ಭಾರತ ತಂಡದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾದಲ್ಲಿ ತಾವು ವಾಸಮಾಡುತ್ತಿದ್ದ ಮನೆಯನ್ನು ಗೋವಾ ಸರ್ಕಾರದ ಅನುಮತಿಯಿಲ್ಲದೆ ಮನೆ ಬಾಡಿಗೆಗೆ ಇದೆ ಎಂದು ಆನ್ಲೈನ್ ನಲ್ಲಿ ಜಾಹಿರಾತು ನೀಡಿದ್ದಾರೆ. ಇದೀಗ ಗೋವಾ ಅಧಿಕಾರಿಗಳು ಯುವರಾಜ್ ಸಿಂಗ್ ಅವರಿಗೆ ನೋಟೀಸ್ ನೀಡಿದ್ದಾರೆ.
ಯುವರಾಜ್ ಸಿಂಗ್ ಗೋವಾದ ಮೊರ್ಜಿಮ್ನಲ್ಲಿ ಐಷಾರಾಮಿ ಕಟ್ಟಡ ಹೊಂದಿದ್ದಾರೆ. ಕಾಸಾ ಸಿಂಗ್ ಹೆಸರಿನ ಈ ಐಷಾರಾಮಿ ವಿಲ್ಲಾವನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಸಿಂಗ್ ಆನ್‌ಲೈನ್‌ನಲ್ಲಿ ಜಾಹಿರಾತು ನೀಡಿದ್ದರು. ಆದರೆ ಗೋವಾ ಕಾನೂನಿನ ಪ್ರಕಾರ, ಮನೆಯನ್ನು ಬಾಡಿಗೆಗೆ ನೀಡುವುದಕ್ಕೂ ಮೊದಲು ಗೋವಾ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಇಷ್ಟೇಅಲ್ಲದೆ ಟೂರಿಸ್ಟ್ ಟ್ರೇಡ್ ಆಕ್ಟ್-1982 ರ ಗೋವಾ ನೋಂದಣಿ ಪ್ರಕಾರ ನೋಂದಣಿ ಮಾಡಬೇಕು.
Goa Tourism Department issued notice to former cricketer Yuvraj Singh yesterday and initiated proceedings under the Registration of Tourist Trade Act for failure to register his villa, situated in Varchawada, Morjim, with the department: Department of Tourism, Goa
(File pic) pic.twitter.com/nppvoWp2Hr
— ANI (@ANI) November 23, 2022
ಆದರೆ ಇಷ್ಟೆಲ್ಲಾ ಕ್ರಮಗಳನ್ನು ಅನುಸರಿಸದೆ ಯುವಿ ಮನೆ ಬಾಡಿಗೆಗೆ ನೀಡಲಾಗುವುದು ಎಂದು ಜಾಹಿರಾತಿನಲ್ಲಿ ತಿಳಿಸಿದ್ದರು. ಇದೀಗ ಯುವಿ ಅವರ ಜಾಹಿರಾತಿಗೆ ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಪ್ರಕಾರ ನೋಂದಣಿ ಮಾಡದೆ ಬಾಡಿಗೆಗೆ ಜಾಹೀರಾತು ನೀಡುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.
ಇದಲ್ಲದೆ ಇದೀಗ ಯುವಿ ಅವರಿಗೆ ಗೋವಾ ಸರ್ಕಾರದ ಅನುಮತಿ ಪಡೆಯದೆ ಜಾಹಿರಾತು ನೀಡಿದ್ದಕ್ಕಾಗಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ ಮತ್ತು ವಿಚಾರಣೆಗೆ ಡಿ.8ರಂದು ಮುಂಜಾನೆ 11 ಗಂಟೆಗೆ ಹಾಜರಾಗುವಂತೆ ತಿಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
