fbpx
ಸಮಾಚಾರ

ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥ ಫೋಟೋ ವೈರಲ್! ವಿದ್ಯಾಭರಣ್ ರಹಸ್ಯ ಬಿಚ್ಚಿಟ್ಟು ಗಂಭೀರ ಆರೋಪ ಮಾಡಿದ ನಟಿ

ಇತ್ತೀಚಿಗೆ ಕಿರುತೆರೆ ನಟಿ ವೈಷ್ಣವಿ ಮತ್ತು ವಿದ್ಯಾಭರಣ್ ಅವರ ನಿಶ್ಚಿತಾರ್ಥದ ಫೋಟೋ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿತ್ತು. ಹೀಗಾಗಿ ಅಭಿಮಾನಿಗಳು ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಶುಭ ಹಾರೈಸುತ್ತಿದ್ದರು. ಆದರೆ ಇದೀಗ ಇವೆಲ್ಲದರ ಮದ್ಯೆ ಒಂದು ಆಡಿಯೋ ಸಕತ್ ವೈರಲ್ ಆಗುತ್ತಿದೆ.

ಆಡಿಯೋದಲ್ಲಿ ಏನಿದೆ?
ವ್ಯಕ್ತಿಯೊಬ್ಬರಿಗೆ ಕರೆ ಮಾಡಿರುವ ನಟಿ, ಅವನು ಒಂದೇ ಒಂದು ಡಬ್ಬಾ ಸಿನಿಮಾದಲ್ಲಿ ನಟಿಸಿದ್ದಾನೆ. ಅದು ಒಂದು ವಾರ ಸಹ ಹೆಸರು ಮಾಡಲಿಲ್ಲ. ಅವನ ನಿಜವಾದ ಹೆಸರು ವಿದ್ಯಾಭರಣ್ ಅಂತಾ ಹಳ್ಳಿಯಿಂದ ಬಂದು ಇಲ್ಲೇ ಮನೆ ಕಟ್ಟಿಕೊಂಡಿದ್ದಾನೆ, ಒಂದು ಸಾಯಿಬಾಬಾ ಟೆಂಪಲ್ ಇದೆ. ತನ್ನ ಇನ್ಸ್‌ ಸ್ಟಾಗ್ರಾಮ್ ಖಾತೆಯಿಂದ ಅನೇಕ ಹುಡುಗಿಯರಿಗೆ ಮೆಸೇಜ್ ಮಾಡಿದ್ದಾನೆ. ಈಗ 3-4 ಸಾವಿರ ಫಾಲೋವರ್ಸ್ ಇದ್ದ ಆ ಖಾತೆಯೇ ಇಲ್ಲ. ಹುಡ್ಗಿಯರಿಗೆ ಮೆಸೇಜ್ ಮಾಡ್ತಾ ನಾನು ನಿಮ್ಮನ್ನ ಮದುವೆ ಆಗ್ತಿನಿ, ಡೇಟ್ ಮಾಡೋಣ? ಅಂತಾ ಕರೆದಿದ್ದಾನೆ.

ಫ್ಯಾಶನ್ ಡಿಸೈನರ್ ಒಬ್ಬರನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಹೆಂಡತಿ ಆಗೋಳು ಅಂತಾ ಪರಿಚಯ ಮಾಡಿಸಿದ್ದಾನೆ. ನಂತರ ಬ್ರೇಕಪ್ ಮಾಡಿಕೊಂಡಿದ್ದಾನೆ. ಹಾಗೆಯೇ ನನಗೂ ಮೆಸೇಜ್ ಮಾಡಿ, ತುಂಬ ಇಷ್ಟ ಆಗಿದ್ದೀರಾ, 150 ಕೋಟಿ ಆಸ್ತಿಯಿದೆ, ಆಡಿ ಕಾರ್‌ ಇದೆ. ಟೆಂಪಲ್ ಇದೆ ಎಂದು ಹೇಳಿಕೊಂಡಿದ್ದ. ಡೇಟ್ ಮಾಡಲು ಕರೆದಿದ್ದ. ನಾನು ಆಗಲ್ಲ ಎಂದು ಹೇಳಿದೆ. ಇದಲ್ಲದೇ ರಾಜಕಾರಣಿಗಳ ಹೆಸರು ಬಳಸಿಕೊಂಡು ಹೆದರಿಸುವ ಕೆಲಸವನ್ನು ಆತ ಮಾಡಿದ್ದಾನೆ ಅನ್ನೋ ಅನೇಕ ಆರೋಪಗಳನ್ನ ಮಾಡಿದ್ದಾರೆ.

ಇದೀಗ ಈ ಆಡಿಯೋ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ. ಇದೀಗ ಆಡಿಯೋದಲ್ಲಿ ಮಾತಂದಿರುವ ಹುಡುಗಿ ಯಾವುದೇ ಕಾರಣಕ್ಕೂ ವೈಷ್ಣವಿ ಅವರಿಗೆ ಮೋಸವಾಗಬಾರದು ಎಂದು ಹೇಳಿದ್ದಾರೆ. ಇದಲ್ಲದೆ ಈ ನಿಶ್ಚಿತಾರ್ಥದ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ನಟಿ ವೈಷ್ಣವಿ ಇದು ಯಾವುದೇ ನಿಶ್ಚಿತಾರ್ಥದ ಫೋಟೋವಲ್ಲ ನಾನು ಇನ್ನು ಈ ಹುಡುಗನನ್ನು ಒಪ್ಪಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top