fbpx
ಸಮಾಚಾರ

ಭಾರತದಲ್ಲಿ ನಡೆಯಲಿದೆ 2023 ಏಕದಿನ ವಿಶ್ವಕಪ್! ನೇರವಾಗಿ ಆಯ್ಕೆಯಾದ ಟಾಪ್-7 ತಂಡಗಳ ಪಟ್ಟಿ ಇಲ್ಲಿದೆ

2023 ರಲ್ಲಿ ನಡೆಯಲಿದೆ ICC ಏಕದಿನ ವಿಶ್ವಕಪ್. ಈ ಬಾರಿ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಸೇರಿ ಒಟ್ಟು 7 ತಂಡಗಳು ಆಯ್ಕೆಯಾಗಿದೆ. ICC ರಾಂಕಿಂಗ್ ಪಟ್ಟಿಯಲ್ಲಿ ಟಾಪ್ 7 ತಂಡಗಳು ಈಗಾಗಲೇ ವಿಶ್ವಕಪ್ ನಲ್ಲಿ ಭಾಗವಹಿಸಲಿದ್ದಾರೆ.

ಹೀಗಾಗಿ ಇನ್ನು ಒಂದು ತಂಡ ಇದೀಗ ಆಯ್ಕೆಯಾಗಬೇಕಿದೆ. ಇದೀಗ ಲಿಸ್ಟ್ ನಲ್ಲಿರುವ ತಂಡಗಳು ಎಂದರೆ ವೆಸ್ಟ್ ಇಂಡೀಸ್, ಐರ್ಲೆಂಡ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಸರಣಿಗಳು ಈ ತಂಡದ ಆಯ್ಕೆಯ ಮೇಲೆ ನಿಂತಿದೆ. ಹೀಗಾಗಿ ಈ ನಾಲ್ಕರಲ್ಲಿ ಒಂದು ತಂಡ ಟಾಪ್ 8 ಹಂತ ತಲುಪಲಿದೆ.

2023 ಏಕದಿನ ವಿಶ್ವಕಪ್ ಗೆ ಆಯ್ಕೆಯಾದ ಟಾಪ್-7 ತಂಡಗಳ ಪಟ್ಟಿ ಇಲ್ಲಿದೆ:
1- ಭಾರತ
2- ಇಂಗ್ಲೆಂಡ್
3- ನ್ಯೂಜಿಲೆಂಡ್
4- ಆಸ್ಟ್ರೇಲಿಯಾ
5- ಬಾಂಗ್ಲಾದೇಶ್
6- ಪಾಕಿಸ್ತಾನ್
7- ಅಫ್ಘಾನಿಸ್ತಾನ್

ಇನ್ನುಳಿದ 4 ತಂಡಗಳು ಅಂದರೆ ವೆಸ್ಟ್ ಇಂಡೀಸ್, ಐರ್ಲೆಂಡ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳಲ್ಲಿ ಒಂದು ತಂಡ ನೇರವಾಗಿ ಟಾಪ್-8 ತಲುಪಲಿದೆ. ಇದಾದ ನಂತರ ಉಳಿದ 5 ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಬೇಕಾಗುತ್ತದೆ. ಅರ್ಹತಾ ಸುತ್ತಿನಲ್ಲಿ 5 ಇತರೆ ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್​ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗಲಿದೆ. ಅದರಂತೆ 2023 ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top