fbpx
ಸಮಾಚಾರ

ತೆರೆಮೇಲೆ ಬರಲಿದೆ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬಯೋಪಿಕ್! ಆಕ್ಷನ್ ಕಟ್ ಹೇಳಲಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ

ಇತ್ತೀಚಿನ ದಿನಗಳಲ್ಲಿ ಹಲವಾರು ಮಹಾನ್ ವ್ಯಕ್ತಿಗಳ ಬಯೋಪಿಕ್ ಗಳು ಬರುತ್ತಿದೆ. ಇದರಲ್ಲಿ ಕೆಲವು ಬಯೋಪಿಕ್ ಗಳು ಪ್ರೇಕ್ಷಕರಿಗೆ ಇಷ್ಟವಾದರೆ ಮತ್ತೊಂದು ಪ್ರೇಕ್ಷಕರಲ್ಲಿ ಬೇಸರ ತಂದಿರುತ್ತದೆ. ಇದೀಗ ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಬಯೋಪಿಕ್ ತೆರೆಮೇಲೆ ಬರಲು ರೆಡಿಯಾಗುತ್ತಿದೆ. ಇದನ್ನು ರಾಷ್ಟ್ರಪ್ರಶಸ್ತಿ ವಿಜೇತರಾದ ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಖ್ಯಾತ ನಿರ್ದೇಶಕಿ ಸುಧಾ ತಮಿಳಿನ ಸೂರರೈ ಪೊಟ್ರು ಸಿನಿಮಾ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಇದೆ ಸಿನಿಮಾಕ್ಕಾಗಿ ಇವರಿಗೆ ಅತ್ಯುತ್ತಮ ನಿರ್ದೇಶಕಿ ಎಂಬ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಇದೀಗ ಇಷ್ಟೊಂದು ಸಾಧನೆ ಮಾಡಿರುವ ನಿರ್ದೇಶಕಿ ರತನ್ ಟಾಟಾ ಅವರ ಬಯೋಪಿಕ್ ಅನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತೀಚಿಗೆ ಬಂದಿರುವ ಮಾಹಿತಿಯ ಪ್ರಕಾರ ರತನ್ ಟಾಟಾ ಅವರ ಜೀವನ ಚರಿತ್ರೆಯ ಕುರಿತು ಸಿನಿಮಾ ಮಾಡಲು ಸುಧಾ ಅವರು ಈಗಾಗಲೇ ತಯಾರಿಯನ್ನು ಮಾಡಿಕೊಂಡಿದ್ದಾರಂತೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಕೂಡ ಮುಗಿದಿದ್ದು ಮುಂದಿನ ವರ್ಷದ ಕೊನೆಯಲ್ಲಿ ಈ ಸಿನಿಮಾ ಸೆಟ್ ಏರುವ ಎಲ್ಲಾ ಸಾದ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾದಲ್ಲಿ ರತನ್ ಟಾಟಾ ಅವರ ಪಾತ್ರವನ್ನು ಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಅಥವಾ ತಮಿಳು ಸ್ಟಾರ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ಆದರೆ ಪ್ರೇಕ್ಷಕರಿಗೆ ರತನ್ ಟಾಟಾ ಅವರ ಬಯೋಪಿಕ್ ಅನ್ನು ಸಹ ನೋಡುವ ಅವಕಾಶ ಸಿಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top