ಪ್ರತಿಯೊಬ್ಬರ ಜೀವನದಲ್ಲೂ ಭಯ ಅನ್ನುವುದು ಇದ್ದೆ ಇರುತ್ತದೆ. ಭಯ ಇಲ್ಲದೆ ಇರುವ ವ್ಯಕ್ತಿ ಯಾರು ಇಲ್ಲ. ಆದರೆ ಕೆಲವರಿಗೆ ಸುಮ್ ಸುಮ್ಮನೆ ಭಯವಾಗುತ್ತದೆ. ಇದು ತಮ್ಮ ದಿನನಿತ್ಯದ ಜೀವನದಾದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಈ ರೀತಿ ಭಯ ಪಡಲು ಗ್ರಹಗಳು ಕೂಡ ಕಾರಣವಾಗಬಹುದು.
ನಾವು ಕೆಲವರನ್ನು ಗಮನಿಸಿದರೆ ಅವರು ಸದಾ ಮನಸ್ಸಿನಲ್ಲಿ ಕೆಲವೊಂದು ಭಯದಿಂದ ಕೂಡಿರುತ್ತಾರೆ. ಈ ರೀತಿ ಯಾವಾಗಲು ಭಯ ಪಡುತ್ತಿದ್ದರೆ ಅಂತವರನ್ನು ಮೊದಲು ವೈದ್ಯರ ಬಳಿ ತೋರಿಸಿವುದು ಸೂಕ್ತ. ಆದರೆ ಇದಕ್ಕೆ ಮತ್ತೊಂದು ಕಾರಣ ಗ್ರಹ. ಗ್ರಹಗಳ ಅಶುಭ ಪರಿಣಾಮಗಳಿಂದ ಅಜ್ಞಾತ ಭಯ ವ್ಯಕ್ತಿಯನ್ನು ಕಾಡತೊಡಗುತ್ತದೆ. ಹೀಗಾಗಿ ಯಾವ ಗ್ರಹಗಳ ಮೂಲಕ ಭಯ ಮತ್ತು ಭ್ರಮೆಯನ್ನು ಎದುರಿಸಬೇಕಾಗುತ್ತದೆ ಹಾಗೆ ಅದನ್ನು ತೊಡೆದು ಹಾಕುವುದು ಹೇಗೆ ಎಂದು ನಾವು ಈಗ ತಿಳಿಸುತ್ತೇವೆ.
ಅಜ್ಞಾತ ಭಯಕ್ಕೆ ಕಾರಣ ಯಾರು?
ಚಂದ್ರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಜ್ಞಾತ ಭಯಕ್ಕೆ ಕಾರಣ ಚಂದ್ರ. ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಭ್ರಮೆ ಮತ್ತು ಭಯವು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಚಂದ್ರನು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದಾಗ ಮನಸ್ಸಿನ ಗೊಂದಲವು ಭ್ರಮೆ ಮತ್ತು ಭಯದಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಚಂದ್ರನ ಮೇಲೆ ಶನಿಯ ಪ್ರಭಾವವಿದ್ದರೆ ಅಥವಾ ಚಂದ್ರ ಮತ್ತು ಕೇತುಗಳ ನಡುವೆ ಸಂಬಂಧವಿದ್ದರೆ ಕೂಡ ಮನಸ್ಸಿನಲ್ಲಿ ಭಯ ಮತ್ತು ಗೊಂದಲ ಹೆಚ್ಚಾಗುತ್ತದೆ.
ರಾಹು:
ಅಜ್ಞಾತ ಭಯಕ್ಕೆ ಮತ್ತೊಂದು ಕಾರಣ ರಾಹು. ರಾಹು ಗ್ರಹವೂ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹುವಿನ ದಶಾ ಸರಿಯಿಲ್ಲದಿದ್ದರೆ, ವ್ಯಕ್ತಿಯು ಭಯ, ಉದ್ವೇಗ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ. ಸಾಯಂಕಾಲ ಹುಟ್ಟಿದವರಿಗೆ ಉಳಿದವರಿಗಿಂತ ಹೆಚ್ಚು ಭಯ ಮತ್ತು ಭ್ರಮೆಯ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗುತ್ತಿದೆ.
