ‘ಈಗ ಮತ್ತು ಎಂದೆಂದಿಗೂ’ ಕ್ಯಾಪ್ಷನ್ ನೀಡಿದ್ದಾರೆ.ಫೋಟೋ ಶೇರ್ ಮಾಡಿ, ‘ಈಗ ಮತ್ತು ಎಂದೆಂದಿಗೂ’ ಕ್ಯಾಪ್ಷನ್ ನೀಡಿದ್ದಾರೆ.
ಮೂಲಗಳ ಪ್ರಕಾರ ಹನ್ಸಿಕಾ ಡಿಸೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಡಿಸೆಂಬರ್ 2 ರಂದು ಹನ್ಸಿಕಾ ಅವರ ಮದುವೆಯ ಪೂರ್ವ ಸಂಭ್ರಮಗಳು ಪ್ರಾರಂಭವಾಗಲಿವೆ. ಈ ಕಾರ್ಯಕ್ರಮವು ಸೂಫಿ ರಾತ್ರಿಯೊಂದಿಗೆ ಪ್ರಾರಂಭವಾಗಲಿದೆ. ಡಿಸೆಂಬರ್ 3 ರಂದು ಮೆಹೆಂದಿ ಮತ್ತು ಸಂಗೀತ ಸಮಾರಂಭಗಳು ನಡೆಯಲಿವೆ. ಡಿಸೆಂಬರ್ 4 ರಂದು ಹನ್ಸಿಕಾ ಮತ್ತು ಸೊಹೈಲ್ ಅವರ ಹಳದಿ ಕಾರ್ಯಕ್ರಮ ನಡೆಯುತ್ತದೆ, ನಂತರ ಸಂಜೆ ಸಪ್ತಪದಿ ನಡೆಯಲಿದೆ. ಆರತಕ್ಷತೆಯ ಬದಲಿಗೆ, ರಾತ್ರಿಯಲ್ಲಿ ಕ್ಯಾಸಿನೋದಲ್ಲಿ ಪಾರ್ಟಿ ಇರಲಿದೆ.
View this post on Instagram
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
