fbpx
ಸಮಾಚಾರ

ನವೆಂಬರ್ 24: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 24, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಮಾರ್ದಶಿರ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪ್ರತಿಪತ್ : Nov 24 04:27 am – Nov 25 01:37 am; ದ್ವಿತೀಯಾ : Nov 25 01:37 am – Nov 25 10:35 pm
ನಕ್ಷತ್ರ : ಅನುರಾಧ: Nov 23 09:37 pm – Nov 24 07:37 pm; ಜ್ಯೇಷ್ಠ: Nov 24 07:37 pm – Nov 25 05:21 pm
ಯೋಗ : ಅತಿಗಂಡ: Nov 23 03:39 pm – Nov 24 12:19 pm; ಸುಕರ್ಮ: Nov 24 12:19 pm – Nov 25 08:43 am
ಕರಣ : ಕಿಮ್ಸ್ತುಗ್ನ: Nov 24 04:27 am – Nov 24 03:04 pm; ಬಾವ: Nov 24 03:04 pm – Nov 25 01:37 am; ಬಾಲವ: Nov 25 01:38 am – Nov 25 12:07 pm

Time to be Avoided
ರಾಹುಕಾಲ : 1:31 PM to 2:56 PM
ಯಮಗಂಡ : 6:25 AM to 7:50 AM
ದುರ್ಮುಹುರ್ತ : 10:12 AM to 10:58 AM, 02:44 PM to 03:30 PM
ವಿಷ : 12:41 AM to 02:08 AM
ಗುಳಿಕ : 9:16 AM to 10:41 AM

Good Time to be Used
ಅಮೃತಕಾಲ : 10:05 AM to 11:33 AM
ಅಭಿಜಿತ್ : 11:43 AM to 12:28 PM

Other Data
ಸೂರ್ಯೋದಯ : 6:26 AM
ಸುರ್ಯಾಸ್ತಮಯ : 5:46 PM

 

 

 

 

ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುವಿರಿ. ಈ ಬಗ್ಗೆ ಜಾಗ್ರತೆಯಿಂದ ಇರಿ. ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ.

 

ಒತ್ತಡದಲ್ಲಿ ಸಿಲುಕಿಕೊಳ್ಳುವ ಸಂಭವ ಜಾಸ್ತಿ ಇದೆ. ಯೋಚಿಸದೆ ಯಾರಿಗೂ ಹಣ ಅಥವಾ ಮಾತು ಕೊಡಲು ಮುಂದಾಗದಿರಿ. ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಸ್ಮರಿಸಿಕೊಳ್ಳಿ.

 

ಸ್ವಾಭಿಮಾನಿಗಳಾದ ನೀವು ಸಾಧಿಸಬೇಕಾದ ಕೆಲಸವನ್ನು ಪೂರ್ಣಗೊಳಿಸುವಿರಿ. ಇದರಿಂದ ನೀವಷ್ಟೇ ಅಲ್ಲದೆ ನಿಮ್ಮ ಕುಟುಂಬದ ಸದಸ್ಯರು ಸಂತೋಷಪಡುವರು. ಆದರೆ ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಇರಲಿ.

 

ಸಿಟ್ಟಿಗೆ ಬುದ್ಧಿ ಕೊಡದಿರಿ. ನಿಮ್ಮ ಮಾತುಕತೆಯಲ್ಲಿ ತಪ್ಪು ನುಸುಳದಂತೆ ಎಚ್ಚರ ವಹಿಸಿ. ಎದುರು ವ್ಯಕ್ತಿಯ ಜೊತೆ ವ್ಯವಹರಿಸುವಾಗ ಹುಷಾರಾಗಿರಿ. ಆಂಜನೇಯ ಸ್ವಾಮಿಯ ಸ್ಮರಣೆ ಮಾಡಿ.

 

 

ಕಿರಿಕಿರಿಗಳಿಂದ ಪಾರಾಗಲು ಅಪಾರವಾದ ತಾಳ್ಮೆಯಿರಲಿ. ತಂತಾನೇ ಕೆಲವು ಪರಿಹಾರದ ಮಾರ್ಗೋಪಾಯಗಳು ಲಭಿಸುವುವು. ಇಷ್ಟ ದೇವರನ್ನು ಆರಾಧಿಸಿ.

 

 

ವ್ಯಕ್ತಿತ್ವದ ವಿಚಾರದಲ್ಲಿ ಹೊಸ ಎತ್ತರ ಪಡೆಯಲು ಸಂಬಂಧಿಕರು ಸಹಾಯ ಮಾಡುವರು. ಇದರಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಲಿವೆ. ಆತ್ಮೀಯರು ನಿಮ್ಮನ್ನು ಸನ್ಮಾನಿಸುವ ಸಾಧ್ಯತೆ ಇದೆ.

 

 

ಮಾಡಿದ್ದುಣ್ಣೊ ಮಹರಾಯ ಎಂಬ ಸಂಗತಿ ನೆನಪಿಡಿ. ಇದರಿಂದ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕಾಗುವುದು. ಆದಷ್ಟು ಉಡಾಫೆ ಮಾತುಗಳನ್ನು ಆಡದಿರಿ. ಇದರಿಂದ ನಿಮ್ಮ ಗೌರವಕ್ಕೆ ಚ್ಯುತಿ ಬರುವುದು.

 

 

ಆತ್ಮೀಯ ಬಂಧುಗಳು ತಗಾದೆ ಎಬ್ಬಿಸಬಹುದು. ಜಾಗ್ರತೆಯಿಂದ ಇರಿ. ಮನೆತನದ ಕೆಲವು ವಿಚಾರಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಇದ್ದದ್ದನ್ನು ಇದ್ದಂತೆ ಬೇರೆಯವರ ಮುಂದೆ ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವಿರಿ.

ಹಿಂದಿನ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇಡಿ. ಕಿರಿಕಿರಿ ಮಾಡುವವರನ್ನು ನಿಯಂತ್ರಿಸಿ. ಜಯವಿರುವವರೆಗೂ ಭಯವಿಲ್ಲ. ಧೈರ್ಯವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಯಶಸ್ಸು ನಿಮ್ಮದಾಗುವುದು.

 

 

ಕೆಲವು ಸಮಸ್ಯೆಗಳು ಎದುರಾಗುವವು. ಅವುಗಳನ್ನು ಹೆಚ್ಚಿನ ತೊಂದರೆಯಿಲ್ಲದೆ ಎದುರಿಸುವ ಶಕ್ತಿ ನಿಮಗೆ ಬರುವುದು. ಬರಬೇಕಾಗಿದ್ದ ಹಣಕಾಸು ಬರುವುದು.

 

ಬಾಳಸಂಗಾತಿ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಅಂತೆಯೇ ಹೆತ್ತ ತಂದೆ ತಾಯಿಯ ಮಾತನ್ನು ನಡೆಸಿಕೊಡುವುದು ಒಳ್ಳೆಯದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.

 

ಹಠ ಯಾರಿಗೂ ಒಳ್ಳೆಯದಲ್ಲ. ನಿಮ್ಮ ಹಠದಿಂದ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಬರುವುದು. ಒಂದು ವೇಳೆ ಕೋಪ, ಹಠವನ್ನು ನಿಯಂತ್ರಿಸಿಕೊಳ್ಳದೆ ಇದ್ದಲ್ಲಿ ತೊಂದರೆ ಅನುಭವಿಸುವಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top