ಇತ್ತೀಚಿನ ದಿನಗಳಲ್ಲಿ ಹಲವಾರು ವಿದೇಶಿಯರು ಕನ್ನಡದಲ್ಲಿ ಮಾತನಾಡುವ ವಿಡಿಯೋ ಎಲ್ಲ ಕಡೆ ಸಕತ್ ವೈರಲ್ ಆಗುತ್ತಿದೆ. ಇದೀಗ ಜರ್ಮನಿಯ ಒಂದು ಹುಡುಗಿ ಕನ್ನಡದಲ್ಲಿ ತರಕಾರಿಯನ್ನು ಮಾರಾಟ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇದೀಗ ಈ ವಿಡಿಯೋ ಗೆ ಅಪಾರವಾದ ಮೆಚ್ಚುಗೆ ಸಹ ವ್ಯಕ್ತವಾಗಿದೆ.
View this post on Instagram
ಜೆನ್ನಿ ಎಂಬ ಜರ್ಮನಿಯ ಹುಡುಗಿ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ತನ್ನನ್ನು ತಾನು ವಿಡಿಯೋ ಕ್ರಿಯೇಟರ್, ಡ್ಯಾನ್ಸರ್ ಮತ್ತು ಆ್ಯಕ್ಟರ್ ಎಂದು ಹೇಳಿಕೊಂಡಿದ್ದಾಳೆ. ಇವರು ಹಂಚಿಕೊಂಡಿರುವ ಒಂದು ವಿಡಿಯೋ ದಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಸಂಜೆಹೊತ್ತಿನಲ್ಲಿ ತೆಂಗಿನಕಾಯಿ ಮಾರಲು ಕುಳಿತಿದ್ದಾಳೆ. ಒಂದು ತೆಂಗಿನಕಾಯಿಗೆ ರೂ. 20 ಎನ್ನುತ್ತಿದ್ದಾಳೆ. ಅಲ್ಲಿಗೆ ಬಂದ ಗ್ರಾಹಕ ರೂ. 50ಕ್ಕೆ ಮೂರು ಕೊಡುತ್ತೀರಾ ಎಂದು ಕೇಳುತ್ತಾನೆ. ಬೆಳಗ್ಗೆ ನಾಲ್ಕು ಗಂಟೆಗೆ ಬನ್ನಿ ಎನ್ನುತ್ತಾಳೆ ಆಕೆ. ಯಾಕೆ ಎನ್ನುತ್ತಾನೆ ಗ್ರಾಹಕ. ಏಕೆಂದರೆ ಬೆಳಗ್ಗೆ ಎಲ್ಲಾ ಬಂದ್ ಇರುತ್ತದೆ ಎನ್ನುತ್ತಾಳೆ. ಇದೀಗ ಇವರ ಕನ್ನಡ ಪ್ರೇಮಕ್ಕಾಗಿ ನೆಟ್ಟಿಗರು ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
View this post on Instagram
ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಇವರು ‘ಭವಿಷ್ಯದಲ್ಲಿ ನಾನು ನನ್ನದೇ ಆದ ಒಂದು ಅಂಗಡಿಯನ್ನು ನಡೆಸಬಹುದಾ, ಏನಂತೀರಿ? ಅಂದಹಾಗೆ ಈ ಅಂಗಡಿ ಇರುವುದು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ. ಅಲ್ಲಿ ಪೂಜೆಗೆ ಸಂಬಂಧಿಸಿದ ಎಲ್ಲ ಸಾಮಾನುಗಳೂ ಸಿಗುತ್ತವೆ’ ಎಂದು ಬರೆದುಕೊಂಡಿದ್ದಾರೆ.
ಇದೀಗ ಇವರ ಕನ್ನಡ ಪ್ರೇಮಕ್ಕೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದು, ಎಷ್ಟು ಸ್ಪಷ್ಟವಾಗಿ ಕನ್ನಡ ಉಚ್ಚರಿಸಿದ್ದೀರಿ ಮೇಡಮ್, ಧನ್ಯವಾದ ನಿಮಗೆ, ನಿಮಗಿರುವ ಕನ್ನಡಾಭಿಮಾನ ಮೆಚ್ಚತಕ್ಕದ್ದು, ಇಲ್ಲಿಯೇ ಅನ್ನ ಉಂಡು ಇಲ್ಲಿಯೇ ನೀರು ಕುಡಿದು ಇಲ್ಲೇ ವಾಸಿಸುವವರಿಗೆ ಕನ್ನಡದ ಬಗ್ಗೆ ಸ್ವಾಭಿಮಾನವಿಲ್ಲವಲ್ಲ, ನೀವು ಹೋದ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟಿದ್ದಿರಿ ಎನ್ನಿಸುತ್ತದೆ, ಹೀಗೆ ಹಲವಾರು ರೀತಿ ಕಮೆಂಟ್ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