ಪ್ರತಿಯೊಂದು ಸಮಸ್ಯೆಗೆ ಪರಿಹಾರ ಅಂತ ಇದ್ದೆ ಇರುತ್ತದೆ. ಹೀಗಾಗಿ ನಿಮಗೆ ನಿಮ್ಮ ಜಾತಕದಲ್ಲಿ ಚಂದ್ರ ಮತ್ತು ರಾಹು ಇದ್ದರೆ ನಿಮಗೆ ಭಯ ಮತ್ತು ಭ್ರಮೆ ಹೆಚ್ಚಾಗಿ ಕಾಣುತ್ತದೆ ಎಂದು ಹಳಬಹುದು. ಹೀಗಾಗಿ ನೀವು ಪರಿಹಾರ ಮಾಡಿಕೊಡಲು ಅನುಸರಿಸಬೇಕಾದ ಸುಲಭ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.
1. ಸೂರ್ಯನಿಗೆ ಜಲ ಅರ್ಪಣೆ : ಮುಂಜಾನೆ ಎದ್ದು ನಿತ್ಯ ಕರ್ಮವನ್ನು ಮುಗಿಸಿ ಸೂರ್ಯ ದೇವರಿಗೆ ಜಲವನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ಭಯ ಕಡಿಮೆಯಾಗುತ್ತದೆ. ಸೂರ್ಯ ದೇವರ ಆರಾಧನೆಯಿಂದ ಶುಭ ಫಲಿತಾಂಶ ಸಿಗುತ್ತದೆ.
2. ಶಿವನ ಪೂಜೆ : ಜಾತಕದಲ್ಲಿ ಚಂದ್ರ ಬಲ ಪಡೆಯುವುದು ಬಹಳ ಮುಖ್ಯ. ಜಾತಕದಲ್ಲಿ ಚಂದ್ರನ ಸ್ಥಾನ ದುರ್ಬಲವಾಗಿರುವವರು ಸೋಮವಾರದಂದು ಶಿವನನ್ನು ಪೂಜಿಸಬೇಕು. ಸೋಮವಾರ ಶಿವನ ಪೂಜೆ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ.
3. ಭಯ ದೂರ ಮಾಡುತ್ತೆ ನೆಲ್ಲಿಕಾಯಿ ಬೇರು : ನಿತ್ಯ ಜೀವನವನ್ನು ಭಯ ಹಾಳು ಮಾಡ್ತಿದೆ ಎಂದಾದ್ರೆ ನೀವು ಭಯವನ್ನು ಹೋಗಲಾಡಿಸಲು ಆಶ್ಲೇಷ ನಕ್ಷತ್ರದಂದು ಬಲಗೈಗೆ, ನೆಲ್ಲಿಕಾಯಿ ಗಿಡದ ಬೇರನ್ನು ಧರಿಸಬೇಕು. ಇದು ಪ್ರಯೋಜನಕಾರಿ ಪರಿಹಾರವಾಗಿದೆ. ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗುವ ಎಲ್ಲಾ ಭಯಗಳು ದೂರವಾಗುತ್ತವೆ.
4. ಆಹಾರದ ಬಗ್ಗೆ ಇರಲಿ ಗಮನ : ನೀವು ಸೇವನೆ ಮಾಡುವ ಆಹಾರ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಹೆಚ್ಚು ಭಯ, ಆತಂಕ ಎನ್ನುವವರು ಮಾಂಸಾಹಾರ, ಅಮಲು ಪದಾರ್ಥಗಳು ಮತ್ತು ಅತಿಯಾದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು.
5. ಉಪವಾಸ ಮಾಡಿ : ಆತಂಕವಿದೆ ಎನ್ನುವವರು ಪ್ರತಿ ತಿಂಗಳ ಎರಡೂ ಏಕಾದಶಿಯಂದು ಉಪವಾಸ ವೃತ ಮಾಡಬೇಕು.
6. ಹನುಮಂತನ ಸ್ಮರಣೆ : ಹನುಮಾನ್ ಚಾಲೀಸಾವನ್ನು ಪ್ರತಿ ದಿನ ಪಠಿಸುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿರುವ ಭಯ ಕಡಿಮೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
