fbpx
ಸಮಾಚಾರ

ಸ್ಟೈಲಿಶ್ ಐಕಾನ್ ಮಹೇಶ್ ಬಾಬು ವಿಗ್ ಧರಿಸುತ್ತಾರೆ? ಸ್ಪೋಟಕ ರಹಸ್ಯ ಬಿಚ್ಚಿಟ್ಟ ಮೇಕಪ್ ಮ್ಯಾನ್

ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಜೀವನದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಕೇವಲ ಒಂದು ವರ್ಷದಲ್ಲಿ ತಮ್ಮ ತಾಯಿ ಮತ್ತು ತಂದೆ ಇಬ್ಬರನ್ನು ಕಳೆದುಕೊಂಡಿದ್ದಾರೆ. ಹೀಗಾಗಲೇ ಮಹೇಶ್ ಬಾಬು ಬಹಳ ನೋವಿನಲ್ಲಿದ್ದಾರೆ. ಇದೀಗ ಈ ನೋವಿನ ಮದ್ಯೆ ಇದೀಗ ಮತ್ತೊಂದು ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ.

ಸ್ಟೈಲಿಶ್ ಐಕಾನ್ ಎಂದೇ ಪ್ರಖ್ಯಾತರಾಗಿರುವ ಮಹೇಶ್ ಬಾಬು ಅವರಿಗೆ ಕೂದಲಿಲ್ಲ. ಇವರು ವಿಗ್ ಧರಿಸುತ್ತಾರೆ ಎಂಬ ಸುದ್ದಿ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಮಹೇಶ್ ಬಾಬು ಅವರ ಕೂದಲು ಇಲ್ಲದೆ ಇರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿತ್ತು. ಇದೀಗ ಇದರ ಕುರಿತು ಮೆಹೆಶ್ ಬಾಬು ಅವರ ಮೇಕಪ್ ಮ್ಯಾನ್ ಚೆಬ್ರೋಲು ಮಾಧವ್ ರಾವ್ ಬಿಚ್ಚಿಟಿದ್ದಾರೆ.

ಮೇಕಪ್ ಮ್ಯಾನ್ ಚೆಬ್ರೊಲು ಅನೇಕ ವರ್ಷಗಳಿಂದ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆ ಇದ್ದಾರೆ. ಕೃಷ್ಣ ಅವರು ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಜೊತೆಯಲ್ಲೇ ಇದ್ದಾರೆ. ಕೃಷ್ಣ ಅವರ ಸಾಕಷ್ಟು ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಕೃಷ್ಣ ಅವರ ಬಗ್ಗೆ ಮಾತನಾಡಿದ ಚೆಬ್ರೊಲು ಕೃಷ್ಣ ಅವರಿಗೆ ಮೊದಲು ಉದ್ದವಾದ ಕೂದಲು ಇತ್ತು. ಜುಟ್ಟು ಬಿಟ್ಟುಕೊಂಡೆ ನಟಿಸುತ್ತಿದ್ದರು. ಬಳಿಕ ತಲೆ ಕೂದಲು ಉದುರಲು ಪ್ರಾರಂಭವಾಯಿತು. ಕೂದಲು ತುಂಬಾ ತೆಳ್ಳಗಾದಾಗ ವಿಧಿ ಇಲ್ಲದೇ ವಿಗ್ ಮೊರೆ ಹೋದರು’ ಎಂದು ಹೇಳಿದರು. ಕೃಷ್ಣ ಅವರ ಬಗ್ಗೆ ಮಾತ್ರವಲ್ಲದೆ ಪುತ್ರ ಮಹೇಶ್ ಬಾಬು ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ.

ಇವರ ಪ್ರಕಾರ ಮಹೇಶ್ ಬಾಲನಟನಾಗಿದ್ದಾಗ ನಾನು ಆತನಿಗೆ ಮೇಕಪ್ ಮಾಡಿದ್ದೀನಿ. ನಂತರ ನನ್ನ ಸೋದರಳಿಯ ಪಟ್ಟಾಬಿ ಮೇಕಪ್ ಹಾಕಲು ಆರಂಭಿಸಿದ. ಮಹೇಶ್ ಆರಂಭದಲ್ಲಿ ವಿಗ್ ಧರಿಸುತ್ತಿರಲಿಲ್ಲ. ಆದರೆ ಕೂದಲು ತೀರ ಉದುರಿ ತೆಳ್ಳಗಾದ ಮೇಲೆ ವಿಗ್ ಧರಿಸಲು ಪ್ರಾರಂಭಿಸಿದರು. ಅನೇಕ ಸಿನಿಮಾಗಳಲ್ಲಿ ವಿಗ್ ಬಳಸಿದ್ದಾರೆ’ ಎಂದು ಹೇಳಿದ್ದಾರೆ. ಆದರೆ ಮಹೇಶ್ ಬಾಬು ವಿಗ್ ಧರಿಸುತ್ತಾರೆ ಎಂಬ ಸುದ್ದಿಯನ್ನು ಮಾತ್ರ ಇವರ ಫ್ಯಾನ್ಸ್ ಒಪ್ಪುತ್ತಿಲ್ಲ. ಹೀಗಾಗಿ ಇದರ ಕುರಿತು ಸ್ವತಃ ಮಹೇಶ್ ಬಾಬು ಅವರು ಪ್ರತಿಕ್ರಿಯೆ ನೀಡುವ ತನಕ ಕಾಯಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top