ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಬಹಳಷ್ಟು ಸೌಂಡ್ ಮಾಡುತ್ತಿದೆ. ಬಾಕ್ಸ್ ಆಫೀಸ್ ಅನ್ನು ಈ ಸಿನಿಮಾ ಧೂಳಿಪಟ ಮಾಡುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಈ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಿ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿನಿಮಾ ನೋಡಿದ್ದು, ಇದರ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಕಾಂತಾರ ಸಿನಿಮಾವನ್ನು ವೀಕ್ಷಿಸಿದ ಇವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಇದರ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ” ಬೆಂಗಳೂರಿನಲ್ಲಿ ನನ್ನ ಆಪ್ತರು ಮತ್ತು ಸ್ವಯಂ ಸೇವಕರ ಜೊತೆ ಈ ಸಿನಿಮಾವನ್ನು ನೋಡಿದ್ದೇನೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ರ ಇದಾಗಿದ್ದು, ಇಂತಹ ಚಿತ್ರಗಳು ಹೆಚ್ಚೆಚ್ಚು ತೆರೆಯ ಮೇಲೆ ಬರಬೇಕು ಎಂದು ಅವರು ಆಶಿಸಿದ್ದಾರೆ. ಪ್ರತಿಯೊಬ್ಬರು ಸಹ ನೋಡಲೇಬೇಕಾದ ಸಿನಿಮಾವಿದು ” ಎಂದು ಅವರು ತಿಳಿಸಿದ್ದಾರೆ.
With a team of volunteers and well-wishers watched #KantaraMovie in Bengaluru.
Well made @shetty_rishab (writer/director/actor).👏
The film captures the rich traditions of Tuluvanadu and Karavali.@rajeshpadmar @SamirKagalkar @surnell @MODIfiedVikas @KiranKS @Shruthi_Thumbri pic.twitter.com/vVbbk5fNno
— Nirmala Sitharaman (@nsitharaman) November 2, 2022
ನಿರ್ಮಲ ಸೀತಾರಾಮನ್ ಅವರ ಟ್ವೀಟ್ ಗೆ ನಟ ರಿಷಬ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹಣಕಾಸು ಸಚಿವರಿಗೆ ಧನ್ಯವಾದವನ್ನು ಸಹ ತಿಳಿಸಿದ್ದಾರೆ. ಬಿಡುಗಡೆಯಾದಾಗಿನಿಂದಲೂ ಇಂದಿಗೂ ಸಹ ಈ ಸಿನಿಮಾ ನಾನಾಕಡೆ ಹೌಸ್ ಫುಲ್ ಪ್ರದರ್ಶನವನ್ನು ತೋರಿಸುತ್ತಿದೆ. ಕೇವಲ 15 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಇಂದು 300 ಕೋಟಿಗಿಂತಲೂ ಅಧಿಕ ಹಣ ಸಂಪಾದಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
